Petrol Diesel Price Today: ಇಳಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್, ಡೀಸೆಲ್ ದರ ಸತತ ನಾಲ್ಕು ದಿನಗಳಾದರೂ ಬದಲಾವಣೆ ಕಂಡಿಲ್ಲ!

|

Updated on: Mar 29, 2021 | 9:30 AM

Petrol Diesel Rate In Bangalore Today: ಎರಡು ದಿನಗಳ ಕಾಲ ಪೆಟ್ರೋಲ್​, ಡೀಸೆಲ್​ ದರ ಇಳಿಕೆಯ ಹಾದಿ ಹಿಡಿದಿತ್ತು. ಮತ್ತೆ ಸತತವಾಗಿ ನಾಲ್ಕು ದಿನಗಳಾದರೂ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

Petrol Diesel Price Today: ಇಳಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್, ಡೀಸೆಲ್ ದರ ಸತತ ನಾಲ್ಕು ದಿನಗಳಾದರೂ ಬದಲಾವಣೆ ಕಂಡಿಲ್ಲ!
ಪಿಟಿಐ ಚಿತ್ರ
Follow us on

ಬೆಂಗಳೂರು: ಮಾರ್ಚ್​ 29 ಸೋಮವಾರ ಕೂಡಾ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕಳೆದ ನಾಲ್ಕು ದಿನಗಳಿಂದ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.82 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್ 85.99 ರೂಪಾಯಿಗೆ ಮಾರಾಟವಾಗುತ್ತಿದೆ.

ಫೆಬ್ರವರಿ ತಿಂಗಳ ಕೊನೆಯ ಶನಿವಾರ 27ನೇ ತಾರೀಕಿನಂದು ಪೆಟ್ರೋಲ್, ಡೀಸೆಲ್​​ ದರ ಏರಿಕೆಯ ನಂತರದಲ್ಲಿ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಎದುರಿಗಿರುವುದರಿಂದ ಇಂಧನ ದರ ಸ್ಥಿರವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಮಾರ್ಚ್​ ತಿಂಗಳ ಕೊನೆಯ ವಾರ ಎರಡು ದಿನಗಳ ಕಾಲ ಪೆಟ್ರೋಲ್​, ಡೀಸೆಲ್​ ದರ ಇಳಿಕೆಯ ಮುಖ ಮಾಡಿತ್ತು. ಸತತ ಎರಡು ದಿನಗಳಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 39 ಪೈಸೆ ಇಳಿಕೆಯಾಯಿತು. ತದ ನಂತರ ನಾಲ್ಕು ದಿನಗಳಾದರೂ ಪೆಟ್ರೋಲ್​, ಡೀಸೆಲ್ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ.

ಇಂಧನ ದರ ಇಳಿಕೆಯತ್ತ ಮುಖ ಮಾಡಿದ್ದನ್ನು ಕಂಡ ಗ್ರಾಹಕರು ಖುಷಿ ಪಟ್ಟಿದ್ದರು. ಗರಿಷ್ಠ ಮಟ್ಟಕ್ಕೆ ತಲುಪಿದ್ದ ಪೆಟ್ರೋಲ್​, ಡೀಸೆಲ್​ಅನ್ನು ಕೊಳ್ಳಲು ಬಡವರು ಹಾಗೂ ಮಧ್ಯವರ್ಗದ ಜನರು ಕಷ್ಟ ಪಡುವ ಪರಿಸ್ಥಿತಿ ಎದುರಾಗಿತ್ತು. ಇಂಧನ ದರ ಏರಿಕೆಯು ಗ್ರಾಹಕರ ಕೆಂಗಣ್ಣಿಗೂ ಕಾರಣವಾಗಿತ್ತು. ದರ ಇಳಿಕೆ ಕಂಡು ಬಂದಿದ್ದನ್ನು ಕಂಡ ಜನರು ಕೊಂಚ ನಿರಾಳರಾಗಿದ್ದರೂ ಕೂಡಾ ಇಳಿಕೆಯತ್ತ ಮುಖ ಮಾಡಿದ ಪೆಟ್ರೋಲ್​, ಇದೀಗ ನಾಲ್ಕು ದಿನಗಳಾದರೂ ಸ್ಥಿರವಾಗಿಯೇ ಉಳಿದಿದೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿದೆ. ಕೊಂಚ ಬೇಸರವೂ ವ್ಯಕ್ತವಾಗುತ್ತಿದೆ.

ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರವನ್ನು ಗಮನಿಸಿದಾಗ ಪ್ರತಿ ಲೀಟರ್​ ಪೆಟ್ರೋಲ್​ ದರ ದೆಹಲಿಯಲ್ಲಿ 90.78 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.10 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 97.19 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ 88.20 ರೂಪಾಯಿಗೆ ಮಾರಾಟವಾಗುತ್ತಿದೆ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 90.98 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 83.98 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 92.77 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್ 86.10 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು, ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 89.08 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ 81.56 ರೂಪಾಯಿಗೆ ಮಾರಾಟವಾಗುತ್ತಿದೆ.

ವಿವಿಧ ನಗರದ ಪೆಟ್ರೋಲ್​ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/diesel-price-today.html