Pariksha Pe Charcha 2025: ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಉಪಯೋಗಿ ಹೊರತು ಬಿರುಗಾಳಿಯಲ್ಲ: ಮೋದಿ
ತಂತ್ರಜ್ಞಾನ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯೇ ಹೊರತು ಬಿರುಗಾಳಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದಿಂದಾಗಿಯೇ ಮಕ್ಕಳು ಹಾಳಾಗುತ್ತಿದ್ದಾರೆ, ನಿತ್ಯ ಸಿನೆಮಾ, ರೀಲ್ಸ್ಗಳನ್ನು ನೋಡುತ್ತಿದ್ದಾರೆ ಎಂದುಕೊಳ್ಳುವುದು ತಪ್ಪು, ಅದು ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸಿದೆ.

ತಂತ್ರಜ್ಞಾನವು ನಿಮ್ಮನ್ನು ಕೆಡಗುವ ಅಪಾಯಕಾರಿ ಬಿರುಗಾಳಿಯಲ್ಲ. ನಾವೀನ್ಯತೆಗಳು ನಿಮ್ಮ ಒಳಿತಿಗಾಗಿಯೇ. ತಂತ್ರಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸಿ ಮತ್ತು ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಚಟುವಟಿಕೆಗಳನ್ನು ತಪ್ಪಿಸಿ ಎಂದು ಸಲಹೆ ನೀಡಿದರು.
ಪ್ರತಿಯೊಂದು ಮಗುವೂ ವಿಶೇಷ, ಅವರನ್ನು ಬೇರೆಯವರೊಂದಿಗೆ ಹೋಲಿಸಬೇಡಿ ಎಂದು ಅವರು ಹೇಳಿದರು. ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಮಗು ಸ್ವತಃ ಉತ್ತಮವಾಗಲು ಮತ್ತು ಮೊದಲಿಗಿಂತ ಉತ್ತಮವಾಗಲು ಪ್ರಯತ್ನಿಸುತ್ತದೆ. ನಿಮ್ಮ ಮಾನಸಿಕ ಚಿಂತೆಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಕಲಿಯಿರಿ. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ, ಕುಟುಂಬದ ಯಾವುದೇ ಸದಸ್ಯರೊಂದಿಗೆ ಮಾತನಾಡಿ ಎಂದು ಸಲಹೆ ನೀಡಿದರು.
ಮತ್ತಷ್ಟು ಓದಿ: Pariksha Pe Charcha 2025: ಸೂರ್ಯ ಸ್ನಾನ, ರೈತರ ಆಹಾರ ಪದ್ಧತಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು: ಮೋದಿ
ವಿದ್ಯಾರ್ಥಿಗಳು ಒತ್ತಡಕ್ಕೆ ಮಣಿಯಬಾರದು ಎಂದು ಸಲಹೆ ನೀಡಿದರು. ಒಬ್ಬ ಬ್ಯಾಟ್ಸ್‌ಮನ್ ಕ್ರೀಡಾಂಗಣದಲ್ಲಿ ಘೋಷಣೆಗಳು ಮತ್ತು ಗದ್ದಲವನ್ನು ನಿರ್ಲಕ್ಷಿಸಿ ಚೆಂಡಿನ ಮೇಲೆ ಕೇಂದ್ರೀಕರಿಸುವಂತೆಯೇ, ವಿದ್ಯಾರ್ಥಿಗಳು ಒತ್ತಡದ ಬಗ್ಗೆ ಯೋಚಿಸುವ ಬದಲು ಅಧ್ಯಯನದತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಶಾಲೆಯಲ್ಲಿ ಅಥವಾ ಜೀವನದಲ್ಲಿ ಯಶಸ್ಸು ಮತ್ತು ವೈಫಲ್ಯದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಒಂದು ಉದಾಹರಣೆಯನ್ನು ನೀಡುತ್ತಾ, ಕ್ರಿಕೆಟ್ ಆಟಗಾರರು ದಿನದ ಕೊನೆಯಲ್ಲಿ ತಮ್ಮ ತಪ್ಪುಗಳ ಬಗ್ಗೆ ಚಿಂತಿಸುತ್ತಾರೆ ಮತ್ತು ಅವುಗಳ ಮೇಲೆ ಕೆಲಸ ಮಾಡುತ್ತಾರೆ, ವಿದ್ಯಾರ್ಥಿಗಳು ಸಹ ಅದೇ ರೀತಿ ಮಾಡಬೇಕು ಎಂದು ಹೇಳಿದರು. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಯನ್ನು ಬಿಡಿಸುವುದರಿಂದ ಪರೀಕ್ಷೆ ಬಗೆಗಿನ ಭಯ ಸ್ವಲ್ಪ ಕಡಿಮೆಯಾಗುತ್ತದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Mon, 10 February 25