AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Rate Today: ಮುಂಬೈನಲ್ಲಿ ಪೆಟ್ರೋಲ್​ ಬೆಲೆ ಶತಕ ಬಾರಿಸಲು ಕೆಲ ಪೈಸೆಗಳಷ್ಟೆ ಬಾಕಿ! ಬೆಂಗಳೂರಿನಲ್ಲಿ ಎಷ್ಟಿದೆ ತೈಲ ದರ?

Petrol Diesel Price Today: ಇಂದು (ಮೇ 21)) ಪೆಟ್ರೋಲ್​ ಮತ್ತು ಡೀಸೆಲ್​ ದರ ಮತ್ತೆ ಏರಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ತೈಲ ದರ ಪರಿಷ್ಕರಿಸಿದ ಬಳಿಕ ಪೆಟ್ರೋಲ್​ ದರದಲ್ಲಿ 19 ಪೈಸೆ ಮತ್ತು ಲೀಟರ್​ ಡೀಸೆಲ್​ಗೆ 29 ಪೈಸೆಯಷ್ಟು ಬೆಲೆ ಏರಿಕೆ ಮಾಡಿದೆ.

Petrol Diesel Rate Today: ಮುಂಬೈನಲ್ಲಿ ಪೆಟ್ರೋಲ್​ ಬೆಲೆ ಶತಕ ಬಾರಿಸಲು ಕೆಲ ಪೈಸೆಗಳಷ್ಟೆ ಬಾಕಿ! ಬೆಂಗಳೂರಿನಲ್ಲಿ ಎಷ್ಟಿದೆ ತೈಲ ದರ?
ಪ್ರಾತಿನಿಧಿಕ ಚಿತ್ರ
shruti hegde
|

Updated on:May 21, 2021 | 8:52 AM

Share

ದೆಹಲಿ: ಎರಡು ದಿನಗಳ ವಿರಾಮದ ನಂತರ ಇಂದು (ಮೇ 21)) ಪೆಟ್ರೋಲ್​ ಮತ್ತು ಡೀಸೆಲ್​ ದರ ಮತ್ತೆ ಏರಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ತೈಲ ದರ ಪರಿಷ್ಕರಿಸಿದ ಬಳಿಕ ಪೆಟ್ರೋಲ್​ ದರದಲ್ಲಿ 19 ಪೈಸೆ ಮತ್ತು ಲೀಟರ್​ ಡೀಸೆಲ್​ಗೆ 29 ಪೈಸೆಯಷ್ಟು ಬೆಲೆ ಏರಿಕೆ ಮಾಡಿದೆ. ಮೇ ತಿಂಗಳಿನಲ್ಲಿ ಒಟ್ಟು 11 ಬಾರಿ ತೈಲ ದರವನ್ನು ಏರಿಸಲಾಯಿತು. ಈ ಮೂಲಕ ವಿವಿಧ ನಗರಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದೆ.

ದೆಹಲಿಯಲ್ಲಿ ನಿನ್ನೆ (ಗುರವಾರ) ಲೀಟರ್​ ಡೀಸೆಲ್​​ ದರ 83.51 ರೂಪಾಯಿ ಇತ್ತು. ಇಂದು ಬೆಲೆ ಹೆಚ್ಚಳದ ಬಳಿಕ 83.80 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಲೀಟರ್​ ಪೆಟ್ರೋಲ್​ ದರ 92.85 ರೂಪಾಯಿಯಿಂದ 93.04 ರೂಪಾಯಿಗೆ ಏರಿಕೆಯಾಗಿದೆ. ಇತ್ತೀಚಿಗಿನ ದರ ಏರಿಕೆಯು ದೆಹಲಿಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಲು ಕಾರಣವಾಗಿದೆ ಎಂದು ವಿಶ್ಲೇಷಿಸಬಹುದು. ಮೇ ತಿಂಗಳ ಆರಂಭದಲ್ಲಿ 4 ನೇ ತಾರೀಕಿನಿಂದ ದರ ಹೆಚ್ಚಳವಾಗಲು ಪ್ರಾರಂಭಿಸಿದ ತೈಲ ದರ ಇಂದಿಗೆ ಒಟ್ಟು 11 ಬಾರಿ ಏರಿಕೆ ಆಗಿದೆ. ಲೀಟರ್​ ಪೆಟ್ರೋಲ್ ದರದಲ್ಲಿ 2.49 ರೂಪಾಯಿ ಹಾಗೆಯೇ ಲೀಟರ್​ ಡೀಸೆಲ್​ ದರದಲ್ಲಿ 2.89 ರೂಪಾಯಿಯಷ್ಟು ಹೆಚ್ಚಳವಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಇಂಧನ ದರ ಗರಿಷ್ಠ ಮಟ್ಟದಲ್ಲಿದೆ. ಇಂದು ಪೆಟ್ರೋಲ್​ದಲ್ಲಿ 18 ಪೈಸೆ ಏರಿಕೆ ಆಗಿದ್ದು ಲೀಟರ್​ ಪೆಟ್ರೋಲ್​ ದರ 99.32 ರೂಪಾಯಿ ದಾಖಲಾಗಿದೆ. ಇನ್ನೇನು ಕೆಲ ಪೈಸೆಗಳಷ್ಟು ಏರಿಕೆ ಆದರೆ ಶತಕ ಬಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದೇ ರೀತಿ ಡೀಸೆಲ್​ ದರದಲ್ಲಿ 30 ಪೈಸೆ ಹೆಚ್ಚಳದ ಬಳಿಕ ಲೀಟರ್​ ಡೀಸೆಲ್​ ಬೆಲೆ 91.01 ರೂಪಾಯಿ ಆಗಿದೆ. ಇನ್ನು, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಕೆಲ ನಗರಗಳು ಪೆಟ್ರೋಲ್​ ದರದಲ್ಲಿ 100ರ ಗಡಿ ದಾಟಿದೆ. ಇನ್ನು ಬೆಂಗಳೂರು ನಗರದಲ್ಲಿ ಪೆಟ್ರೋಲ್​ ದರದಲ್ಲಿ 20 ಪೈಸೆ ಏರಿಕೆಯ ಬಳಿಕ ಲೀಟರ್​ಗೆ  96.14 ರೂಪಾಯಿಗೆ ಹೆಚ್ಚಳವಾಗಿದೆ. ಹಾಗೆಯೇ ಡೀಸೆಲ್​ ದರದಲ್ಲಿ 31 ಪೈಸೆ ಹೆಚ್ಚಳದ ನಂತರ 88.84 ರೂಪಾಯಿಗೆ ಏರಿಕೆಯಾಗಿದೆ.

ಗುರುವಾರಕ್ಕಿಂತ 19 ಪೈಸೆ ಏರಿಕೆಯಾದ ಬಳಿಕ ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 93.11 ರೂಪಾಯಿ ಆಗಿದೆ. ಲೀಟರ್​ ಡೀಸೆಲ್​ ದರ 86.64 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್​ ದರದಲ್ಲಿ 17 ಪೈಸೆ ಏರಿಕೆ ಮಾಡಲಾಗಿದ್ದು ಇಂದಿನ ಬೆಲೆ 94.71 ರೂಪಾಯಿ ಆಗಿದೆ. ಡೀಸೆಲ್​ ದರದಲ್ಲಿ 28 ಪೈಸೆ ಹೆಚ್ಚಿಸಲಾಗಿದ್ದು 88.62 ರೂಪಾಯಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 8:43 am, Fri, 21 May 21

Follow Us
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು