
Pariksha Pe Charcha
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗೆಗಿನ ಒತ್ತಡ, ಆತಂಕವನ್ನು ನಿವಾರಿಸುವ ದೃಷ್ಟಿಯಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2018ರಿಂದ ಪ್ರತಿ ವರ್ಷವೂ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಬಾರಿ ಫೆಬ್ರವರಿ 10ರಂದು ಬೆಳಗ್ಗೆ 11 ಗಂಟೆಗೆ ಚರ್ಚೆ ಆರಂಭವಾಗಲಿದೆ. ಇದರಲ್ಲಿ ಪೋಷಕರು ಕೂಡ ಮಕ್ಕಳ ಪರೀಕ್ಷೆ ಸಮಯದಲ್ಲಿ ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು, ಪೋಷಕರು ಹೇರುವ ಒತ್ತಡದಿಂದ ಮಕ್ಕಳ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಮಕ್ಕಳು ಸುಸೂತ್ರವಾಗಿ ನೆಮ್ಮದಿಯಿಂದ ಪರೀಕ್ಷೆ ಬರೆಯುವಲ್ಲ ಪೋಷಕರು ಹಾಗೂ ಶಿಕ್ಷಕರ ಪಾತ್ರವೇನು ಎಂಬುದರ ಕುರಿತಾಗಿ ಚರ್ಚಿಸಲಾಗುತ್ತದೆ. ಮಕ್ಕಳ ಹಲವು ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸುತ್ತಾರೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಕೇವಲ ಪ್ರಧಾನಿ ಮಾತ್ರ ಸಲಹೆ ನೀಡುತ್ತಿದ್ದರು ಆದರೆ ಈ ಬಾರಿ ಆಧ್ಯಾತ್ಮಿಕ ಗುರು ಸದ್ಗುರು, ನಟಿ ದೀಪಿಕಾ ಪಡುಕೋಣೆ, ಮೇರಿ ಕೋಂ ಸೇರಿದಂತೆ ಹಲವರು ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಪರೀಕ್ಷೆಯ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಾ ಕಾರ್ಯಕ್ರಮವು ಇದೇ ಫೆಬ್ರವರಿ 10 ರಂದು ನಡೆಯಲಿದೆ. ಈ ಕಾರ್ಯಕ್ರಮವು ಭಾರತ್ ಮಂಡಪಮ್ ನವದೆಹಲಿಯಲ್ಲಿ ನಡೆಯಲಿದ್ದು ಆಯ್ಕೆ ಮಾಡಲಾದ 2,500 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಒತ್ತಡ ಹೇರದೆ, ಆರೋಗ್ಯಕರ ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದು ಹೇಗೆ ಎನ್ನುವುದನ್ನು ಇಲ್ಲಿ ಪೋಷಕರು ಕಲಿಯಬಹುದು.ಪ್ರಧಾನಿಯವರ ಪ್ರೇರಣೆ ತುಂಬಿದ ಮಾತುಗಳು ವಿದಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ
Pariksha Pe Charcha 2025: ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ, ವಿದ್ಯಾರ್ಥಿಗಳಿಗೆ ಕ್ರೀಡಾ ದಿಗ್ಗಜರ ಅಭಯ
ಪರೀಕ್ಷಾ ಪೆ ಚರ್ಚಾದ 7ನೇ ಸಂಚಿಕೆ ಇಂದು ಪ್ರಸಾರಗೊಂಡಿದೆ. ಕ್ರೀಡಾ ದಿಗ್ಗಜರು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ. ವಿದ್ಯಾರ್ಥಿಗಳು ಮೇರಿ ಕೋಮ್, ಅವನಿ ಲೇಖರಾ ಮತ್ತು ಸುಹಾಸ್ ಯತಿರಾಜ್ ಅವರೊಂದಿಗೆ ಸಂವಹನ ನಡೆಸಿದರು. ಪ್ಯಾರಾ-ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತ ಮತ್ತು ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್, ಶಾಲಾ ಪರೀಕ್ಷೆಯಾಗಿರಲಿ ಅಥವಾ ಜೀವನದಲ್ಲಿ ಸವಾಲಾಗಿರಲಿ, ಪ್ರತಿಯೊಂದು ಪರೀಕ್ಷೆಯೊಂದಿಗೆ ಬರುವ ಸವಾಲುಗಳ ಬಗ್ಗೆ ಮಾತನಾಡಿದರು.
- Nayana Rajeev
- Updated on: Feb 17, 2025
- 12:18 pm
ಪರೀಕ್ಷಾ ಪೇ ಚರ್ಚಾದಲ್ಲಿ ಸದ್ಗುರು: ಮಕ್ಕಳಿಗೆ ನೀಡಿದ ಟಿಪ್ಸ್ಗಳೇನು? ಇಲ್ಲಿವೆ ನೋಡಿ
ಪರೀಕ್ಷಾ ಪೇ ಚರ್ಚಾ 2025ರಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ನಿವಾರಿಸುವುದರ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣವು ಕೇವಲ ಪರೀಕ್ಷೆಗಳಲ್ಲ, ಜೀವನ ಕಲಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಪರೀಕ್ಷೆಗಳನ್ನು ಮೋಜಿನಿಂದ ಕೂಡಿಸುವುದು ಮತ್ತು ಧನಾತ್ಮಕ ಮನೋಭಾವವನ್ನು ಉಳಿಸಿಕೊಳ್ಳುವುದು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ಸದ್ಗುರು ಸಲಹೆ ನೀಡಿದ್ದಾರೆ.
- Vivek Biradar
- Updated on: Feb 15, 2025
- 11:11 am
8 ಎಪಿಸೋಡ್ಗಳಲ್ಲಿ ಪ್ರಸಾರವಾಗಲಿದೆ ಪರೀಕ್ಷಾ ಪೇ ಚರ್ಚೆ; ಮಿಸ್ ಮಾಡದೆ ನೋಡಿ ಎಂದ ಮೋದಿ
ಈ ವರ್ಷ ಪರೀಕ್ಷಾ ಪೇ ಚರ್ಚಾ ಕೇವಲ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಯುವುದಿಲ್ಲ. ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ವಿದ್ಯಾರ್ಥಿಗಳಿಗೆ ತಮ್ಮ ಬಾಲ್ಯದ ಅನುಭವಗಳನ್ನು, ಸವಾಲುಗಳನ್ನು ಹೇಳುವ ಮೂಲಕ ಸ್ಫೂರ್ತಿ ತುಂಬಲಿದ್ದಾರೆ. ಈಗಾಗಲೇ ಮೋದಿಯವರ ಸಂಚಿಕೆ ಪ್ರಸಾರವಾಗಿದ್ದು, ನಾಳೆ ಬೆಳಗ್ಗೆ ನಟಿ ದೀಪಿಕಾ ಪಡುಕೋಣೆ ಅವರ ಸಂಚಿಕೆ ಪ್ರಸಾರವಾಗಲಿದೆ. ಒಟ್ಟು 8 ಸಂಚಿಕೆಗಳಲ್ಲಿ ಈ ಬಾರಿಯ ಪರೀಕ್ಷಾ ಪೇ ಚರ್ಚೆ ಪ್ರಸಾರ ಕಾಣಲಿದೆ.
- Sushma Chakre
- Updated on: Feb 11, 2025
- 3:50 pm
‘ಪರೀಕ್ಷಾ ಪೆ ಚರ್ಚಾ’ದಲ್ಲಿ ಖಿನ್ನತೆ ಬಗ್ಗೆ ಮಾತನಾಡಿದ ದೀಪಿಕಾ; ಪ್ರಧಾನಿ ಮೋದಿಗೆ ಧನ್ಯವಾದ
‘ಪರೀಕ್ಷಾ ಪೆ ಚರ್ಚಾ’ದ ಎಂಟನೇ ಆವೃತ್ತಿಯಲ್ಲಿ ದೀಪಿಕಾ ಪಡುಕೋಣೆ ಅವರು ಭಾಗವಹಿಸಿದ್ದಾರೆ. ಪರೀಕ್ಷಾ ಒತ್ತಡ, ಖಿನ್ನತೆ ಮತ್ತು ಯಶಸ್ಸಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದ ನೆನಪುಗಳು, ಗಣಿತದಲ್ಲಿನ ತಮ್ಮ ದುರ್ಬಲತೆ ಮತ್ತು ಖಿನ್ನತೆಯನ್ನು ನಿಭಾಯಿಸಿದ ರೀತಿಯನ್ನು ಅವರು ವಿವರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸಲು ಸಲಹೆಗಳನ್ನು ನೀಡುವುದರ ಜೊತೆಗೆ, ಅವರು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಪ್ರಯತ್ನಿಸಿದ್ದಾರೆ.
- Rajesh Duggumane
- Updated on: Feb 11, 2025
- 2:50 pm
Pariksha Pe Charcha 2025: ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಉಪಯೋಗಿ ಹೊರತು ಬಿರುಗಾಳಿಯಲ್ಲ: ಮೋದಿ
ತಂತ್ರಜ್ಞಾನ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯೇ ಹೊರತು ಬಿರುಗಾಳಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದಿಂದಾಗಿಯೇ ಮಕ್ಕಳು ಹಾಳಾಗುತ್ತಿದ್ದಾರೆ, ನಿತ್ಯ ಸಿನೆಮಾ, ರೀಲ್ಸ್ಗಳನ್ನು ನೋಡುತ್ತಿದ್ದಾರೆ ಎಂದುಕೊಳ್ಳುವುದು ತಪ್ಪು, ಅದು ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸಿದೆ.
- Nayana Rajeev
- Updated on: Feb 10, 2025
- 12:51 pm
Pariksha Pe Charcha 2025: ಸೂರ್ಯ ಸ್ನಾನ, ರೈತರ ಆಹಾರ ಪದ್ಧತಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು: ಮೋದಿ
ಮಕ್ಕಳು ಸೂರ್ಯ ಸ್ನಾನ ಹಾಗೆಯೇ ರೈತರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಬೆಳಗ್ಗೆ ಹೊಟ್ಟ ತುಂಬಾ ಊಟ ಮಾಡುತ್ತಾರೆ, ಆಮೇಲೆ ಕೆಲಸ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಹೊಟ್ಟೆ ತುಂಬಾ ಊಟ ಇದು ಮನಸ್ಸನ್ನು ಕೂಡ ಶಾಂತವಾಗಿರುವುದಷ್ಟೇ ಅಲ್ಲದೆ ಆರೋಗ್ಯವನ್ನು ಕೂಡ ಉತ್ತಮ ರೀತಿಯಲ್ಲಿ ಕಾಪಾಡುತ್ತದೆ ಎಂದಿದ್ದಾರೆ.
- Nayana Rajeev
- Updated on: Feb 10, 2025
- 12:36 pm
Pariksha Pe Charcha 2025: ಮಕ್ಕಳನ್ನು ಮಾಡೆಲ್ ರೀತಿ ಪ್ರದರ್ಶನಕ್ಕಿಡಬೇಡಿ: ಪೋಷಕರಿಗೆ ಪ್ರಧಾನಿ ಮೋದಿ ಸಲಹೆ
ಮಕ್ಕಳನ್ನು ಮಾಡೆಲ್ಗಳಂತೆ ಪ್ರದರ್ಶನಕ್ಕಿಡಬೇಡಿ ಎಂದು ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಪೋಷಕರು ಬೇರೆಯ ಮಕ್ಕಳನ್ನು ನೋಡಿ ತಮ್ಮ ಮಕ್ಕಳು ಹೀಗೆಯೇ ಇರಬೇಕು, ಬೇರೆಯವರ ಮನೆಯ ಮಕ್ಕಳಂತೆಯೇ ಓದಬೇಕೆಂದು ಬಯಸಬೇಡಿ. ನಿಮ್ಮ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೋ ಅದೇ ವಿಚಾರಗಳನ್ನು ಓದಲು ಅನುವು ಮಾಡಿಕೊಡಿ ಎಂದಿದ್ದಾರೆ.
- Nayana Rajeev
- Updated on: Feb 10, 2025
- 12:36 pm
Pariksha Pe Charcha 2025: ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ, ವೀಕ್ಷಿಸುವುದ್ಹೇಗೆ?
ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗಿರುವ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಇಂದು ನಡೆಯಲಿದ್ದು, ಪ್ರಧಾನಿ ಮೋದಿ 36 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಮೋದಿ ಸಂವಾದದಲ್ಲಿ ಪರೀಕ್ಷೆಗಳು ಮತ್ತು ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಬಾರಿಯ ಸಂವಾದವನ್ನು ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೂರದರ್ಶನ ಮತ್ತು ಇತರ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ.
- Nayana Rajeev
- Updated on: Feb 10, 2025
- 9:08 am
ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್
Pariksha Pe Charcha 2025: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ಮಾತನಾಡಿ, ಇಂತಹ ದೊಡ್ಡ ಕಾರ್ಯಕ್ರಮವು ವಿಶ್ವದ ಯಾವುದೇ ದೇಶದಲ್ಲಿ ನಡೆದಿಲ್ಲ. ಪ್ರಧಾನಿ ಮೋದಿ ದೇಶದ ಕೋಟ್ಯಂತರ ಮಕ್ಕಳೊಂದಿಗೆ ಸಂಪರ್ಕ ಸಾಧಿಸುತ್ತಾರೆ ಮತ್ತು ಪರೀಕ್ಷೆಗಳ ಬಗ್ಗೆ ಚರ್ಚಿಸುವ ಮೂಲಕ ಅವರ ಒತ್ತಡವನ್ನು ನಿವಾರಿಸುತ್ತಾರೆ. ಅವರು ಅಣ್ಣ ಮತ್ತು ತಂದೆಯಂತೆ ನಮ್ಮ ನಡುವೆ ಬರುತ್ತಾರೆ, ನಮ್ಮನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಮಾರ್ಗದರ್ಶನ ಮಾಡುತ್ತಾರೆ ಎಂದಿದ್ದಾರೆ.
- Sushma Chakre
- Updated on: Feb 10, 2025
- 9:09 am
Pariksha Pe Charcha 2025: ಹೊಸ ಆಯಾಮದಲ್ಲಿ ಪರೀಕ್ಷಾ ಪೆ ಚರ್ಚಾ, ಮೋದಿ ಜತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು
ಪರೀಕ್ಷಾ ಪೆ ಚರ್ಚಾ 2025 ಕಾರ್ಯಕ್ರಮವನ್ನು ಫೆಬ್ರವರಿ 10 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 3.6 ಕೋಟಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ನೋಂದಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ, ಪ್ರಧಾನಿ ಮೋದಿ ಅವರೊಂದಿಗೆ, ಆಧ್ಯಾತ್ಮಿಕ ಗುರು ಸದ್ಗುರು, ನಟಿ ದೀಪಿಕಾ ಪಡುಕೋಣೆ, ಮೇರಿ ಕೋಮ್ ಮತ್ತು ಅವನಿ ಲೇಖರಾ ಅವರು ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಮತ್ತು ಒತ್ತಡ ಕಡಿಮೆ ಮಾಡುವ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ.
- Nayana Rajeev
- Updated on: Feb 10, 2025
- 9:09 am