Petrol Diesel Price: ಪೆಟ್ರೋಲ್​, ಡೀಸೆಲ್​ ದರ ಏರುವಾಗ ಒಂದೇ ಬಾರಿ ಏರುತ್ತದೆ, ಇಳಿಯುವಾಗ ಮಾತ್ರ ನಿಧಾನ; ಗ್ರಾಹಕರು ಬೇಸರ

|

Updated on: Apr 27, 2021 | 8:22 AM

Petrol Diesel Rate Today in Bangalore: ಸತತ 11ನೇ ದಿನವೂ ಕೂಡಾ ಪೆಟ್ರೊಲ್​, ಡೀಸೆಲ್​ ದರ ಬದಲಾವಣೆ ಆಗಿಲ್ಲ. ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿಯೂ ತೈಲ ಬೆಲೆ ಸ್ಥಿರವಾಗಿಯೇ ಇದೆ.

Petrol Diesel Price: ಪೆಟ್ರೋಲ್​, ಡೀಸೆಲ್​ ದರ ಏರುವಾಗ ಒಂದೇ ಬಾರಿ ಏರುತ್ತದೆ, ಇಳಿಯುವಾಗ ಮಾತ್ರ ನಿಧಾನ; ಗ್ರಾಹಕರು ಬೇಸರ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಸರ್ಕಾರಿ ತೈಲ ಕಂಪನಿಗಳು ಸತತ 11ನೇ ದಿನವೂ ಕೂಡಾ ಪೆಟ್ರೊಲ್​, ಡೀಸೆಲ್​ ದರವನ್ನು ಬದಲಾವಣೆ ಮಾಡಿಲ್ಲ. ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿಯೂ ತೈಲ ಬೆಲೆ ಸ್ಥಿರವಾಗಿಯೇ ಇದೆ. ಏಪ್ರಿಲ್​ ತಿಂಗಳ ಪ್ರಾರಂಭದ 15 ದಿನಗಳ ನಂತರ ಪೆಟ್ರೋಲ್​, ಡೀಸೆಲ್​ ದರ ಕೊಂಚ ಇಳಿಕೆಯಾಗಿತ್ತು. ಆಗ ಪ್ರತಿ ಲೀಟರ್ ಪೆಟ್ರೋಲ್​ ದರವನ್ನು 16 ಪೈಸೆ ಹಾಗೂ ಪ್ರತಿ ಲಿಟರ್​ ಡೀಸೆಲ್​ವನ್ನು 14 ಪೈಸೆ ಇಳಿಕೆ ಮಾಡಲಾಗಿತ್ತು. ಅದಾದ ನಂತರದಲ್ಲಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.40 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 80.73 ರೂಪಾಯಿ ಇದೆ. ಇಂಧನ ದರ ಏರುವಾಗ ಒಂದೇ ಬಾರಿ ಏರಿಕೆಯಾಗುತ್ತದೆ. ಇನ್ನೇನು ಇಳಿಕೆಯತ್ತ ಸಾಗುತ್ತದೆ ಅನ್ನುವಷ್ಟರಲ್ಲಿ ಸ್ಥಿರವಾಗಿಯೇ ಉಳಿದು ಬಿಡುತ್ತದೆ. ಇದೀಗ ಸತತವಾಗಿ 11 ದಿನಗಳ ಕಾಲ ಪೆಟ್ರೋಲ್​, ಡೀಸೆಲ್​ ದರ ಸ್ಥಿರವಾಗಿ ಇದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಿಧ ನಗರಗಳಲ್ಲಿನ ಪೆಟ್ರೊಲ್​, ಡೀಸೆಲ್​ ದರವನ್ನು ಪರಿಶೀಲಿಸಿದಾಗ ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96.83 ರೂಪಾಯಿ ಇದೆ. ಪ್ರತಿ ಲೀಟರ್​ ಡೀಸೆಲ್​ ದರ 87.81 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಗೆ ಗ್ರಾಹಕರು 92.43 ರೂಪಾಯಿ ತೆರುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ಗೆ 85.75 ರೂಪಾಯಿ ಕೊಡಬೇಕಾಗಿದೆ.

ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.79 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.19 ರೂಪಾಯಿ ಅಗಿದೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಗೆ ಗ್ರಾಹಕರು 93.43 ರೂಪಾಯಿ ಕೊಟ್ಟು ಖರೀದಿಸುತ್ತಿದ್ದಾರೆ. ಪ್ರತಿ ಲೀಟರ್​ ಡೀಸೆಲ್​ಗೆ 85.60 ರೂಪಾಯಿ ಇದೆ.

ಭೂಪಾಲ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 98.41 ರೂಪಾಯಿ ಇದೆ. ಪ್ರತಿ ಲೀಟರ್​ ಡೀಸೆಲ್​ 88.98 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ ಚಂಡೀಗಢದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 86.99 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 80.43 ರೂಪಾಯಿ ಇದೆ. ಇನ್ನು, ಪಾಟ್ನಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.74 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85.97 ರೂಪಾಯಿ ಆಗಿದೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.72 ರೂಪಅಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ 81.13 ರೂಪಾಯಿಗೆ ಮಾರಾಟವಾಗುತ್ತಿದೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್​, ಡೀಸೆಲ್​ ದರ 16 ಬಾರಿ ಏರಿಕೆ ಕಂಡಿತ್ತು. ನಂತರ ಕಳೆದ ಮಾರ್ಚ್​ ತಿಂಗಳಿನಲ್ಲಿ ಪೆಟ್ರೋಲ್​, ಡೀಸೆಲ್ ದರ ಗಮನಿಸಿದಾಗ ಮೂರು ಬಾರಿ ದರವನ್ನು ಕಡಿತಗೊಳಿಸಲಾಗಿತ್ತು. ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿದರೆ ದಿನೇ ದಿನೇ ಏರುತ್ತದೆ, ಆದರೆ ಇಳಿಕೆ ಕಂಡುಬರುವಾಗ ಮಾತ್ರ ನಿಧಾನ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಿಧ ನಗರದ ಪೆಟ್ರೋಲ್​ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html

Published On - 9:38 am, Mon, 26 April 21