ದೆಹಲಿ: ಬೆಂಗಳೂರು ಸೇರಿ ಇತರ ಯಾವುದೇ ಪ್ರಮುಖ ನಗರಗಳಲ್ಲೂ ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಏಪ್ರಿಲ್ 15ರಂದು ಇಳಿಕೆಯಾದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆ ಕಳೆದ ಮೂರು ದಿನಗಳಿಂದ ಹೀಗೆ ಸ್ಥಿರತೆ ಕಾಯ್ದುಕೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳು ದುಬಾರಿಯಾಗುತ್ತಿದ್ದು ಪ್ರಸ್ತುತ ಬ್ಯಾರೆಲ್ಗೆ 67 ಡಾಲರ್ ಬೆಲೆ ಹೊಂದಿವೆ. ದೇಶೀಯ ತೈಲ ಕಂಪನಿಗಳು ಕಳೆದ ಕೆಲವು ದಿನಗಳಿಂದಲೂ ಪೆಟ್ರೋಲ್-ಡೀಸೆಲ್ಗಳ ಬೆಲೆಯಲ್ಲಿ ಏರಿಕೆ ಮಾಡಿಲ್ಲ.
ಮಾರ್ಚ್ 30ರಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕಡಿತವಾಗಿತ್ತು. ಏಪ್ರಿಲ್ 15ಕ್ಕೂ ಮೊದಲು, ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕೊನೇ ಬಾರಿಗೆ ಬದಲಾವಣೆ ಆಗಿದ್ದು ಮಾರ್ಚ್ 30ರಂದು. ನಂತರ ಏಪ್ರಿಲ್ 15ರಂದು ತುಸು ಕಡಿಮೆಯಾಗಿತ್ತು. ಮಾರ್ಚ್ನಲ್ಲಿ ಪೆಟ್ರೋಲ್ ಬೆಲೆಯಲ್ಲಿ 61 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 60 ಪೈಸೆ ಕಡಿಮೆಯಾಗಿತ್ತು. ಮಾರ್ಚ್ನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಒಟ್ಟು ಮೂರು ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾಗಿತ್ತು. ಅದಕ್ಕೂ ಮೊದಲು ಫೆಬ್ರವರಿಯಲ್ಲಿ ಒಟ್ಟು 18 ಬಾರಿ ಏರಿಕೆಯಾಗಿದೆ.
ವಿವಿಧ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ದರ ಹೀಗಿದೆ:
ನಗರ ಪೆಟ್ರೋಲ್ ದರ(ಪ್ರತಿ ಲೀ.) ಡೀಸೆಲ್ ದರ(ಪ್ರತಿ ಲೀ.)
ಬೆಂಗಳೂರು 93.43 85.60
ದೆಹಲಿ 90.40 80.73
ಚೆನ್ನೈ 92.43 85.75
ಕೋಲ್ಕತ್ತ 90.62 83.61
ಮುಂಬೈ 96.83 87.81
ಅಹ್ಮದಾಬಾದ್ 87.57 86.96
ಲಖನೌ 88.72 81.13
ಹೈದರಾಬಾದ್ 93.99 88.05
ಜೈಪುರ 96.77 89.20
ಆಗ್ರಾ 88.48 80.82
ಪಾಟ್ನಾ 92.74 85.97
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html
Published On - 11:43 am, Sun, 18 April 21