ಪಾಟ್ನಾದಲ್ಲಿ ಜ.8ರವರೆಗೆ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ರಜೆ ಘೋಷಿಸಿದ ಬಿಹಾರ ಸರ್ಕಾರ; ಕೊವಿಡ್​ 19 ಕಾರಣಕ್ಕೆ ಖಂಡಿತ ಅಲ್ಲ !

| Updated By: Lakshmi Hegde

Updated on: Jan 02, 2022 | 7:47 PM

ನಿನ್ನೆಯಿಂದಲೇ ಬಿಹಾರದಲ್ಲಿ ಸಿಕ್ಕಾಪಟೆ ಇಬ್ಬನಿ ಬೀಳುತ್ತಿದೆ. ನಿನ್ನೆಯಂತೂ ಅಲ್ಲಿ ಸೂರ್ಯನ ಉಗಮವೂ ಸರಿಯಾಗಿ ಗೋಚರಿಸಲಿಲ್ಲ ಎಂದು ವರದಿಯಾಗಿದೆ. 

ಪಾಟ್ನಾದಲ್ಲಿ ಜ.8ರವರೆಗೆ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ರಜೆ ಘೋಷಿಸಿದ ಬಿಹಾರ ಸರ್ಕಾರ; ಕೊವಿಡ್​ 19 ಕಾರಣಕ್ಕೆ ಖಂಡಿತ ಅಲ್ಲ !
ಸಾಂಕೇತಿಕ ಚಿತ್ರ
Follow us on

ಬಿಹಾರ(Bihar)ದ ರಾಜಧಾನಿ ಪಾಟ್ನಾದಲ್ಲಿ ಜನವರಿ 8ರವರೆಗೆ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗೆ ರಜೆ ನೀಡುವುದಾಗಿ ಇಂದು ಬಿಹಾರ ಸರ್ಕಾರ ಘೋಷಣೆ ಮಾಡಿದೆ. ಆದರೆ ಶಾಲೆಗೆ ರಜೆ ಘೋಷಣೆ ಮಾಡಿದ್ದು ಕೊರೊನಾ ಕಾರಣದಿಂದ ಅಲ್ಲ. ಬದಲಿಗೆ ಇಲ್ಲಿ ತೀವ್ರವಾಗಿ ಶೀತಗಾಳಿ (Cold Wave) ಬೀಸುತ್ತಿರುವುದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.  ವಾಯುವ್ಯ ಭಾರತದಲ್ಲಿ ಮುಂದಿನ ಕೆಲವು ದಿನಗಳ ಕಾಲ ಶೀತಗಾಳಿ ಬೀಸಲಿದೆ ಎಂದು ಹಿಂದೆಯೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. 

ನಿನ್ನೆಯಿಂದಲೇ ಬಿಹಾರದಲ್ಲಿ ಸಿಕ್ಕಾಪಟೆ ಇಬ್ಬನಿ ಬೀಳುತ್ತಿದೆ. ನಿನ್ನೆಯಂತೂ ಅಲ್ಲಿ ಸೂರ್ಯನ ಉಗಮವೂ ಸರಿಯಾಗಿ ಗೋಚರಿಸಲಿಲ್ಲ ಎಂದು ವರದಿಯಾಗಿದೆ.  ಇದೀಗ ಉಂಟಾಗಿರುವ ಹೊಸದಾದ ಸಕ್ರಿಯ ಪಶ್ಚಿಮ ಅಡಚಣೆ ಮತ್ತು ಅದರ ಸಂಬಂಧಿ ಚಂಡಮಾರುತದ ಪರಿಚಲನೆಯಿಂದಾಗಿ, ಜನವರಿ 3ರಿಂದ ಭಾರತದ ವಾಯುವ್ಯ ಪ್ರದೇಶದ ಮೇಲೆ ಪ್ರಭಾವ ಉಂಟಾಗಲಿದೆ. ಇದರ ಕಾರಣದಿಂದ ಜ.3ರಿಂದ ಜ.7ರ ಅವಧಿಯಲ್ಲಿ ಹಲವು ಕಡೆಗಳಲ್ಲಿ ಮಳೆಯಾಗಬಹುದು ಅಥವಾ ಹಿಮಪಾತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಿಹಾರದಲ್ಲಿ ನಿನ್ನೆಯಿಂದ ಉಂಟಾಗಿರುವ ವಾತಾವರಣ ತುಂಬ ಚಳಿ ಸಹಿತವಾಗಿದೆ. ಹಗಲು ಹೊತ್ತಲ್ಲಿ (ಗರಿಷ್ಠ ತಾಪಮಾನ)ಯೇ ತಾಪಮಾನ ಅತ್ಯಂತ ಕೆಳ ಮಟ್ಟದಲ್ಲಿತ್ತು. ಬಿಹಾರದ ದಕ್ಷಿಣದಲ್ಲಿರುವ ಗಯಾದಲ್ಲಿ ನಿನ್ನೆ ಗರಿಷ್ಠ ತಾಪಮಾನ ಕೇವಲ 17.4 ಡಿಗ್ರೀ ಸೆಲ್ಸಿಯಸ್​​ನಷ್ಟಿತ್ತು. ಅಂದರೆ ಸಾಮಾನ್ಯವಾಗಿ ಇರುವ ತಾಪಮಾನಕ್ಕಿಂತಲೂ ಸುಮಾರು 5 ಡಿಗ್ರಿಗಳಷ್ಟು ಕಡಿಮೆಯಿತ್ತು ಎಂದು ಹೇಳಲಾಗಿದೆ. ಅದರು ಬಿಟ್ಟರೆ ಬಿಹಾರದ ಉತ್ತರ ಭಾಗದಲ್ಲಿರುವ ಭಾಗಲ್ಪುರದಲ್ಲಿ ಗರಿಷ್ಠ ತಾಪಮಾನ 17.6 ಡಿಗ್ರೀ ಸೆಲ್ಸಿಯಸ್​ ದಾಖಲಾಗಿದೆ.

ಇದನ್ನೂ ಓದಿ: 20 ಮಿಲಿಯನ್​ ವೀವ್ಸ್​, 5 ಲಕ್ಷ ಲೈಕ್ಸ್​ ಪಡೆದ ‘ಲೈಗರ್​’ ಗ್ಲಿಂಪ್ಸ್​; ವಿಜಯ್​ ದೇವರಕೊಂಡಗೆ ಫ್ಯಾನ್ಸ್​ ಉಘೇ ಉಘೇ