ಏಟು-ಎದಿರೇಟು ಮರೆತ ಸೆರಮ್​ ಮತ್ತು ಭಾರತ್​ ಬಯೋಟೆಕ್​: ಜಂಟಿ ಹೇಳಿಕೆ ಬಿಡುಗಡೆ

ಕೊರೊನಾ ಲಸಿಕೆ ತಯಾರಿಸುವಲ್ಲಿ ಭಾರತ್​ ಬಯೋಟೆಕ್​ ಮತ್ತು ಸೆರಮ್​ ಸಂಸ್ಥೆಗಳು ಒಂದಾಗಿ ಕಾರ್ಯ ನಿರ್ವಹಿಸಲಿವೆ. ದೇಶ ಮತ್ತು ವಿಶ್ವದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಎರಡೂ ಸಂಸ್ಥೆಗಳ ಮುಖ್ಯಸ್ಥರು ಜಂಟಿ ಹೇಳಿಕೆ ನೀಡಿದ್ದಾರೆ.

ಏಟು-ಎದಿರೇಟು ಮರೆತ ಸೆರಮ್​ ಮತ್ತು ಭಾರತ್​ ಬಯೋಟೆಕ್​: ಜಂಟಿ ಹೇಳಿಕೆ ಬಿಡುಗಡೆ
ಅದರ್​ ಪೂನಾವಾಲಾ ಮತ್ತು ಕೃಷ್ಣ ಎಲ್ಲಾ
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2021 | 7:38 PM

ಹೈದರಾಬಾದ್​: ಭಾರತದಲ್ಲಿ ಕೊರೊನಾ ಲಸಿಕೆ ತಯಾರಿಸುತ್ತಿರುವ ಸೆರಮ್​ ಮತ್ತು ಭಾರತ್​ ಬಯೋಟೆಕ್​ ಸಂಸ್ಥೆಗಳ ಮುಖ್ಯಸ್ಥರು ತಮ್ಮ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ. ಕೆಲವು ಸಂಸ್ಥೆಯ ಲಸಿಕೆಗಳು ‘ನೀರಿನಷ್ಟೇ ಪರಿಣಾಮಕಾರಿ’ ಎಂಬ ಸೆರಮ್​ ಸಂಸ್ಥೆಯ ಮುಖ್ಯಸ್ಥ ಅದರ್​ ಪೂನಾವಾಲಾ ಹೇಳಿಕೆಗೆ ಭಾರತ್​ ಬಯೋಟೆಕ್​ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಎಲ್ಲಾ ನಿನ್ನೆ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದ್ದರು.

ಆದರೆ, ಇಂದು ಈ ಮುನಿಸಿನಿಂದ ಹೊರ ಬಂದಿರುವ ಕೃಷ್ಣ ಎಲ್ಲಾ ಮತ್ತು ಅದರ್​ ಪೂನಾವಾಲಾ ಜಂಟಿ ಹೇಳಿಕೆ ನೀಡಿದ್ದಾರೆ. ಕೊರೊನಾ ಲಸಿಕೆ ತಯಾರಿಕೆಯ ವಿಚಾರದಲ್ಲಿ ಸೆರಮ್​ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲಿವೆ. ಜನರ ಆರೋಗ್ಯ ಮತ್ತು ಹಿತಕ್ಕಾಗಿ ನಾವು ಒಂದಾಗಿ ಶ್ರಮಿಸುತ್ತೇವೆ. ದೇಶದಲ್ಲಿ ಮತ್ತು ವಿಶ್ವದಲ್ಲಿ ಕೊರೊನಾ ಲಸಿಕೆ ಸುಲಭವಾಗಿ ಲಭಿಸಬೇಕು ಎನ್ನುವುದೇ ನಮ್ಮ ಧ್ಯೇಯವಾಗಿದೆ ಎಂದು ಇಬ್ಬರೂ ತಮ್ಮ ಟ್ವಿಟರ್​ ಅಕೌಂಟ್​ಗಳಲ್ಲಿ ಹೇಳಿಕೆ ನೀಡಿದ್ದಾರೆ.

ನಮ್ಮ ಲಸಿಕೆಗಳು ಎಷ್ಟು ಪ್ರಾಮುಖ್ಯ ಎಂಬುದರ ಕುರಿತು ನಮಗೆ ಅರಿವಿದೆ. ದೇಶ ಹಾಗೂ ವಿಶ್ವ ಮಟ್ಟದ ಪರಿಸ್ಥಿತಿ ಸುಧಾರಣೆಗೆ ಎರಡೂ ಸಂಸ್ಥೆಗಳು ಬದ್ಧವಾಗಿವೆ. ಪ್ರಸ್ತುತ ಕೊರೊನಾ ಲಸಿಕೆಗಳ ಉತ್ಪಾದನೆ ಮತ್ತು ಗುಣಮಟ್ಟದ ಬಗ್ಗೆ ನಾವು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ. ಇದು ನಮ್ಮ ಆದ್ಯ ಕರ್ತವ್ಯವಾಗಿದೆ. ಸದ್ಯ ನಮ್ಮ ಯೋಜನೆಗಳನ್ನು ಯಾವ ಗೊಂದಲಗಳಿಲ್ಲದೇ ಮುಂದುವರೆಸುತ್ತೇವೆ ಎಂದು ಅದರ್​ ಪೂನಾವಾಲಾ ಮತ್ತು ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ಕೊವಾಕ್ಸಿನ್​ ವಿಚಾರದಲ್ಲಿ ರಾಜಕೀಯ ಬೇಡ: ಬಯೋಟೆಕ್ ಎಂಡಿ ಕೃಷ್ಣ ಎಲ್ಲಾ ಆಗ್ರಹ