ಬೆಂಗಳೂರು: ಪೆಟ್ರೋಲ್, ಡೀಸೆಲ್ ಮಾರ್ಚ್ ತಿಂಗಳಲ್ಲಿ ಎರಡು ಬಾರಿ ಇಳಿಕೆ ಕಂಡಿರುವುದು ಜನರಿಗೆ ಸ್ವಲ್ಪ ಸಮಾಧಾನ ತಂದು ಕೊಟ್ಟಿದೆ. ಎರಡು ದಿನಗಳಲ್ಲಿ ಪೆಟ್ರೋಲ್ 39 ಪೈಸೆ ಮತ್ತು ಡೀಸೆಲ್ 37 ಪೈಸೆ ಇಳಿಕೆಯಾಗಿದೆ. ಆದರೆ ಇಂದು (ಮಾರ್ಚ್ 26) ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 93.82 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ 85.74 ರೂಪಾಯಿಗೆ ಮಾರಾಟವಾಗುತ್ತಿದೆ.
ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 71 ಡಾಲರ್ನಿಂದ 62ಡಾಲರ್ಗೆ ಇಳಿಕೆಯಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸರಿ ಸುಮಾರು 16ಬಾರಿ ಏರಿಕೆಯಾಗಿದೆ. ಆಗ ಪೆಟ್ರೋಲ್, ಡೀಸೆಲ್ ದರ ಗರಿಷ್ಠ ದಾಖಲೆಯ ಮಟ್ಟವನ್ನು ತಲುಪಿತ್ತು. ಇಂಧನ ದರದಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ ನಿನ್ನೆ ಗ್ರಾಹಕರು ಖರೀದಿಸಿದ ದರದಲ್ಲೇ ಪೆಟ್ರೋಲ್, ಡೀಸೆಲ್ ಮಾರಾಟವಾಗುತ್ತಿದೆ. ಇಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್, 90.78 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 97.19 ರೂಪಾಯಿ ಹಾಗೂ ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 90.98 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು, ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಅನ್ನು ಗ್ರಾಹಕರು 92.77 ರೂಪಾಯಿಗೆ ಖರೀದಿಸುತ್ತಿದ್ದಾರೆ.
ಮಾರ್ಚ್ ತಿಂಗಳಲ್ಲಿ ಇಲ್ಲಿಯವರೆಗೆ ಪೆಟ್ರೋಲ್, ಡೀಸೆಲ್ ದರ ಎರಡು ಬಾರಿ ಇಳಿಕೆಯಾಗಿದೆ. ಆದರೆ ಅದಕ್ಕೂ ಮೊದಲು ಫೆಬ್ರವರಿಯಲ್ಲಿ ಇಂಧನ ದರವು 16 ಪಟ್ಟು ಏರಿಕೆ ಕಂಡಿದೆ. ಹಿಂದಿನ ಜನವರಿಯಲ್ಲಿ 10 ಪಟ್ಟು ಏರಿಕೆ ಕಂಡಿತ್ತು. ಇಲ್ಲಿಯವರೆಗೆ 2021ರಲ್ಲಿ ತೈಲದ ಬೆಲೆಯು ಒಟ್ಟು 26 ದಿನಗಳ ಕಾಲ ಏರಿಕೆ ಕಂಡಿತ್ತು.
ಒಂದು ವರ್ಷದಲ್ಲಿ ಪೆಟ್ರೋಲ್ 21 ರೂಪಾಯಿ ಹೆಚ್ಚಳ
ಇಂದಿನ ಪೆಟ್ರೋಲ್ ದರವನ್ನು ಗಮನಿಸಿದಾಗ ದರ ಏರಿಕೆಯಲ್ಲಿರುವುದಂತೂ ನಿಜ. 2020ರ ಮಾರ್ಚ್ 26ರಂದು ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 69.59 ರೂಪಾಯಿ ಆಗಿತ್ತು. ಅಂದರೆ ಈ ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 21.19 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ ಡೀಸೆಲ್ ದರವನ್ನು ಪರಿಶೀಲಿಸಿದಾಗ ಮಾರ್ಚ್ 26, 2020ರಲ್ಲಿ ಪ್ರತಿ ಲೀಟರ್ ಡೀಸೆಲ್ 62.29 ರೂಪಾಯಿ ಆಗಿತ್ತು. ಆ ಅವಧಿಯಲ್ಲಿ ಕಚ್ಚಾ ತೈಲವು ಬ್ಯಾರೆಲ್ಗೆ 30 ಡಾಲರ್ಗಿಂತ ಕಡಿಮೆ ಇತ್ತು. ಹಾಗಾಗಿ ಇಂಧನ ದರವೂ ಕೂಡಾ ಕಡಿಮೆ ದರದಲ್ಲಿ ಮಾರಾಟವಾಗುತ್ತಿತ್ತು. ಇಂದಿನ ದರಕ್ಕೆ ಹೋಲಿಸಿದಾಗ ಡೀಸೆಲ್ ಈ ವರ್ಷ18.81 ರೂಪಾಯಿ ಏರಿಕೆ ಕಂಡಿದೆ.
ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಟನ್ನು 89.08 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಪ್ರತಿ ಲೀಟರ್ ಡೀಸೆಲ್ ದರ 81.56 ರೂಪಾಯಿ ಇದೆ. ಭೂಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 98.81 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 80.80 ರೂಪಾಯಿ ಇದೆ. ಇನ್ನು, ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 93.11 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್ ಡೀಸೆಲ್ 86.35 ರೂಪಾಯಿ ಇದೆ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 89.01 ರೂಪಾಯಿ ಇದ್ದು, ಪ್ರತಿ ಲೀಟರ್ ಡೀಸೆಲ್ 81.50 ರೂಪಾಯಿಗೆ ಮಾರಾಟವಾಗುತ್ತಿದೆ.
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
Published On - 8:42 am, Fri, 26 March 21