ಆಷಾಢ ಏಕಾದಶಿ ಪುಣ್ಯಸ್ನಾನ: ಗೋದಾವರಿ ನದಿಗಿಳಿದ ನಾಲ್ವರು ಯುವಕರು ಕೊಚ್ಚಿಹೋದರು

  • TV9 Web Team
  • Published On - 14:30 PM, 1 Jul 2020
ಆಷಾಢ ಏಕಾದಶಿ ಪುಣ್ಯಸ್ನಾನ: ಗೋದಾವರಿ ನದಿಗಿಳಿದ ನಾಲ್ವರು ಯುವಕರು ಕೊಚ್ಚಿಹೋದರು

ಹೈದರಾಬಾದ್‌: ಆಷಾಢ ಏಕಾದಶಿಯಂದು ನದಿಯಲ್ಲಿ ಸ್ನಾನ ಮಾಡಿದ್ರೆ ಪುಣ್ಯ ಬರುತ್ತೆ ಅಂತಾ ನಾಲ್ವರು ಯುವಕರು ನದಿಗಿಳಿದಾಗ ಮುಳುಗಿ ಸಾವನ್ನಪ್ಪಿರುವ ಘೋರ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ.

ಏಕಾದಶಿಯ ದಿನ ನದಿಯಲ್ಲಿ ಸ್ನಾನ ಮಾಡಿದ್ರೆ ಪುಣ್ಯ ಬರುತ್ತೆ ಎನ್ನುವುದು ಒಂದು ನಂಬಿಕೆ. ಹೀಗಾಗಿ ತೆಲಂಗಾಣದ ಜಯಶಂಕರ ಜಿಲ್ಲೆಯ ಲೆಂಕಲಗಡ್ಡ ಸಮೀಪದ ಪಲಿಮೇಲ ಮಂಡಲಂ ಬಳಿ ಗೋದಾವರಿ ನದಿಯಲ್ಲಿ ನಾಲ್ವರು ಯುವಕರು ನದಿಗಿಳಿದಿದ್ದಾರೆ. ಆದ್ರೆ ನದಿಯ ಆಳ ಮತ್ತು ನೀರಿನ ಸೆಳೆತಕ್ಕೆ ಸಿಲುಕಿ ಈ ನಾಲ್ವರೂ ಯುವಕರು ಕೊಚ್ಚಿಹೋಗಿದ್ದಾರೆ.

ಗೋದಾವರಿ ನದಿಯಲ್ಲಿ ಕೊಚ್ಚಿ ಹೋದ ಯುವಕರನ್ನ ಕಾರ್ತಿಕ್‌, ರವೀಂದರ್, ಪ್ರತಾಪ್ ಹಾಗೂ ಶ್ರೀಶೈಲ ಎಂದು ಗುರುತಿಸಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರು ಯುವಕರ ದೇಹಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.