ಸದಾಕಾಲ ಭಾರತದ ಜೊತೆ ಕಿರಿಕ್ ಮಾಡುತ್ತಲೇ ಇರುವ ಪಾಕ್ ಈಗ ದೆಹಲಿ ಚಲೋದ ವಿಷಯದಲ್ಲಿ ಮೂಗು ತೂರಿಸಿದೆ. ದೇಶದ ಆಂತರಿಕ ವಿಚಾರಗಳಲ್ಲಿ ಬೇರೆ ಯಾವುದೇ ದೇಶ ಮೂಗು ತೂರಿಸುವುದನ್ನು ಭಾರತ ಸಹಿಸುವುದಿಲ್ಲ. ಈ ಹಿಂದೆ ರೈತರ ಪ್ರತಿಭಟನೆ ಪ್ರಸ್ತಾಪಿಸಿದ್ದ ಕೆನಡಾ ಪ್ರಧಾನಿಗೂ ಭಾರತ ಖಡಕ್ ಪ್ರತಿಕ್ರಿಯೆಯನ್ನೇ ನೀಡಿತ್ತು.
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಹೃದಯಹೀನ’ ಎಂದು ಜರಿದಿದ್ದಾರೆ. ಪಂಜಾಬ್ ರೈತರ ಬಗ್ಗೆ ನರೇಂದ್ರ ಮೋದಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದಿರುವ ಫವಾದ್ ಹುಸೇನ್, ಭಾರತ ಸರ್ಕಾರವು ರೈತರ ನಡುವೆ ಕಂದಕ ಸೃಷ್ಟಿಸುತ್ತಿದೆ. ನರೇಂದ್ರ ಮೋದಿಯವರ ದೌರ್ಜನ್ಯ ವಿರೋಧಿಸುವವರನ್ನು ಪಾಕಿಸ್ತಾನ್ ಏಜೆಂಟ್ ಎಂದು ಕರೆಯಲಾಗುತ್ತಿದೆ ಎಂದಿದ್ದಾರೆ.
12th day of protests and Delhi is not even listening,seems Gujrati Hinduvata inspired BJP Government has no care for Punjabi farmers, shameful anti Punjab policies of Indian Govt are heartless, my heart goes for my punjabi farmer brothers on the other side of border.. https://t.co/SiDV0nVlro
— Ch Fawad Hussain (@fawadchaudhry) December 7, 2020
‘ಗಡಿಯ ಆಚೆಗಿರುವ ಪಂಜಾಬಿನ ಸಹೋದರರೇ’ ಎಂದು ಪಂಜಾಬ್ ರೈತರನ್ನು ಸಂಬೋಧಿಸಿರುವ ಅವರು, ಬಹುಶಃ ‘ಗುಜರಾತ್ ಹಿಂದುತ್ವ’ ಸರ್ಕಾರವನ್ನು ಪ್ರಭಾವಿಸಿರಬಹುದು. ಹೀಗಾಗಿ, 12ನೇ ದಿನಕ್ಕೆ ಮುಂದುವರೆದರೂ ಪಂಜಾಬ್ ರೈತರ ಕೂಗು ದೆಹಲಿಗೆ ಕೇಳುತ್ತಿಲ್ಲ. ನರೇಂದ್ರ ಮೋದಿ ನಿರ್ಧಾರಗಳು ಇಡೀ ಪ್ರದೇಶವನ್ನೇ ತೊಂದರೆಗೀಡು ಮಾಡುತ್ತಿವೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಅನ್ಯಾಯ ಎಲ್ಲೇ ಆಗುತ್ತಿದ್ದರೂ ಪ್ರತಿಭಟಿಸಬೇಕು. ಎಲ್ಲಾ ಭಾರತೀಯರು ಪಂಜಾಬ್ ರೈತರ ಪರ ನಿಲ್ಲಬೇಕು ಎಂದು ಫವಾದ್ ಸಲಹೆ ಮಾಡಿದ್ದಾರೆ.
Published On - 3:25 pm, Mon, 7 December 20