Petrol Diesel Price: ಮಾರ್ಚ್​ ತಿಂಗಳ ಪ್ರಾರಂಭದಿಂದ ಪೆಟ್ರೋಲ್​, ಡೀಸೆಲ್​ ದರ ಸ್ಥಿರ! ಎಷ್ಟಿದೆ ದರ?

|

Updated on: Mar 11, 2021 | 8:26 AM

Petrol Diesel Rate in Bangalore: ಕಳೆದ ತಿಂಗಳಿನಲ್ಲಿ ದರ ಬದಲಾವಣೆಗೊಂಡ ನಂತರ ಪೆಟ್ರೋಲ್​, ಡೀಸೆಲ್​ ಸತತ 12ನೇ ದಿನದವರೆಗೆ ಸ್ಥಿರತೆ ಕಾಪಾಡಿಕೊಂಡಿದೆ. ಎಷ್ಟಿದೆ ಇಂಧನ ದರ ಎಂಬುದರ ವಿವರ ಇಲ್ಲಿದೆ.

Petrol Diesel Price: ಮಾರ್ಚ್​ ತಿಂಗಳ ಪ್ರಾರಂಭದಿಂದ ಪೆಟ್ರೋಲ್​, ಡೀಸೆಲ್​ ದರ ಸ್ಥಿರ! ಎಷ್ಟಿದೆ ದರ?
ಪಿಟಿಐ ಚಿತ್ರ
Follow us on

ಬೆಂಗಳೂರು: ಇಂದು ಗುರವಾರ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಫೆಬ್ರವರಿ ತಿಂಗಳ ಕೊನ್ನೆಯಲ್ಲಿ ಇಂಧನ ದರ ಏರಿಕೆಯ ನಂತರ ದರದಲ್ಲಿ ವ್ಯತ್ಯಾಸ ಕಂಡಿಲ್ಲ. ಹೀಗಿರುವಾಗ, ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 91.17 ರೂಪಾಯಿ ಹಾಗೂ ಡೀಸೆಲ್​ ದರ ಪ್ರತಿ ಲೀಟರಿಗೆ 81.47 ರೂಪಾಯಿ ಇದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಡೀಸೆಲ್ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನು. ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರವನ್ನು ಗಮನಿಸಿದಾಗ, ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.57 ರೂಪಾಯಿ ಹಾಗೂ ಡೀಸೆಲ್​ ಪ್ರತಿ ಲೀಟರಿಗೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರಿಗೆ ಪೆಟ್ರೋಲ್​ 93.11 ರೂಪಾಯಿಗೆ ಮಾರಾಟವಾಗುತ್ತಿದ್ದು, ಡೀಸೆಲ್​ ಪ್ರತಿ ಲೀಟರಿಗೆ 86.45 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

ಕೆಲವು ಮಾನದಂಡಗಳ ಆಧಾರದ ಮೇಲೆ ಪೆಟ್ರೋಲ್​, ಡೀಸೇಲ್​ ದರಗಳು ಬದಲಾಗುತ್ತವೆ. ತೈಲ ಕಂಪನಿಗಳು ಇಂಧನ ದರಗಳನ್ನು ನಿಗದಿ ಮಾಡುತ್ತದೆ. ಪೆಟ್ರೋಲ್​ ದರ ಏರಿಕೆಯಿಂದಾಗಿ ಅದೆಷ್ಟೋ ಪ್ರತಿಭಟನೆಗಳು ನಡೆಯುತ್ತಿವೆ. ಆದರೂ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇಳಿಕೆಯತ್ತ ಇಂಧನ ದರ ಸಾಗುವುದು ಯಾವಾಗ ಎಂಬ ಗೊಂದಲದಲ್ಲಿ ಜನರಿದ್ದಾರೆ. ಜೊತೆ ಜೊತೆಗೆ ಅಡುಗೆ ಎಣ್ಣೆ, ಸಿಲೆಂಡರ್​ ದರವೂ ಕೂಡಾ ಏರಿಕೆ ಕಂಡಿರುವುದು ಜನರ ಕೆಂಗಣ್ಣಿಗೆ ಕಾರಣವಾಗಿದೆ.

ಇನ್ನು, ಭಾರತದ ವಿವಿಧ ನಗರಗಳಾದ ಭೂಪಾಲ್​ನಲ್ಲಿ ಪೆಟ್ರೋಲ್​ 99.21 ರೂಪಾಯಿ ಇದ್ದು ಇನ್ನೇನು ಶತಕದ ಹಾದಿಯಲ್ಲಿದೆ. ಹಾಗೂ ಡೀಸೆಲ್​ 89.76 ರೂಪಾಯಿಗೆ ಮಾರಾಟವಾಗುತ್ತಿದೆ. ರಾಂಚಿಯಲ್ಲಿ ಪೆಟ್ರೋಲ್​ 88.54 ರೂಪಾಯಿ ಹಾಗೂ ಡೀಸೆಲ್​ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಪಾಟ್ನಾದಲ್ಲಿ ಪ್ರತಿ ಲೀ. ಪೆಟ್ರೋಲ್​ ದರ 93.48 ರೂಪಾಯಿ ಹಾಗೂ ಡೀಸೆಲ್​ 86.73 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 89.31 ರೂಪಾಯಿ ಹಾಗೂ ಡೀಸೆಲ್​ 81.85 ರೂಪಾಯಿಗೆ ಮಾರಾಟವಾಗುತ್ತಿದೆ.

ಭಾರತದಲ್ಲಿ, ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಗದಿಪಡಿಸುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿರುತ್ತವೆ. ಕಳೆದ ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದಾಗ ಸತತ 48 ದಿನಗಳವರೆಗೆ ಇಂಧನ ಬೆಲೆಯಲ್ಲಿ ಬದಲಾವಣೆ ಕಂಡುಬಂದಿರಲಿಲ್ಲ. ಹಾಗಾಗಿ ಚುನಾವಣಾ ದಿನಗಳು ಹತ್ತಿರ ಬಂದಾಗ ಬೆಲೆ ಏರಿಕೆಯತ್ತ ಸಾಗುವುದಿಲ್ಲವೆನೋ ಎಂಬ ಊಹಾಪೋಹಗಳು ಸೃಷ್ಟಿಯಾಗಿವೆ.

ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಇಂಧನ ದರ ವ್ಯತ್ಯಾಸವನ್ನು ನೋಡುವುದಾದರೆ, ಪೆಟ್ರೋಲ್ 25 ದಿನಗಳಲ್ಲಿ 7.36 ರೂಪಾಯಿ ಹೆಚ್ಚಳವಾಗಿದೆ. ಹಾಗೂ ಡೀಸೆಲ್ 16 ದಿನಗಳಲ್ಲಿ 4.52 ರೂ ಹೆಚ್ಚಳವಾಗಿದ್ದು, ಫೆಬ್ರವರಿ ತಿಂಗಳ ಕೊನೆಯ 16 ದಿನಗಳಲ್ಲಿ ಬೆಲೆ 4.52 ರೂಪಾಯಿ ಹೆಚ್ಚಳವಾಗಿದೆ. ಬಹುತೇಕ ಎಲ್ಲ ನಗರಗಳಲ್ಲಿ ಪೆಟ್ರೋಲ್ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಇದನ್ನೂ ಓದಿ: Petrol Diesel Price | ಆರು ದಿನಗಳ ಕಾಲ ಸ್ಥಿರತೆ ಕಾಪಾಡಿಕೊಂಡ ಪೆಟ್ರೋಲ್​ ದರ; ಜಿಎಸ್​ಟಿ ವ್ಯಾಪ್ತಿಗೆ ತಂದರೆ ಇಂಧನ ದರ ಇಳಿಕೆ!

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ