ಗೃಹಿಣಿಯರಿಗೆ ಸಂಬಳ: ಕಮಲ್ ಹಾಸನ್, ಶಶಿ ತರೂರ್ ಯೋಚನೆಗೆ ಕಂಗನಾ ವಿರೋಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2021 | 8:12 PM

ಗೃಹಿಣಿಯರು ತಮ್ಮ ಮನೆಯಲ್ಲಿ ಮಾಡುವ ಕೆಲಸವನ್ನು ಪರಿಗಣಿಸಿ ಅವರಿಗೂ ಸಂಬಳ ನೀಡಬೇಕು ಎಂಬ ಕಮಲ್ ಹಾಸನ್ ಅವರ ಯೋಚನೆಗೆ ನಟಿ ಕಂಗನಾ ರನೌತ್ ವಿರೋಧ ವ್ಯಕ್ತಪಡಿಸಿದ್ದಾರೆ.

ಗೃಹಿಣಿಯರಿಗೆ ಸಂಬಳ: ಕಮಲ್ ಹಾಸನ್, ಶಶಿ ತರೂರ್ ಯೋಚನೆಗೆ ಕಂಗನಾ ವಿರೋಧ
ಕಮಲ್ ಹಾಸನ್ ಮತ್ತು ಕಂಗನಾ ರನೌತ್
Follow us on

ಮುಂಬೈ: ಗೃಹಿಣಿಯರು ತಮ್ಮ ಮನೆಯಲ್ಲಿ ಮಾಡುವ ಕೆಲಸವನ್ನು ಪರಿಗಣಿಸಿ ಅದನ್ನೂ ಸಂಬಳ ಪಡೆಯುವ ವೃತ್ತಿ ಎಂದು ಗುರುತಿಸಬೇಕು ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ. ಕಮಲ್ ಹಾಸನ್ ಅವರ ಈ ಯೋಚನೆಗೆ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾನು ಇದನ್ನು ಸ್ವಾಗತಿಸುತ್ತೇನೆ. ರಾಜ್ಯ ಸರ್ಕಾರಗಳು ಗೃಹಿಣಿಯರಿಗೆ ಮಾಸಿಕ ಸಂಬಳ ನೀಡಬೇಕು. ಇದು ಅವರಿಗೆ ಸಿಗುವ ಗೌರವ ಮತ್ತು ಅವರ ಸೇವೆಗೆ ಸಿಗುವ ಸಂಬಳ. ಈ ಮೂಲಕ ಅವರು ತಮ್ಮ ಸ್ವಾತಂತ್ರ್ಯವನ್ನು ಗೌರವಿಸಿಕೊಳ್ಳುವ, ಸಂಬಳ ಪಡೆಯುವ ಒಂದು ಸಮೂಹವನ್ನು ರಚಿಸಬಹುದು ಎಂದಿದ್ದಾರೆ.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ನಟಿ ಕಂಗನಾ ರನೌತ್, ನಮ್ಮೊಂದಿಗೆ ಪ್ರೀತಿಯಿಂದಿರುವ ಲಿಂಗಕ್ಕೆ ದರಪಟ್ಟಿ ಹಾಕಬೇಡಿ. ನಮ್ಮದೇ ಮಗುವಿನ ಆರೈಕೆ ಮಾಡುವುದಕ್ಕೆ ನಮಗೆ ಸಂಬಳ ಕೊಡಬೇಡಿ, ನಮ್ಮದೇ ಪುಟ್ಟ ಸಾಮ್ರಾಜ್ಯವಾಗಿರುವ ಮನೆಯಲ್ಲಿ ರಾಣಿಯಾಗಿರುವ ನಮಗೆ ಸಂಬಳ ಬೇಡ. ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಿ. ನಿಮ್ಮ ಹೆಂಗಸರಿಗೆ ನಿಮ್ಮನ್ನೇ ಅರ್ಪಿಸಿ. ಆಕೆಗೆ ನೀವು ಬೇಕೆ ಹೊರತು ನಿಮ್ಮ ಪ್ರೀತಿ, ಗೌರವ ಅಥವಾ ಸಂಬಳ ಮಾತ್ರ ಅಲ್ಲ ಎಂದಿದ್ದಾರೆ.

ಗೃಹಿಣಿಯರ ಶ್ರಮವನ್ನು ಗುರುತಿಸುವ ಕಾಲ ಬಂದಿದೆ ಎಂದು ನಿಮಗೆ ಅನಿಸುವುದಿಲ್ಲವೇ ಎಂದು ಟ್ವೀಟಿಗರೊಬ್ಬರು ಕಂಗನಾ ಅವರಿಗೆ ಕೇಳಿದಾಗ ಇದು ಮನೆಯಾಕೆಯನ್ನು ಮನೆ ಕೆಲಸ ಮಾಡುವಾಕೆಯಂತೆ ಮಾಡುತ್ತದೆ. ಅಮ್ಮನ ತ್ಯಾಗಕ್ಕೆ ದರಪಟ್ಟಿ ಹಾಕಲು ಆದೀತೆ? ಅದು ಜೀವನಪೂರ್ತಿ ನಿರ್ವಹಿಸಬೇಕಾದ ಬಾಧ್ಯತೆಯಲ್ಲವೇ? ಆಕೆಗೆ ಆಕೆಯ ಕೆಲಸಕ್ಕೆ ಹಣಕೊಡುವುದು ಎಂದರೆ, ಸೃಷ್ಟಿಗಾಗಿ ದೇವರಿಗೆ ದುಡ್ಡು ಕೊಟ್ಟಂತೆ. ನಿಮಗೆ ದಿಢೀರನೆ ಅವರ ಮೇಲೆ ಕರುಣೆ ಬಂದಂತೆ ಇದೆ. ಇದು ಸ್ವಲ್ಪ ಬೇಸರ ಮತ್ತು ಸ್ವಲ್ಪ ತಮಾಷೆಯ ಚಿಂತನೆ ಎಂದಿದ್ದಾರೆ.

2021ರಲ್ಲಿ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಮಲ್ ಹಾಸನ್ ಅವರ ಪಕ್ಷ ಎಂಎನ್ಎಂ, ಚುನಾವಣೆಯಲ್ಲಿ ಗೆದ್ದರೆ ಗೃಹಿಣಿಯರಿಗೆ ವೇತನ ನೀಡುವುದಾಗಿ ಭರವಸೆ ನೀಡಿತ್ತು.

Delhi Chalo | ಕಂಗನಾ-ದಿಲ್ಜಿತ್ ಟ್ವೀಟ್ ಸಮರ ನಿಲ್ಲಲಿಲ್ಲ