ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

| Updated By: ಆಯೇಷಾ ಬಾನು

Updated on: Jun 20, 2020 | 12:23 PM

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆರು ರಾಜ್ಯಗಳ ಜನತೆಗಾಗಿಯೇ ರೂಪಿಸಿರುವ ಗರೀಬ್‌ ಕಲ್ಯಾಣ ರೋಜಗಾರ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಸಂಬಂಧ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಹಾರದ ಕಗಾರಿಯಾ ಜಿಲ್ಲೆಯ ತೆಲಿಹಾರ್‌ನಲ್ಲಿ ಚಾಲನೆ ನೀಡಿದರು. ಈ ಗರೀಬ್‌ ಕಲ್ಯಾಣ ಯೋಜನೆ ಆರು ರಾಜ್ಯಗಳ 116 ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರಿಗಾಗಿ ರೂಪಿಸಲಾಗಿದೆ. ಅದ್ರಲ್ಲೂ ವಿಶೇಷವಾಗಿ ದೇಶದ ವಿವಿಧೆಡೆ ಕೆಲಸ ಅರಸಿ ಹೋಗಿ ಕೊರೊನಾ ಸಮಯದಲ್ಲಿ ಹಿಂದಿರುಗಿ ಬಂದ ಕಾರ್ಮಿಕರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಅಂತಹವರಲ್ಲಿ ಈ […]

ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
Follow us on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆರು ರಾಜ್ಯಗಳ ಜನತೆಗಾಗಿಯೇ ರೂಪಿಸಿರುವ ಗರೀಬ್‌ ಕಲ್ಯಾಣ ರೋಜಗಾರ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಸಂಬಂಧ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಹಾರದ ಕಗಾರಿಯಾ ಜಿಲ್ಲೆಯ ತೆಲಿಹಾರ್‌ನಲ್ಲಿ ಚಾಲನೆ ನೀಡಿದರು.

ಈ ಗರೀಬ್‌ ಕಲ್ಯಾಣ ಯೋಜನೆ ಆರು ರಾಜ್ಯಗಳ 116 ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರಿಗಾಗಿ ರೂಪಿಸಲಾಗಿದೆ. ಅದ್ರಲ್ಲೂ ವಿಶೇಷವಾಗಿ ದೇಶದ ವಿವಿಧೆಡೆ ಕೆಲಸ ಅರಸಿ ಹೋಗಿ ಕೊರೊನಾ ಸಮಯದಲ್ಲಿ ಹಿಂದಿರುಗಿ ಬಂದ ಕಾರ್ಮಿಕರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಅಂತಹವರಲ್ಲಿ ಈ 116 ಜಿಲ್ಲೆಗಳ ಕಾರ್ಮಿಕರೇ ಹೆಚ್ಚಿದ್ದಾರೆ. ಹೀಗಾಗಿ ಈ ಕಾರ್ಮಿಕರಿಗೆ ಅನುಕೂಲವಾಗಲೆಂದು ಈ ಯೋಜನೆ ರೂಪಿಸಲಾಗಿದೆ.