ನೆಲದ ಮೇಲೆ ಬಿದ್ದಿದ್ದ ಅತ್ತೆಯನ್ನು ಇರಿದು ಕೊಂದ ಸೊಸೆ; ಪಾರಾಗಲು ಮಾಡಿದ್ದು ಖತರ್ನಾಕ್ ಐಡಿಯಾ !
ಶಕಿಂಶಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತಳ ದೇಹವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಿದ್ದರು.
ತಿರುಚ್ಚಿ: ಅತ್ತೆಯನ್ನು ಕೊಂದು ಬೆಂಕಿ ಹಚ್ಚಿದ ಸೊಸೆ, ನಂತರ ಇದೊಂದು ಬೆಂಕಿ ದುರಂತದಿಂದ ಆದ ಸಾವು ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾಳೆ. ತಮಿಳುನಾಡಿನ ವಿಶ್ವಾಸ್ನಗರದಲ್ಲಿ ಘಟನೆ ನಡೆದಿದೆ. ಇದರಲ್ಲಿ ಆರೋಪಿ ಎನ್ನಿಸಿರುವ ಸೊಸೆ ರೇಷ್ಮಾ ವಯಸ್ಸು 27. ಮೃತ ಅತ್ತೆಯ ಹೆಸರು ನವೀನಾ (46). ಇವರ ತಾಯಿ ಎಸ್.ಶಕಿಂಶಾ (74) ಎಂಬುವರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳು ಬೆಂಕಿಯಿಂದ ಸುಟ್ಟ ಗಾಯದಿಂದ ಸತ್ತಿದ್ದಾಳೆ. ಆದರೆ ಆಕೆಯ ತಲೆ ಮೇಲೆ ಗಾಯವಾಗಿದೆ. ನನ್ನ ಮಗಳಿಗೆ ಹೀಗೆ ಆಗುವಾಗ ಆಕೆಯ ಸೊಸೆ ರೇಷ್ಮಾ ಮತ್ತು ಅವಳ 2ವರ್ಷದ ಮಗ ಅಲ್ಲಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದಾದ ಬಳಿಕ ಪೊಲೀಸರು ತನಿಖೆ ಶುರು ಮಾಡಿದ್ದರು.
ಶಕಿಂಶಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತಳ ದೇಹವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಿದ್ದರು. ರೇಷ್ಮಾಳನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ ತಾನು ಸ್ಕ್ರ್ಯೂಡ್ರೈವರ್ನಿಂದ ಹೊಡೆದು ಅತ್ತೆಯನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲ, ನಂತರ ಆಕೆಯ ಶವಕ್ಕೆ ಸೀಮೆಎಣ್ಣೆ ಹಾಕಿ, ಬೆಂಕಿ ಹಚ್ಚಿದ್ದಾಗಿಯೂ ತಿಳಿಸಿದ್ದಾಳೆ. ನವೀನಾ ಮೊದಲು ಅಡುಗೆ ಮನೆಯಲ್ಲಿ ನೆಲದ ಮೇಲೆ ಬಿದ್ದರು. ನಂತರ ತನ್ನನ್ನು ಎತ್ತುವಂತೆ ನನ್ನ ಬಳಿ ಕೇಳಿದಳು. ಆದರೆ ಸ್ವಲ್ಪ ತಡವಾಗುತ್ತಿದ್ದಂತೆ ನನ್ನನ್ನು ನಿಂದಿಸಲು ಪ್ರಯತ್ನ ಪಟ್ಟಳು. ಆಗ ನನಗೆ ಕೋಪ ಬಂದು, ಅಲ್ಲಿಯೇ ಇದ್ದ ಸ್ಕ್ರ್ಯೂಡ್ರೈವರ್ನಿಂದ ಹಲವು ಬಾರಿ ಇರಿದು, ಹೊಡೆದು ಕೊಂದೆ. ನಂತರ ಅದನ್ನು ಬೆಂಕಿ ಅನಾಹುತವೆಂದು ಬಿಂಬಿಸಲು ಯತ್ನಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಸದ್ಯ ರೇಷ್ಮಾಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ಅಂಗನವಾಡಿಗಳಲ್ಲಿ ಉದ್ಯೋಗಾವಕಾಶ: 4ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಿ
Published On - 7:27 pm, Sun, 2 January 22