ಎಲ್ಒಸಿ ಬಳಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನನ್ನು ಕೊಂದು, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದ ಭಾರತೀಯ ಸೇನೆ
ಈ ಒಳನುಸುಳುವಿಕೆ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅಲ್ಲಿ ಕಾವಲು ಪಡೆ ಅದಾಗಲೇ ಚುರುಕಾಗಿತ್ತು. ಈತ ಶವದ ಬಳಿಯಿದ್ದ ಎಕೆ ರೈಫಲ್, ಶಸ್ತ್ರಾಸ್ತ್ರಗಳು, ಏಳು ಗ್ರೇನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿರುವ ಕೇರಣ್ ಸೆಕ್ಟರ್ನ ಬಳಿ ಲೈನ್ ಆಫ್ ಕಂಟ್ರೋಲ್ನಲ್ಲಿ ಭಾರತಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನ (Pakistan Army)ದ ವ್ಯಕ್ತಿಯೊಬ್ಬನನ್ನು ನಿನ್ನೆ ಭಾರತೀಯ ಸೇನೆ (Indian Army)ಹತ್ಯೆ ಮಾಡಿದೆ. ಆತನ ಮೃತದೇಹವನ್ನು ಪಾಕ್ ಸೈನ್ಯಕ್ಕೆ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಒಸಿ 28, ಪದಾತಿ ದಳದ ಮೇಜರ್ ಜನರಲ್ ಎಎಸ್ ಪೆಂಡರ್ಕರ್, ನಿನ್ನೆ ಬಿಎಟಿ (ಪಾಕಿಸ್ತಾನ ಸೇನೆಯ ಗಡಿ ಕಾರ್ಯಪಡೆ ತಂಡ) ಸದಸ್ಯನೊಬ್ಬ ನಿನ್ನೆ ಕೇರನ್ ವಲಯದಲ್ಲಿ ಎಲ್ಒಸಿ ಗಡಿ ನುಸುಳಲು ಪ್ರಯತ್ನ ಮಾಡಿದ. ಆದರೆ ಎಲ್ಒಸಿ(LOC) ಕಾಯುತ್ತಿದ್ದ ಯೋಧರು ಅದನ್ನು ವಿಫಲಗೊಳಿಸಿತು. ನುಸುಳಲು ಯತ್ನಿಸಿದ ಉಗ್ರನನ್ನು ನಮ್ಮ ಸೇನೆಯ ಯೋಧರು ಹತ್ಯೆ ಮಾಡಿದರು ಎಂದು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಬಲಿಯಾದವನನ್ನು ಮೊಹಮ್ಮದ್ ಶಬೀರ್ ಮಲ್ಲಿಕ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನ ಸೇನೆ ಗಡಿ ಕಾರ್ಯಪಡೆ (BAT)ಯ ಸಿಬ್ಬಂದಿ ಎಂದು ಮೂಲಗಳಿಂದ ತಿಳಿದುಬಂದಿದೆ. ಗಡಿಭಾಗದಲ್ಲಿ ಹಾಕಿದ್ದ ಬೇಲಿಯ ಬಳಿ ಭಾರತಕ್ಕೆ ಬರಲು ಯತ್ನಿಸುತ್ತಿದ್ದ. ಈ ವೇಳೆ ಯೋಧರು ಗುಂಡು ಹೊಡೆದ ಪರಿಣಾಮ ಆತ ಪಾಕಿಸ್ತಾನದ ಬದಿಯಲ್ಲೇ ಸತ್ತಿದ್ದಾನೆ ಎಂದು ಮೇಜರ್ ಜನರಲ್ ಮಾಹಿತಿ ನೀಡಿದ್ದಾರೆ. ಹಾಗೇ, ಆ ಶವ ಸದ್ಯ ನಮ್ಮ ವಶದಲ್ಲೇ ಇದ್ದು, ಅದನ್ನ ಕೊಂಡೊಯ್ಯುವಂತೆ ಪಾಕ್ ಸೈನ್ಯಕ್ಕೆ ತಿಳಿಸಲಾಗಿದೆ ಎಂದೂ ಹೇಳಿದ್ದಾರೆ.
ಈ ಒಳನುಸುಳುವಿಕೆ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅಲ್ಲಿ ಕಾವಲು ಪಡೆ ಅದಾಗಲೇ ಚುರುಕಾಗಿತ್ತು. ಈತ ಶವದ ಬಳಿಯಿದ್ದ ಎಕೆ ರೈಫಲ್, ಶಸ್ತ್ರಾಸ್ತ್ರಗಳು, ಏಳು ಗ್ರೇನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಸ್ಥಳದಲ್ಲಿ ಕಣ್ಗಾವಲು ವಹಿಸಲಾಗಿದೆ. ಪಾಕಿಸ್ತಾನ ಗಡಿ ಬಳಿ ಸದಾ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದೆ. ಮೃತ ವ್ಯಕ್ತಿಯ ಬಳಿ ಪಾಕಿಸ್ತಾನದ ಐಡಿ ಕಾರ್ಡ್ ಮತ್ತು ಕೊವಿಡ್ 19 ಲಸಿಕೆ ಸರ್ಟಿಫಿಕೇಟ್ ಸಿಕ್ಕಿದೆ. ಆತ ಪಾಕ್ ಆರ್ಮಿಯ ಸಿಬ್ಬಂದಿ ಎಂಬುದು ಅದರಲ್ಲೇ ಸ್ಪಷ್ಟವಾಗಿದೆ. ಪಾಕಿಸ್ತಾನಿ ಸೇನಾ ಸಮವಸ್ತ್ರದ ಫೋಟೋವೇ ಇದೆ.
ಇದನ್ನೂ ಓದಿ: ನಂದಿಬೆಟ್ಟದಲ್ಲಿ ಸಚಿವರ ಕಾರ್ಯಕ್ಷಮತೆ ಚಿಂತನ-ಮಂಥನ: ಆರ್.ಅಶೋಕ್