ದೆಹಲಿ ಏರ್​ಪೋರ್ಟ್​ ಬಳಿ ಇರುವ ರಾಡಿಸನ್ ಹೋಟೆಲ್ ಬಳಿ ಸ್ಫೋಟದ ಶಬ್ದ

ದೆಹಲಿಯಲ್ಲಿ ಕೇಳಿಬಂದ ಮತ್ತೊಂದು ಸ್ಫೋಟದ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ., ಆದರೆ ಈ ಬಾರಿ ಯಾವುದೇ ಬಾಂಬ್ ಸ್ಫೋಟಗೊಂಡಿಲ್ಲ ಬದಲಾಗಿ ಸ್ಫೋಟಗೊಂಡಿದ್ದು, ಬಸ್ಸಿನ ಹಿಂಬದಿ ಟೈರ್ ಎಂಬುದು ತಿಳಿದುಬಂದಿದೆ. ಮಾಹಿತಿ ಪ್ರಕಾರ, ಮಹಿಳೆಯೊಬ್ಬರು ಅಲ್ಲಿ ಸ್ಫೋಟದ ಶಬ್ದ ಕೇಳಿ ಪಿಸಿಆರ್​ಗೆ ಕರೆ ಮಾಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ದೆಹಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ.

ದೆಹಲಿ ಏರ್​ಪೋರ್ಟ್​ ಬಳಿ ಇರುವ ರಾಡಿಸನ್ ಹೋಟೆಲ್ ಬಳಿ ಸ್ಫೋಟದ ಶಬ್ದ
ದೆಹಲಿ ಪೊಲೀಸ್
Image Credit source: Shutterstock

Updated on: Nov 13, 2025 | 11:05 AM

ನವದೆಹಲಿ, ನವೆಂಬರ್ 13: ದೆಹಲಿ ಏರ್​ ಪೋರ್ಟ್​ ಬಳಿ ಇರುವ ಮಹಿಪಾಲ್ಪುರದಲ್ಲಿರುವ ರಾಡಿಸನ್ ಹೋಟೆಲ್ ಬಳಿ ಸ್ಫೋಟ(Blast)ದ ಶಬ್ದ ಕೇಳಿಬಂದಿದೆ. ಇದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕವನ್ನು ಹುಟ್ಟುಹಾಕಿತ್ತು. ಬೆಳಗ್ಗೆ 9.18ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು.

ಮಾಹಿತಿ ಪ್ರಕಾರ, ಮಹಿಳೆಯೊಬ್ಬರು ಅಲ್ಲಿ ಸ್ಫೋಟದ ಶಬ್ದ ಕೇಳಿ ಪಿಸಿಆರ್​ಗೆ ಕರೆ ಮಾಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ದೆಹಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ.

ಮಹಿಪಾಲ್ಪುರದ ರಾಡಿಸನ್ ಬಳಿಯಿಂದ ಸ್ಫೋಟವಾಗಿರುವ ಬಗ್ಗೆ ಕರೆ ಬಂದಿದ್ದು, ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಯಿತು. ಕರೆ ಮಾಡಿದವರನ್ನು ಸಂಪರ್ಕಿಸಲಾಯಿತು, ಅವರು ಗುರುಗ್ರಾಮಕ್ಕೆ ಹೋಗುವ ದಾರಿಯಲ್ಲಿದ್ದಾಗ, ದೊಡ್ಡ ಶಬ್ದ ಕೇಳಿಸಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಳದಲ್ಲಿ, ಅನುಮಾನಾಸ್ಪದ ಏನೂ ಕಂಡುಬಂದಿಲ್ಲ. ಸ್ಥಳೀಯ ವಿಚಾರಣೆಯ ಸಮಯದಲ್ಲಿ, ಧೌಲಾ ಕುವಾನ್ ಕಡೆಗೆ ಹೋಗುತ್ತಿದ್ದ ಡಿಟಿಸಿ ಬಸ್‌ನ ಹಿಂಭಾಗದ ಟೈರ್ ಸ್ಫೋಟಗೊಂಡಿದೆ ಮತ್ತು ಆದ್ದರಿಂದ ಶಬ್ದ ಬಂದಿದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. ಪರಿಸ್ಥಿತಿ ಸಾಮಾನ್ಯವಾಗಿದೆ ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬಾಬರಿ ಮಸೀದಿ ಕೆಡವಿದ್ದಕ್ಕೆ ಪ್ರತೀಕಾರ , ದೆಹಲಿಯ ಎನ್​ಸಿಆರ್​ನಲ್ಲಿ ಡಿ.6ರಂದು 6 ಕಡೆ ಸ್ಫೋಟಕ್ಕೆ ನಡೆದಿತ್ತು ಸಂಚು

ನವೆಂಬರ್ 10 ರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಮತ್ತು ಇತರ ಹಲವು ರಾಜ್ಯಗಳಲ್ಲಿ ಬೃಹತ್ ತಪಾಸಣೆಗಳು ನಡೆಯುತ್ತಿವೆ. ಆತ್ಮಹತ್ಯಾ ಬಾಂಬರ್ ಉಮರ್ ನಬಿ ಚಲಾಯಿಸುತ್ತಿದ್ದ ಕಾರು, ಕೆಂಪು ಕೋಟೆಯ ಹಳೆಯ ದೆಹಲಿ ಪ್ರದೇಶದ ಪಕ್ಕದಲ್ಲಿರುವ ಲಾಲ್ ಕಿಲಾ ಮೆಟ್ರೋ ನಿಲ್ದಾಣ (ಗೇಟ್ 1) ಬಳಿಯ ಜನದಟ್ಟಣೆಯ ಸಂಚಾರ ಪ್ರದೇಶದಲ್ಲಿ ಸ್ಫೋಟಗೊಂಡಿತ್ತು.

ಅಪಘಾತಕ್ಕೀಡಾದ ವಾಹನವನ್ನು ಬಿಳಿ ಬಣ್ಣದ ಹುಂಡೈ ಐ20 ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಕೇಂದ್ರವು ಈ ಘಟನೆಯನ್ನು ಭಯೋತ್ಪಾದಕ ಘಟನೆ ಎಂದು ಕರೆದಿದೆ. ಏತನ್ಮಧ್ಯೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣವನ್ನು ವಹಿಸಿಕೊಂಡಿದೆ, ಏಕೆಂದರೆ ತನಿಖೆಯಲ್ಲಿ ಸ್ಫೋಟಕಗಳಲ್ಲಿ ಅಮೋನಿಯಂ ನೈಟ್ರೇಟ್‌ನಂತಹ) ಬಳಸಲಾಗಿದೆಯೇ ಎಂದು ಪರಿಶೀಲಿಸುತ್ತಿದೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ