
ನವದೆಹಲಿ, ಫೆಬ್ರವರಿ 09: ಕೃತಕ ಬುದ್ಧಿಮತ್ತೆಯನ್ನು ನಿಮ್ಮ ಯಜಮಾನನನ್ನಾಗಿ ಮಾಡಿಕೊಂಡು, ಅದರ ಗುಲಾಮರಾಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ(Pariskha Pe Charcha) ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಪರೀಕ್ಷಾ ತಯಾರಿಯವರೆಗೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದಾರೆ. ತಂತ್ರಜ್ಞಾನ ಬಂದ ಪ್ರತಿಯೊಂದು ಯುಗದಲ್ಲೂ ಇಂತಹ ಚರ್ಚೆಗಳು ಉದ್ಭವಿಸುತ್ತವೆ, ನಾವು ಅದರ ಬಗ್ಗೆ ಭಯಪಡಬಾರದು. ಅದರ ಗುಲಾಮರಾಗಲು ನಾವು ಶ್ರಮಿಸಬಾರದು.ಅದು ನಮ್ಮ ಯಜಮಾನರಾಗಲು ನಾವು ಬಿಡುವುದಿಲ್ಲ.
ನೀವು ಅದರ ಗುಲಾಮರಾಗದಂತೆ ನೋಡಿಕೊಳ್ಳಬೇಕು. ಉದ್ಯೋಗಗಳ ಸ್ವರೂಪ ಬದಲಾಗುತ್ತಲೇ ಇರುತ್ತದೆ. ಆದ್ದರಿಂದ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ನಾವು ಭಯಪಡಬೇಕಾಗಿಲ್ಲ ಎಂದು ಸಲಹೆ ನೀಡಿದ್ದಾರೆ. ಬೋರ್ಡ್ ಪರೀಕ್ಷೆಗಳ ಒತ್ತಡದ ವಾತಾವರಣದ ನಡುವೆ, ಈ ಸಂಚಿಕೆಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಮಾನಸಿಕ ಉತ್ತೇಜನ ನೀಡುತ್ತದೆ.
ಪರೀಕ್ಷಾ ಪೆ ಚರ್ಚಾ 2026 ರ ಎರಡನೇ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ವಿದ್ಯಾರ್ಥಿಗಳೊಂದಿಗೆ ತಮ್ಮ ಸಂವಾದವನ್ನು ಪ್ರಾರಂಭಿಸಿದರು. ಛತ್ತೀಸ್‌ಗಢದ ವಿದ್ಯಾರ್ಥಿಯೊಬ್ಬರು ಭಾರತದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳ ಬಗ್ಗೆ ಕೇಳಿದರು. ಪ್ರಧಾನಿ ಮೋದಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು.
#WATCH | PM Narendra Modi shares traditional Chhattisgarh snacks Thethri and Khurmi with students during 2nd episode of the 9th edition of ‘Pariksha pe Charcha’.
Source: DD pic.twitter.com/Vud72qgLv8
— ANI (@ANI) February 9, 2026
ಸ್ಫೂರ್ತಿ ಮತ್ತು ಪ್ರೇರಣೆಯ ನಡುವೆ ಏನು ಆರಿಸಬೇಕು?
ಸ್ಫೂರ್ತಿಯ ಜೊತೆಗೆ ಶಿಸ್ತು ಕೂಡ ಅತ್ಯಗತ್ಯ ಎಂದು ಹೇಳಿದರು. ಶಿಸ್ತು ಇಲ್ಲದಿದ್ದರೆ, ಯಾವುದೇ ಸ್ಫೂರ್ತಿ ಕೆಲಸ ಮಾಡುವುದಿಲ್ಲ. ರೈತ ತನ್ನ ಪಕ್ಕದಲ್ಲಿರುವ ರೈತನಿಂದ ಸ್ಫೂರ್ತಿ ಪಡೆದು , ತಾನು ಕೂಡ ಸಂಪಾದಿಸುವ ಛಲ ಬೆಳೆಸಿಕೊಳ್ಳುತ್ತಾರೆ. ಶಿಸ್ತು ಇಲ್ಲದೆ, ಸ್ಫೂರ್ತಿ ಕೆಲಸ ಮಾಡುವುದಿಲ್ಲ, ನೋಡಿದಾಕ್ಷಣ ಸ್ಫೂರ್ತಿ ಸಿಗುವುದಿಲ್ಲ, ಆ ಹಾದಿಯಲ್ಲೇ ನಡೆಯುವುದು ಕೂಡ ಮುಖ್ಯವಾಗುತ್ತದೆ.
ಮತ್ತಷ್ಟು ಓದಿ: Pariksha Pe Charcha 2026: ಇಂದು ನಾನು ಕಷ್ಟಪಟ್ಟು ‘ವಿಕಸಿತ ಭಾರತ’ದ ಬುನಾದಿ ಹಾಕುತ್ತಿರುವುದು ನಿಮಗಾಗಿ
ಸ್ಟಾರ್ಟ್ಅಪ್ ಪ್ರಾರಂಭಿಸುವುದು ಹೇಗೆ?
ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ನೀವು ಸಣ್ಣ ಸ್ಟಾರ್ಟ್‌ಅಪ್ ಶುರು ಮಾಡಬಹುದು. ನೀವು ನಿಮ್ಮ ಅಧ್ಯಯನ ಮತ್ತು ನಿಮ್ಮ ವೃತ್ತಿಜೀವನ ಎರಡನ್ನೂ ಮುಂದುವರಿಸಲು ಬಯಸಿದರೆ, ನೀವು ಪ್ರತಿ ವಾರ ನಿಮ್ಮ ವೃತ್ತಿಜೀವನಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡಲು ಪ್ರಾರಂಭಿಸಬೇಕು ಎಂದರು.
ಈ ವರ್ಷ, ಮೊದಲ ಬಾರಿಗೆ, ಪರೀಕ್ಷಾ ಪೆ ಚರ್ಚಾ ಒಂದು ಸ್ವರೂಪವನ್ನು ಅಳವಡಿಸಿಕೊಂಡಿದೆ, ಇದರಲ್ಲಿ ಪ್ರಧಾನಿಯವರು ನಾಲ್ಕು ರಾಜ್ಯಗಳಾದ ತಮಿಳುನಾಡು, ಛತ್ತೀಸ್‌ಗಢ, ಗುಜರಾತ್ ಮತ್ತು ಅಸ್ಸಾಂನ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ