ಸಂಸತ್​ ಭದ್ರತೆ ಉಲ್ಲಂಘನೆ: ಆರೋಪಿ ಸಾಗರ್​ ಶರ್ಮಾ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ?

|

Updated on: Dec 15, 2023 | 9:47 AM

ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ(Security Breach)ಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಗಳ ಪೈಕಿ ಸಾಗರ್ ಶರ್ಮಾ( Sagar Sharma) ಅವರ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದೆ. ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ ಸಾಗರ್ ಶರ್ಮಾ ಹಾಗೂ ಮನೋರಂಜನ್ ಎಂಬ ಇಬ್ಬರು ಯುವಕರು ಸದನದೊಳಗೆ ನುಗ್ಗಿದ್ದರು, ಅಷ್ಟೇ ಅಲ್ಲದೆ ಅಶ್ರುವಾಯು ಸಿಡಿಸಿದ್ದರು. ಈ ಪ್ರಕರಣದಲ್ಲಿ ಸಧ್ಯ ಐವರನ್ನು ಬಂಧಿಸಲಾಗಿದೆ.

ಸಂಸತ್​ ಭದ್ರತೆ ಉಲ್ಲಂಘನೆ: ಆರೋಪಿ ಸಾಗರ್​ ಶರ್ಮಾ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ?
ಡೈರಿ
Image Credit source: Hindustan Times
Follow us on

ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ(Security Breach)ಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಗಳ ಪೈಕಿ ಸಾಗರ್ ಶರ್ಮಾ( Sagar Sharma) ಅವರ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದೆ. ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ ಸಾಗರ್ ಶರ್ಮಾ ಹಾಗೂ ಮನೋರಂಜನ್ ಎಂಬ ಇಬ್ಬರು ಯುವಕರು ಸದನದೊಳಗೆ ನುಗ್ಗಿದ್ದರು, ಅಷ್ಟೇ ಅಲ್ಲದೆ ಅಶ್ರುವಾಯು ಸಿಡಿಸಿದ್ದರು. ಈ ಪ್ರಕರಣದಲ್ಲಿ ಸಧ್ಯ ಐವರನ್ನು ಬಂಧಿಸಲಾಗಿದೆ.

ಇದೀಗ ಪರಿಶೀಲನೆ ವೇಳೆ ಆರೋಪಿ ಸಾಗರ್​ ಮನೆಯಲ್ಲಿ ಡೈರಿಯೊಂದು ಸಿಕ್ಕಿದ್ದು, ಈಗ ಮನೆಯಿಂದ ಹೋಗುವ ಸಮಯ ಎಂದು ಬರೆಯಲಾಗಿದೆ.
ಡೈರಿ ಅನೇಕ ಟಿಪ್ಪಣಿಗಳು, ದೇಶಭಕ್ತಿಯ ಕವನಗಳು ಮತ್ತು ಕ್ರಾಂತಿಕಾರಿ ಚಿಂತನೆಯನ್ನು ಒಳಗೊಂಡಿದೆ. 2015ರ ಸುಮಾರಿಗೆ ಸಾಗರ್ ಈ ಡೈರಿಯನ್ನು ಬರೆಯಲು ಶುರುಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ್​ನ ಪ್ರಕ್ಷುಬ್ಧ ಮನೋಭಾವವು ಜನವರಿ 2021 ರಿಂದ ಬಲವಾಗಿ ಪ್ರತಿಬಿಂಬಿತವಾಗಿದೆ. ಅವರ ಕುಟುಂಬವು ಆತ ಬೆಂಗಳೂರಿನಿಂದ ಹಿಂದಿರುಗಿದ ಅವಧಿಯನ್ನು ನೆನಪಿಸಿಕೊಂಡಿದ್ದಾರೆ,  ಆತ ಸಮಾನ ಮನಸ್ಸಿನ ಯುವಕರೊಂದಿಗೆ ಸಂಪರ್ಕದಲ್ಲಿದ್ದ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಸಂಸತ್​​ನೊಳಗೆ ನುಗ್ಗಿದ 4 ಆರೋಪಿಗಳು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಕುಟುಂಬದ ಪ್ರಕಾರ, ಸಾಗರ್ 2018 ರಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಹೋಗಿದ್ದ. ಸಾಂಕ್ರಾಮಿಕ ರೋಗದ ನಂತರ ಅವರು ಹಿಂತಿರುಗಿದ್ದ. 2015ರ ಜೂನ್ 8ರಂದು ಬರೆದ ಡೈರಿಯ ಮೊದಲ ಪುಟವು ಇಂಕ್ವಿಲಾಬ್ ಜಿಂದಾಬಾದ್​ನಿಂದ ಪ್ರಾರಂಭವಾಗುತ್ತದೆ.

ಡೈರಿಯಲ್ಲಿ 30ಕ್ಕೂ ಹೆಚ್ಚು ಹೆಸರುಗಳು ಹಾಗೂ ಫೋನ್​ ನಂಬರ್​ಗಳಿವೆ
ಸಾಗರ್ ಅವರ ಡೈರಿಯಲ್ಲಿ 30ಕ್ಕೂ ಹೆಚ್ಚು ಹೆಸರುಗಳು ಹಾಗೂ ಫೋನ್​ ನಂಬರ್​ಗಳಿವೆ, ಅವುಗಳಲ್ಲಿ ಹೆಚ್ಚಿನವು ಕಾರ್ಯನಿರ್ವಹಿಸುತ್ತಿಲ್ಲ.
ನಾನು ನನ್ನ ದೇಶಕ್ಕಾಗಿ ಹಾಗೂ ಅದರ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಮಾತ್ರ ಕೆಲಸ ಮಾಡುತ್ತೇನೆ. ಅತ್ಯಾಚಾರ, ಭ್ರಷ್ಟಾಚಾರ, ಕೊಲೆ, ಅಪಹರಣ, ಕಳ್ಳಸಾಗಣೆ ಮುಂತಾದ ವಿಚಾರಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಬರೆದಿದ್ದ.

ನಾನು ಶ್ರೀಮಂತನಲ್ಲ ಮಧ್ಯಮ ವರ್ಗದ ಕುಟುಂಬದವನು, ದೇಶಕ್ಕಾಗಿ ದುಡಿಯುವ ಪ್ರಾಮಾಣಿಕತೆ ಹೊಂದಿರುವ ಕೆಲವು ಸ್ನೇಹಿತರು ನನಗೆ ಬೇಕು ಎಂದು ಬರೆದಿದ್ದ. 2016ರಲ್ಲಿ ಮತ್ತೊಂದು ಕಡೆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಬರೆದಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ