ಶಾರ್ಟ್ ಸರ್ಕ್ಯೂಟ್ನಿಂದಾಗಿ ರೈಲಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಆಂಧ್ರಪ್ರದೇಶದ ಸತ್ಯವಾಡದಲ್ಲಿ ನಡೆದಿದೆ. ಬುಧವಾರ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಸತ್ಯವಾಡ ರೈಲು ನಿಲ್ದಾಣಕ್ಕೆ ನಿಡಧವೋಲುನಿಂದ ಹೊರಟಿದ್ದ ನರಸಪುರಂ ಪ್ಯಾಸೆಂಜರ್ ರೈಲಿನ ಬೋಗಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಮೂಲಗಳ ಪ್ರಕಾರ ರೈಲು ನಿಡದವೋಲುವಿನಿಂದ ನರಸಾಪುರಕ್ಕೆ ಹೋಗುತ್ತಿದ್ದಾಗ ತಣುಕು ಬಳಿ ಈ ಘಟನೆ ನಡೆದಿದೆ. ರೈಲಿನ ಮೇಲ್ಭಾಗದಲ್ಲಿ (ವಿದ್ಯುತ್ ಪ್ರಸರಣ ಮಾರ್ಗ ಮತ್ತು ರೈಲು ಇನ್‌ಪುಟ್ ನಡುವೆ) ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ, ರೈಲನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು. ನಂತರ ರೈಲನ್ನು ತಣುಕು ರೈಲು ನಿಲ್ದಾಣಕ್ಕೆ ಸ್ಥಳಾಂತರಿಸಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಮತ್ತಷ್ಟು ಓದಿ: ಬೆಂಗಳೂರು: ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ; ತಪ್ಪಿದ ಭಾರಿ ದುರಂತ
ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಉದ್ಯಾನ್ ಎಕ್ಸ್ಪ್ರೆಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಲಾಯಿತು. ಈ ರೈಲು ಮುಂಬೈನಿಂದ ಬೆಂಗಳೂರು ನಿಲ್ದಾಣದ ನಡುವೆ ಚಲಿಸುತ್ತದೆ ಮತ್ತು KSR ರೈಲು ನಿಲ್ದಾಣವು ಕೊನೆಯ ನಿಲುಗಡೆಯಾಗಿದೆ.
ಪ್ರಯಾಣಿಕರು ರೈಲಿನಿಂದ ಇಳಿದ ಎರಡು ಗಂಟೆಗಳ ನಂತರ ಬೆಂಕಿ ಅವಘಡ ಸಂಭವಿಸಿದೆ ಎಂದು ನೈಋತ್ಯ ರೈಲ್ವೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಅಗ್ನಿಶಾಮಕ ದಳ ಮತ್ತು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ ಹೊರಟ ರೈಲು ಸಂಖ್ಯೆ 11301 ಉದ್ಯಾನ್ ಎಕ್ಸ್‌ಪ್ರೆಸ್ ಶನಿವಾರ (ಆಗಸ್ಟ್ 19) ಬೆಳಗ್ಗೆ 5.45 ಕ್ಕೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣವನ್ನು ತಲುಪಿತು. ರಾತ್ರಿ 7.10ರ ಸುಮಾರಿಗೆ ರೈಲಿನ ಬಿ-1 ಮತ್ತು ಬಿ-2 ಬೋಗಿಗಳಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ