ಪತಂಜಲಿ ಸಂಸ್ಥೆಯ ಕೊರೊನಿಲ್ ಔಷಧ ವಿಚಾರವಾಗಿ ನನ್ನ ಮೇಲೆ ದಾಳಿ ನಡೆದಿದೆ. ನನ್ನ ಜಾತಿ, ಧರ್ಮ, ಸನ್ಯಾಸತ್ವದ ಬಗ್ಗೆಯೇ ಪ್ರಶ್ನಿಸಿದ್ದಾರೆ. ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆಯುರ್ವೇದಕ್ಕೆ ಸಂಬಂಧಿಸಿ ಕೆಲಸ ಮಾಡುವುದು ತಪ್ಪೇ? ಎಂದು ಯೋಗಗುರು ಬಾಬಾ ರಾಮ್‌ದೇವ್ ಪ್ರಶ್ನಿಸಿದ್ದಾರೆ.
ಕೊರೊನಿಲ್ ಔಷಧ ಸಂಬಂಧ ಆಯುಷ್ ಮಂತ್ರಾಲಯಕ್ಕೆ ಪೂರ್ಣ ಮಾಹಿತಿ ನೀಡಿದ್ದೇವೆ. ಅಲ್ಲದೆ, ಆಯುರ್ವೇದ ಔಷಧ ಪರವಾನಗಿ ಪಡೆದಿದ್ದೇವೆ ಎಂದರು.
7 ದಿನದಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ
ಕೊರೊನಿಲ್ ಔಷಧದಿಂದ 7 ದಿನದಲ್ಲಿ ಕೊರೊನಾ ಸೋಂಕಿತರು ಪೂರ್ತಿ ಗುಣಮುಖರಾಗಿದ್ದಾರೆ. ಆಯುಷ್ ಮಂತ್ರಾಲಯ ನಮ್ಮ ಪ್ರಯತ್ನವನ್ನ ಶ್ಲಾಘಿಸಿದೆ. 10 ದೊಡ್ಡ ರೋಗಗಳಿಗೂ ಔಷಧ ಕಂಡುಹಿಡಿಯುತ್ತಿದ್ದೇವೆ. ಅದರ ಸಂಶೋಧನೆ ಈಗಾಗಲೇ ಪೂರ್ಣಗೊಂಡಿದೆ.
ನಾವು ಯಾವುದೇ ತಪ್ಪು ಮಾಡಿಲ್ಲ. 10 ಸಾವಿರ ಕೋಟಿ ರೂ. ವೆಚ್ಚದ ಸಂಶೋಧನಾ ಕೇಂದ್ರದಲ್ಲಿ 500 ವಿಜ್ಞಾನಿಗಳು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಮೆಡಿಕಲ್ ಸೈನ್ಸ್ ಪ್ರೋಟೋಕಾಲ್ ಪ್ರಕಾರ ಸಂಶೋಧನೆ ಮಾಡುತ್ತಿದ್ದಾರೆ ಎಂದು ಬಾಬಾ ರಾಮ್‌ದೇವ್ ತಿಳಿಸಿದರು.