ದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ನಿನ್ನೆ (ಭಾನುವಾರ) ತೈಲ ಬೆಲೆಯನ್ನು ಏರಿಸಿದ ನಂತರ ಇಂದು ( ಸೋಮವಾರ) ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ಭಾನುವಾರ ಪೆಟ್ರೋಲ್ ದರವನ್ನು ಲೀಟರ್ಗೆ 24 ಪೈಸೆ ಹಾಗೂ ಡೀಸೆಲ್ಅನ್ನು 27 ಪೈಸೆ ಏರಿಕೆ ಮಾಡಲಾಗಿತ್ತು. ಈ ಮೂಲಕ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಪ್ರಮುಖ ಮೆಟ್ರೋ ನಗರಗಳಿಗೆ ಹೋಲಿಸಿದರೆ ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ಕಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 98.88 ರೂಪಾಯಿಗೆ ಏರಿಕೆಯಾಗಿದೆ. ಇನ್ನೇನು 99 ರೂಪಾಯಿ ತಲುಪುವ ಅಂಚಿನಲ್ಲಿದೆ.
ಭಾನುವಾರದ ದರ ಏರಿಕೆಯ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 92.58 ರೂಪಾಯಿ ಆಗಿದೆ. ಹಾಗೆಯೇ ಡೀಸೆಲ್ ಬೆಲೆ 83.22 ರೂಪಾಯಿಯಲ್ಲಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್ಗೆ 94.31 ರೂಪಾಯಿ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್ಗೆ 88.07 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.67 ರೂಪಾಯಿ ಇದೆ. ಹಾಗೆಯೇ ಡೀಸೆಲ್ ದರ 86.06 ರೂಪಾಯಿ ಇದೆ. ಈ ನಗರಗಳಿಗೆ ಹೋಲಿಸಿದರೆ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಹೆಚ್ಚಿದ್ದು, ಲೀಟರ್ ಪೆಟ್ರೋಲ್ ದ 98.88 ರೂಪಾಯಿ ಹಾಗೂ ಡೀಸೆಲ್ 90.40 ರೂಪಾಯಿ ಇದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 95.33 ರೂಪಾಯಿ ಇದೆ. ಹಾಗೂ ಡೀಸೆಲ್ ದರ 87.92 ರೂಪಾಯಿ ಆಗಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳು ಈಗಾಗಲೇ ಪೆಟ್ರೋಲ್ ಬೆಲೆಯಲ್ಲಿ 100 ರೂಪಾಯಿ ಗಡಿ ದಾಟಿವೆ. ಹಾಗೆಯೇ ವಾಣಿಜ್ಯ ನಗರಿ ಮುಂಬೈ ಕೂಡಾ ಪೆಟ್ರೋಲ್ ದರದಲ್ಲಿ ಶತಕ ಬಾರಿಸುತಂತೆ ಕಾಣಿಸುತ್ತಿದೆ. ಇದೇ ರೀತಿ ತೈಲ ದರ ಏರಿಕೆ ಕಂಡು ಬರುತ್ತಿದ್ದರೆ, ಮುಂಬೈ ಕೂಡಾ ಶತಕ ಬಾರಿಸುವಲ್ಲಿ ಯಾವುದೇ ಅನುಮಾನವಿಲ್ಲ.
ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ರಾಜಸ್ಥಾನವು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ (ವ್ಯಾಟ್) ವಿಧಿಸುತ್ತದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರವಿದೆ.
ರಾಜಸ್ಥಾನ ಶ್ರೀಗಂಗನಗರದಲ್ಲಿ ಅತಿ ಹೆಚ್ಚು ಇಂಧನ ದರವಿದ್ದು, ಲೀಟರ್ ಪೆಟ್ರೋಲ್ ದರ 103.52 ರೂಪಾಯಿ ಇದೆ. ಹಾಗೆಯೇ ಡೀಸೆಲ್ ಬೆಲೆ 95.99 ರೂಪಾಯಿಗೆ ತಲುಪಿದೆ. ಮೇ ತಿಂಗಳಳಿನಲ್ಲಿ ಒಟ್ಟು ಒಂಭತ್ತು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಆ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 2.19 ರೂಪಾಯಿ ಹಾಗೂ ಡೀಸೆಲ್ 2.49 ರೂಪಾಯಿ ಏರಿಕೆ ಮಾಡಲಾಗಿದೆ.
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಸರ್ಕಾರವು ಇಂಧನದ ಮೇಲಿನ ಅವಕಾರಿ ಸುಂಕವನ್ನು ಏರಿಕೆ ಮಾಡಿದಾಗ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ದರ ಲೀಟರ್ಗೆ 22.99 ರೂ.ಗಳಷ್ಟು ಹೆಚ್ಚಾಗಿತ್ತು. ಮತ್ತು ಡೀಸೆಲ್ ದರದಲ್ಲಿ 20.93 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿತ್ತು.
ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
Published On - 8:49 am, Mon, 17 May 21