ಸಂಸತ್ತಿನಲ್ಲಿ ಭದ್ರತಾ ಲೋಪ: ಮಾಸ್ಟರ್​ಮೈಂಡ್​ ಲಲಿತ್​ ಝಾ ಬಂಧನ

|

Updated on: Dec 15, 2023 | 8:06 AM

ಸಂಸತ್ತಿನ ಭದ್ರತೆಯಲ್ಲಿ ಲೋಪ( Parliament Security Breach) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ಮೈಂಡ್​ ಲಲಿತ್​ ಝಾ(Lalit Jha)ರನ್ನು ಪೊಲೀಸರು ಬಂಧಿಸಿದ್ದಾರೆ.ಗುರುವಾರ ತಡರಾತ್ರಿ ಝಾ ಪೊಲೀಸರಿಗೆ ಶರಣಾಗಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದರು. ಬುಧವಾರ ಮಧ್ಯಾಹ್ನ ಲೋಕಸಭೆಯ ಶೂನ್ಯ ವೇಳೆಯಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಸ್ಮೋಕ್​ ಬಾಂಬ್​ ಎಸೆದಿದ್ದರು, ಇದರಿಂದ ಇಡೀ ಸದನವೇ ದಟ್ಟ ಹೊಗೆಯಿಂದ ಕೂಡಿತ್ತು.  ಸಾಗರ್​ ಹಾಗೂ ಮನೋರಂಜನ್ ಎಂಬುವವರನ್ನು ತಕ್ಷಣವೇ ಬಂಧಿಸಲಾಗಿತ್ತು.

ಸಂಸತ್ತಿನಲ್ಲಿ ಭದ್ರತಾ ಲೋಪ: ಮಾಸ್ಟರ್​ಮೈಂಡ್​ ಲಲಿತ್​ ಝಾ ಬಂಧನ
ಲಲಿತ್ ಝಾ
Image Credit source: Amarujala.com
Follow us on

ಸಂಸತ್ತಿನ ಭದ್ರತೆಯಲ್ಲಿ ಲೋಪ( Parliament Security Breach) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ಮೈಂಡ್​ ಲಲಿತ್​ ಝಾ(Lalit Jha)ರನ್ನು ಪೊಲೀಸರು ಬಂಧಿಸಿದ್ದಾರೆ.ಗುರುವಾರ ತಡರಾತ್ರಿ ಝಾ ಪೊಲೀಸರಿಗೆ ಶರಣಾಗಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದರು. ಬುಧವಾರ ಮಧ್ಯಾಹ್ನ ಲೋಕಸಭೆಯ ಶೂನ್ಯ ವೇಳೆಯಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಸ್ಮೋಕ್​ ಬಾಂಬ್​ ಎಸೆದಿದ್ದರು, ಇದರಿಂದ ಇಡೀ ಸದನವೇ ದಟ್ಟ ಹೊಗೆಯಿಂದ ಕೂಡಿತ್ತು.  ಸಾಗರ್​ ಹಾಗೂ ಮನೋರಂಜನ್ ಎಂಬುವವರನ್ನು ತಕ್ಷಣವೇ ಬಂಧಿಸಲಾಗಿತ್ತು.

ಹಾಗೂ ಸಂಸತ್ತಿನ ಹೊರಗೆ ಘೋಷಣೆ ಕೂಗುತ್ತಿದ್ದ ನೀಲಂ ಮತ್ತು ಅನ್ಮೋಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಲಲಿತ್ ಝಾ ತಲೆಮರೆಸಿಕೊಂಡಿದ್ದರು, ರಾಜಸ್ಥಾನದಲ್ಲಿ ಎಲ್ಲೋ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಗುರುವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂಸತ್ ಭವನಕ್ಕೆ ಹೋಗಲು ಪಾಸ್ ವ್ಯವಸ್ಥೆ ಮಾಡಿದ್ದರು. ಈ ಎಲ್ಲಾ ಆರೋಪಿಗಳು ಸಾಮಾಜಿಕ ಮಾಧ್ಯಮ ಗುಂಪು ಭಗತ್ ಸಿಂಗ್ ಫ್ಯಾನ್ ಕ್ಲಬ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಸಂಸತ್​ನಲ್ಲಿ ಭದ್ರತಾ ಲೋಪ: 8 ಸಿಬ್ಬಂದಿ ಅಮಾನತು

ಆರೋಪಿಗಳೆಲ್ಲರೂ ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿದ್ದರು
ಮೂಲಗಳ ಪ್ರಕಾರ ಆರೋಪಿಗಳೆಲ್ಲರೂ ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿದ್ದರು. ಜುಲೈನಲ್ಲಿ ಸಾಗರ್ ಲಕ್ನೋದಿಂದ ದೆಹಲಿಗೆ ಬಂದಿದ್ದರು, ಆದರೆ ಸಂಸತ್ ಭವನವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಡಿಸೆಂಬರ್ 10 ರಂದು ಉಳಿದ ಆರೋಪಿಗಳು ತಮ್ಮ ರಾಜ್ಯಗಳಿಂದ ದೆಹಲಿ ತಲುಪಿದ್ದಾರೆ. ಇಂಡಿಯಾ ಗೇಟ್ ಬಳಿ ಜಮಾಯಿಸಿದ ಅವರು ಬಣ್ಣಬಣ್ಣದ ಪಟಾಕಿಗಳನ್ನು ವಿತರಿಸಿದರು. ಸಂಸತ್ ಭವನದೊಳಗೆ ಆಕ್ಷೇಪಾರ್ಹ ವಸ್ತುಗಳನ್ನು ರಹಸ್ಯವಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 453, 153, 186, 353 ಮತ್ತು ಯುಎಪಿಎ ಸೆಕ್ಷನ್ 16 ಮತ್ತು 18 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ