ಭದ್ರತಾ ಲೋಪ, ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ​ ಅಮಾನತು

|

Updated on: Dec 14, 2023 | 12:36 PM

ಸಂಸತ್​ನಲ್ಲಿನ ಭದ್ರತಾ ಲೋಪದ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್​ರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅವರನ್ನು ಅಮಾನತಿನಲ್ಲಿರಿಸಲಾಗುತ್ತದೆ.

ಭದ್ರತಾ ಲೋಪ, ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ​ ಅಮಾನತು
ಡೆರೆಕ್ ಒಬ್ರಿಯಾನ್
Follow us on

ಸಂಸತ್​ನಲ್ಲಿನ ಭದ್ರತಾ ಲೋಪದ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್​(Derek O’brien)ರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅವರನ್ನು ಅಮಾನತಿನಲ್ಲಿರಿಸಲಾಗುತ್ತದೆ. ಸಂಸತ್ತಿನಲ್ಲಿ ಭದ್ರತಾ ಲೋಪದ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿವೆ. ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಸೃಷ್ಟಿಸುತ್ತಿದ್ದು, ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ. ಇದೇ ವೇಳೆ ರಾಜ್ಯಸಭಾ ಸಂಸದ ಡೆರೆಕ್​ ಅವರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಂಸದರ ಅಶಿಸ್ತಿನ ವರ್ತನೆಯನ್ನು ಖಂಡಿಸಿದ ಧಂಖರ್, ಇದು ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಹೇಳಿದರು. ಮೇಲ್ಮನೆಯು ಒಬ್ರಿಯಾನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ಪ್ರಸ್ತಾಪವನ್ನು ಅಂಗೀಕರಿಸಿತು.

ಮತ್ತಷ್ಟು ಓದಿ: ಸಂಸತ್​ನಲ್ಲಿ ಭದ್ರತಾ ಲೋಪ: 8 ಸಿಬ್ಬಂದಿ ಅಮಾನತು

ಬುಧವಾರ ಮಧ್ಯಾಹ್ನದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರಲ್ಲಿದ್ದಲ್ಲಿಗೆ ಇಬ್ಬರು ನುಗ್ಗಿದ್ದರು, ಬಳಿಕ ಅಶ್ರುವಾಯು ಸಿಡಿಸಿದ್ದರು. ಸಂಸತ್ತನಲ್ಲಿರುವ ಬಿಗಿ ಭದ್ರತೆಯ ಮಧ್ಯಯೆಯೂ ಶೂನಲ್ಲಿ ಈ ಕ್ರ್ಯಾಕರ್​ಗಳನ್ನು ಇರಿಸಿಕೊಂಡು ಬಂದಿದ್ದರು, ಇದು ಸಂಸತ್ತಿನ ದೊಡ್ಡ ಮಟ್ಟದ ಭದ್ರತಾ ಲೋಪ ಎಂದೇ ಹೇಳಬಹುದು. ಈ ವಿಚಾರವಾಗಿ ಡೆರೆಕ್ ಒಬ್ರಿಯಾನ್ ಸದನದ ಬಾವಿಗಿಳಿದು ಜೋರಾಗಿ ಮಾತನಾಡಿದ್ದರು.

ವಾಸ್ತವವಾಗಿ, ಡೆರೆಕ್ ಒಬ್ರಿಯಾನ್ ಸಂಸತ್ತಿನ ಭದ್ರತೆಯಲ್ಲಿನ ಲೋಪದ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದರು. ಆದರೆ ಈ ಕುರಿತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಟಿಎಂಸಿ ಸಂಸದರ ಹೆಸರನ್ನು ತೆಗೆದುಕೊಂಡು ತಕ್ಷಣವೇ ಸದನದಿಂದ ಹೊರಹೋಗುವಂತೆ ಆದೇಶಿಸಿದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:23 pm, Thu, 14 December 23