ಅರೇ! ಇವರು ಮಾಸ್ಕ್​ ಹಾಕೊಂಡಿದ್ದಾರಾ ಇಲ್ವಾ? ಚೆಲುವೆಯ ಅಂದದ ಮೊಗಕೆ ಮಾಸ್ಕೇ ಭೂಷಣ!

ಚೆನ್ನೈ: ಈ ಹಾಳು ಕೊರೊನಾ ಮಹಾಮಾರಿ ಬಂದಿದ್ದೇ ತಡ. ನಮ್ಮನ್ನು ನಾವೇ ಕಾಪಾಡಿಕೊಳ್ಳುವ ಪರಿಸ್ಥಿತಿ ಎದುರಾಗಿಬಿಟ್ಟಿದೆ. ಸ್ವಚ್ಛತೆಯ ಪರಿವೇ ಇಲ್ಲದಿದ್ದವರು ಈಗ ದಿನಕ್ಕೆ ಕನಿಷ್ಠ ಪಕ್ಷ ಮೂರು ಬಾರಿ ಸೋಪ್​ ಹಾಕಿ ಕೈತೊಳೆದುಕೊಳ್ಳುವಂತೆ ಆಗಿಬಿಟ್ಟಿದ್ದಾರೆ. ಇನ್ನು ಹ್ಯಾಂಡ್​ ಸ್ಯಾನಿಟೈಸರ್​, ಮಾಸ್ಕ್​ಗಳ ಬಗ್ಗೆ ಕೇಳೋಕೆ ಹೋಗಬೇಡಿ. ಮನೆಯಿಂದ ಆಚೆ ಹೋಗೋಕು ಮುನ್ನ ಜೇಬಲ್ಲಿ ಮೊಬೈಲ್​ ಇಟ್ಟುಕೊಳ್ತಿರೋ ಇಲ್ವೋ, ಮುಖದ ಮೇಲೆ ಮಾಸ್ಕ್​ , ಬ್ಯಾಗ್​ ಅಥವಾ ಕಿಸೆಯಲ್ಲಿ ಮಾತ್ರ ಸ್ಯಾನಿಟೈಸರ್ ಇರಲೇಬೇಕು. ಈಗಂತು ಈ ಮಾಸ್ಕ್​ ನಮ್ಮ ಇನ್ನೊಂದು […]

ಅರೇ! ಇವರು ಮಾಸ್ಕ್​ ಹಾಕೊಂಡಿದ್ದಾರಾ ಇಲ್ವಾ? ಚೆಲುವೆಯ ಅಂದದ ಮೊಗಕೆ ಮಾಸ್ಕೇ ಭೂಷಣ!
Follow us
ಸಾಧು ಶ್ರೀನಾಥ್​
| Updated By:

Updated on: Jun 20, 2020 | 6:55 PM

ಚೆನ್ನೈ: ಈ ಹಾಳು ಕೊರೊನಾ ಮಹಾಮಾರಿ ಬಂದಿದ್ದೇ ತಡ. ನಮ್ಮನ್ನು ನಾವೇ ಕಾಪಾಡಿಕೊಳ್ಳುವ ಪರಿಸ್ಥಿತಿ ಎದುರಾಗಿಬಿಟ್ಟಿದೆ. ಸ್ವಚ್ಛತೆಯ ಪರಿವೇ ಇಲ್ಲದಿದ್ದವರು ಈಗ ದಿನಕ್ಕೆ ಕನಿಷ್ಠ ಪಕ್ಷ ಮೂರು ಬಾರಿ ಸೋಪ್​ ಹಾಕಿ ಕೈತೊಳೆದುಕೊಳ್ಳುವಂತೆ ಆಗಿಬಿಟ್ಟಿದ್ದಾರೆ. ಇನ್ನು ಹ್ಯಾಂಡ್​ ಸ್ಯಾನಿಟೈಸರ್​, ಮಾಸ್ಕ್​ಗಳ ಬಗ್ಗೆ ಕೇಳೋಕೆ ಹೋಗಬೇಡಿ.

ಮನೆಯಿಂದ ಆಚೆ ಹೋಗೋಕು ಮುನ್ನ ಜೇಬಲ್ಲಿ ಮೊಬೈಲ್​ ಇಟ್ಟುಕೊಳ್ತಿರೋ ಇಲ್ವೋ, ಮುಖದ ಮೇಲೆ ಮಾಸ್ಕ್​ , ಬ್ಯಾಗ್​ ಅಥವಾ ಕಿಸೆಯಲ್ಲಿ ಮಾತ್ರ ಸ್ಯಾನಿಟೈಸರ್ ಇರಲೇಬೇಕು. ಈಗಂತು ಈ ಮಾಸ್ಕ್​ ನಮ್ಮ ಇನ್ನೊಂದು ಮುಖವಾಡ ಆಗಿಬಿಟ್ಟಿದೆ.

ಮೊಗವನ್ನೇ ಹೋಲುವ ಮಾಸ್ಕ್​ ಇಲ್ಲಿದೆ ನೋಡಿ..! ಈ ಮಾಸ್ಕ್​ಗಳು ಮೊದಲು ಮಾರುಕಟ್ಟೆಗೆ ಬಂದಾಗ ಬಹಳಷ್ಟು ಸಾಮ್ಯತೆ ಇದ್ದ ಕಾರಣ ಇದನ್ನು ಧರಿಸಿದವರನ್ನ ಗುರುತಿಸೋಕೆ ಸ್ವಲ್ಪ ಟೈಂ ಹಿಡಿಯುತ್ತಿತ್ತು. ಅದರಲ್ಲೂ ಪ್ರತಿದಿನ ತಮ್ಮ​ ಏರಿಯಾದ ಲೋಕಲ್​ ಬುಲ್​ಬುಲ್​ಗಳನ್ನ ಕಂಡುಹಿಡಿಯೋಷ್ಟರಲ್ಲಿ ನಮ್ಮ ಪಡ್ಡೆ ಹಡುಗರಿಗಂತೂ ಸಾಕು ಸಾಕಾಗಿ ಹೋಗ್ತಿತ್ತು. ಜೊತೆಗೆ ಹುಡುಗರು ಯಾಕೆ ನನ್ನ ನೋಡಿ ವಿಶಲ್​ ಹೊಡಿಲಿಲ್ಲ ಅಂತಾ ಹುಡುಗೀರಿಗೂ ಸ್ವಲ್ಪ ಬೇಜಾರು ಆಗ್ತಿತ್ತು ಅಂತಾನೆ ಅಂದುಕೊಳ್ಳೋಣ.

ಆದರೆ ಈಗ ಅಂತಾ ಸಮಸ್ಯೆ ಏನು ಆಗಲ್ಲ. ಇನ್ನು ಮೇಲೆ ನಿಮ್ಮ ನಿಮ್ಮ ಏರಿಯಾದ ಚಿಟ್ಟೆಗಳ ಜೊತೆಗೆ ಅವಳ ಹಿಂದೆ ಬರುತ್ತಿರುವ ಅವಳ ಅಣ್ಣನನ್ನ ಅಥವಾ ಅಪ್ಪನನ್ನೂ ಸಹ ಚಕ್​ ಅಂತಾ ಕಂಡು ಹಿಡಿಯಬಹುದು. ಯಾಕಂದ್ರೆ ಈಗ ಮಾರುಕಟ್ಟೆಗೆ ಬಂದಿವೆ ನಿಮ್ಮ ಸುಂದರ ಮೊಗವನ್ನೇ ಹೋಲುವ ಸ್ಪೆಷಲ್​ ಫೇಸ್​ ಮಾಸ್ಕ್​.

ಹೌದು, ಲಾಕ್​ಡೌನ್​ನಿಂದ ಬೆಂಡೆದ್ದು, ಬಳಲಿ ಹೋಗಿದ್ದ ತಮಿಳುನಾಡಿನ ಕೊಯಂಬತ್ತೂರಿನ ಓರ್ವ ಫೋಟೋ ಸ್ಟುಡಿಯೋ ಮಾಲೀಕ ಈ ಒಂದು ಹೊಸ ಪ್ರಯೋಗಕ್ಕೆ ಕೈಹಾಕಿದ್ದಾನೆ. ಮೊದಲು ಆ ವ್ಯಕ್ತಿಯ ಫೋಟೋವನ್ನ ತನ್ನ ಸ್ಟುಡಿಯೋದಲ್ಲಿ ಕ್ಲಿಕ್ಕಿಸಿದ ನಂತರ ಆ ಫೋಟೋವನ್ನ ಹಾಗೇ ವಿಶಿಷ್ಟ ಪ್ರಿಂಟರ್​ ಮೂಲಕ ಬಟ್ಟೆ ಮಾಸ್ಕ್​ ಒಂದರ ಮೇಲೆ ಅಚ್ಚು ಹಾಕುತ್ತಾನೆ. ಇದನ್ನು ಧರಿಸಿದರೆ ಥೇಟ್​ ನಿಮ್ಮ ಸುಂದರ ಮೊಗದಂತೇ ಕಾಣುತ್ತದೆ.

ಸದ್ಯಕ್ಕೆ ಈ ಮಾಸ್ಕ್​ಗಳು ಕೊಯಂಬತ್ತೂರಿನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು ಬಹಳಷ್ಟು ಮಂದಿ ಅದರಲ್ಲೂ ಹೆಣ್ಣುಮಕ್ಕಳಿಂದ ಇವುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​. ಮುಂದಿನ ದಿನಗಳಲ್ಲಿ ಇವು ನಮ್ಮ ರಾಜ್ಯಕ್ಕೂ ಕಾಲಿಡುವ ಸೂಚನೆಯಿದ್ದು ಮ್ಯಾಚಿಂಗ್​ ಮಾಸ್ಕ್​ಗಳಂತೆ ಇವು ಕೂಡ ಟ್ರೆಂಡ್​ ಆಗಲಿದೆ.