ಅಕ್ರಮ ಮರಳುಗಾರಿಕೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಆಪ್ತ ಸುಭಾಷ್ ಯಾದವ್(Subhash Yadav) ಅವರನ್ನು ಮಾರ್ಚ್ 22 ರವರೆಗೆ ಪಾಟ್ನಾ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಮಾರ್ಚ್ 9 ರಂದು ಜಾರಿ ನಿರ್ದೇಶನಾಲಯವು ಆರ್‌ಜೆಡಿ ನಾಯಕನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶನಿವಾರ ತಡರಾತ್ರಿ ಯಾದವ್ ಅವರನ್ನು ಬಂಧಿಸಲಾಗಿದ್ದು, ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಲಾಲು ಪ್ರಸಾದ್ ಯಾದವ್ ಅವರ ಆಪ್ತ ಸಹಾಯಕನಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ ನಂತರ ಯಾದವ್ ಅವರನ್ನು ಬಂಧಿಸಿದ್ದರು.
ಶೋಧದ ವೇಳೆ ಸುಭಾಷ್ ಯಾದವ್ ಅವರನ್ನು ಬಂಧಿಸುವ ಮುನ್ನ ಇಡಿ ಅಧಿಕಾರಿಗಳು ಮರಳು ಗಣಿಗಾರಿಕೆ ಮತ್ತು ಇತರ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಕೇಂದ್ರ ಸಂಸ್ಥೆಯು ಸುಮಾರು 2.37 ಕೋಟಿ ರೂಪಾಯಿ ಮೌಲ್ಯದ ನಗದು ಪತ್ತೆಯಾಗಿದೆ.
ಮತ್ತಷ್ಟು ಓದಿ: ಲಾಲು ಬಯೋಪಿಕ್ನಲ್ಲಿ ನಟಿಸೋಕೆ ಪಂಕಜ್ ತ್ರಿಪಾಠಿ ಸೂಕ್ತ; ಶುರುವಾಗಿದೆ ಚರ್ಚೆ
ಸುಭಾಷ್ ಯಾದವ್ ಅವರ ನಿಕಟವರ್ತಿಗಳ ಡಿಜಿಟಲ್ ಸಾಧನಗಳನ್ನು ಇಡಿ ವಶಪಡಿಸಿಕೊಂಡಿದೆ. ಸುಭಾಷ್ ಅವರು ಬಿಹಾರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ ಮತ್ತು ಪಾಟ್ನಾದಲ್ಲಿ ಪ್ರಮುಖ ಮರಳು ವ್ಯಾಪಾರಿಯಾಗಿದ್ದಾರೆ.
ಅವರು ಬ್ರಾಡ್‌ಸನ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರೂ ಆಗಿದ್ದಾರೆ. ಬಿಹಾರ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯಿಂದ ಹಣ ವರ್ಗಾವಣೆ ಪ್ರಕರಣವು ಆರಂಭವಾಗಿತ್ತು.
ಸುಭಾಷ್ ಈ ಹಿಂದೆ 2019 ರ ಲೋಕಸಭೆ ಚುನಾವಣೆಯಲ್ಲಿ ಜಾರ್ಖಂಡ್‌ನ ಚತ್ರಾದಿಂದ ಸ್ಪರ್ಧಿಸಿದ್ದರು ಆದರೆ ವಿಫಲರಾಗಿದ್ದರು. ಎರಡು ವರ್ಷಗಳ ಹಿಂದೆ ಇಡಿ ಅವರ ನಿವೇಶನದ ಮೇಲೆ ದಾಳಿ ನಡೆಸಿತ್ತು ಮತ್ತು 2018 ರಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
ಈ ಪ್ರಕರಣದಲ್ಲಿ ಮೊದಲು, ಇಡಿ ಪಿಎಂಎಲ್‌ಎ ಅಡಿಯಲ್ಲಿ ಸಿಂಡಿಕೇಟ್ ಸದಸ್ಯ ರಾಧಾ ಚರಣ್ ಸಾಹ್, ಅವರ ಮಗ ಮತ್ತು ಬಿಎಸ್‌ಪಿಎಲ್ ನಿರ್ದೇಶಕರನ್ನು ಬಂಧಿಸಿತ್ತು. ಫೆಬ್ರವರಿಯಲ್ಲಿ, ಇಡಿ ತಾತ್ಕಾಲಿಕವಾಗಿ ರೂ ಮೌಲ್ಯದ ಎರಡು ಆಸ್ತಿಗಳನ್ನು ಜಪ್ತಿ ಮಾಡಿದೆ.
ಬ್ರಾಡ್ಸನ್ ಕಮಾಡಿಟೀಸ್ ಪ್ರೈವೇಟ್ ಮತ್ತು ಇತರರ ವಿರುದ್ಧ ಐಪಿಸಿ, 1860 ಮತ್ತು ಬಿಹಾರ ಮಿನರಲ್ (ರಿಯಾಯತಿ, ಅಕ್ರಮ ಗಣಿಗಾರಿಕೆ, ಸಾರಿಗೆ ಮತ್ತು ಸಂಗ್ರಹಣೆ) ನಿಯಮ 2019 ರ ವಿವಿಧ ವಿಭಾಗಗಳ ಅಡಿಯಲ್ಲಿ ಬಿಹಾರ ಪೊಲೀಸರು ದಾಖಲಿಸಿದ 19 ಎಫ್‌ಐಆರ್‌ಗಳನ್ನು ಆಧರಿಸಿ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ