ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನಗೊಳ್ಳಲಿದೆ: ಮಾಜಿ ಸೇನಾ ಮುಖ್ಯಸ್ಥ ಜನರಲ್

|

Updated on: Sep 12, 2023 | 10:55 AM

pakistan occupied kashmir: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಸೋಮವಾರ ಹೇಳಿದ್ದಾರೆ. ಇದೀಗ ಈ ಸುದ್ದಿ ದೇಶದೊಳಗೆ ಭಾರೀ ಚರ್ಚೆ ಕಾರಣವಾಗಿದೆ. "ಪಿಒಕೆ ತನ್ನದೇ ಆದ ಮೇಲೆ ಭಾರತದೊಂದಿಗೆ ವಿಲೀನಗೊಳ್ಳುತ್ತದೆ. ಸ್ವಲ್ಪ ಸಮಯ ಕಾಯಿರಿ " ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನಗೊಳ್ಳಲಿದೆ: ಮಾಜಿ ಸೇನಾ ಮುಖ್ಯಸ್ಥ ಜನರಲ್
ವಿಕೆ ಸಿಂಗ್
Follow us on

ದೌಸಾ, ಸೆ.12: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ (VK Singh) ಸೋಮವಾರ ಹೇಳಿದ್ದಾರೆ. ಇದೀಗ ಈ ಸುದ್ದಿ ದೇಶದೊಳಗೆ ಭಾರೀ ಚರ್ಚೆ ಕಾರಣವಾಗಿದೆ. ಪಿಒಕೆಯನ್ನು ಭಾರತದೊಂದಿಗೆ ವಿಲೀನಗೊಳಿಸಬೇಕು ಎಂಬ ನಿಮ್ಮ ಈ ಮಾತಿಗೆ, ಬಿಜೆಪಿಯ ನಿಲುವು ಏನು? ಜತೆಗೆ ಪಿಒಕೆಯಲ್ಲಿನ ಜನರ ಬೇಡಿಕೆಗಳೇನು? ಎಂಬ ಮಾಧ್ಯಮಗಳ ಪ್ರಶ್ನೆಗೆ ವಿಕೆ ಸಿಂಗ್​​ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

“ಪಿಒಕೆ ತನ್ನದೇ ಆದ ಮೇಲೆ ಭಾರತದೊಂದಿಗೆ ವಿಲೀನಗೊಳ್ಳುತ್ತದೆ. ಸ್ವಲ್ಪ ಸಮಯ ಕಾಯಿರಿ ” ಎಂದು ವಿಕೆ ಸಿಂಗ್ ಅವರು ರಾಜಸ್ಥಾನದ ದೌಸಾದಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಅಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಇನ್ನು ಚೀನಾ ಕಾಶ್ಮೀರ, ಅರುಣಾಚಲ ಪ್ರದೇಶ ಮತ್ತು ದಕ್ಷಿಣ ಚೀನಾ ಸಮುದ್ರ ಭಾಗದ ಕೆಲವು ವಿವಾದಿತ ಪ್ರದೇಶಗಳನ್ನು ಒಳಗೊಂಡಿರುವ ಅಕ್ಸಾಯ್ ಚಿನ್ ಪ್ರದೇಶಗಳನ್ನು ಚೀನಾ ತನ್ನ ಹೊಸ ಭೂ ನಕ್ಷೆಯಲ್ಲಿ ಗುರುತಿಸಿದೆ. ಈ ವಿಚಾರವಾಗಿ ವಿಕೆ ಸಿಂಗ್ ಅವರಿಂದ ಈ ಹೇಳಿಕೆ ಬಂದಿದೆ. ಚೀನಾದ ಈ ನಕ್ಷೆಗೆ ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್ ವಿರೋಧ ವ್ಯಕ್ತಪಡಿಸಿದ್ದು, ಚೀನಾ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಗೆ ಖಡಕ್ ಉತ್ತರ ನೀಡಿ ಬಾಯ್ಮುಚ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್

ಚೀನಾ ತನ್ನದಲ್ಲದ ಪ್ರದೇಶಗಳನ್ನು ಹೊಸ ನಕ್ಷೆಯಲ್ಲಿ ಗುರುತಿಸಿದೆ. ಚೀನಾದ ಈ ಕೆಟ್ಟ ಯೋಚನೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ. ಭಾರತದ ಪ್ರದೇಶಗಳನ್ನು ತನ್ನದ್ದು ಎಂದು ಹೇಳಿಕೊಳ್ಳುತ್ತಿರುವ ಚೀನಾ ಯಾವತ್ತೂ ಬದಲಾಗುವುದಿಲ್ಲ. ನಮ್ಮ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟವಾದ ನಿಲುವು ಇದೆ. ಇದೆಲ್ಲ ನಮ್ಮ ಪ್ರದೇಶ, ನೀವು ನಕ್ಷೆಯಲ್ಲಿ ತೋರಿಸಿದ ತಕ್ಷಣ ಅದು ನಿಮ್ಮದಾಗುವುದಿಲ್ಲ ಎಂದು ಎಸ್​​ ಜೈಶಂಕರ್​​ ಹೇಳಿದ್ದಾರೆ.

ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಸರ್ಕಾರ ಯಾವಾಗಲೂ ಸಮರ್ಥಿಸಿಕೊಂಡಿದೆ. ಇನ್ನು ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ಸಿಇಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್​​​ ಜೈಶಂಕರ್​​ ಅವರು ಪಾಕ್​​ ಸರ್ಕಾರ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆಗಿನ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಮುಂದೆ ತರಾಟೆಗೆ ತೆಗೆದುಕೊಂಡಿದ್ದರು. ಈ ಸಭೆಯಲ್ಲೂ ಪಿಒಕೆ ಭಾರತದ ನಿರ್ಧಾರ ಮತ್ತು ನಿಲುವು ಏನು ಎಂಬುದನ್ನು ಕೂಡ ಸ್ಪಷ್ಟವಾಗಿ ತಿಳಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ