ನರಿಬುದ್ಧಿ ಚೀನಾಗೆ ಸರಿಯಾದ ಪಾಠ ಕಲಿಸಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ!
ದೆಹಲಿ: ಅಲ್ಲೊಂದು, ಇಲ್ಲೊಂದು. ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ಖತರ್ನಾಕ್ ಚೀನಾ ಅದೇನೇನು ಅನಾಹುತ ಮಾಡುತ್ತೋ ಹೇಳೋಕೆ ಆಗಲ್ಲ. ಇಂತಹ ಗುಳ್ಳೆನರಿಗೆ ಸರಿಯಾಗಿ ಬುದ್ಧಿ ಕಲಿಸಲು ಕೇಂದ್ರ ಸರ್ಕಾರ ಖಡಕ್ ನಿರ್ಧಾರ ಕೈಗೊಂಡಿದೆ. ಗಡಿಯಲ್ಲಿ ಕ್ಯಾತೆ ತೆಗೆದು, ಕಿರಿಕ್ ಮಾಡಿದವರಿಗೆ ತಕ್ಕಪಾಠ ಕಲಿಸಲು ಅಖಾಡ ಸಿದ್ಧವಾಗಿದೆ. ಚೀನಾ ಕಂಡರೆ ಭಾರತೀಯರಲ್ಲಿ ಬೆಂಕಿ ಎದ್ದಿದೆ. ಚೀನಾ ವಿರುದ್ಧ ಭಾರತೀಯರ ಆಕ್ರೋಶದ ಕಟ್ಟೆ ಹೊಡೆದಿದೆ. ನಮ್ಮ ಗಡಿಯೊಳಗೇ ನುಗ್ಗಿ, ನಮ್ಮವರ ವಿರುದ್ಧವೇ ಕೈ ಎತ್ತೋ ಕ್ರಿಮಿನಲ್ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಬೇಕಿದೆ. […]
ದೆಹಲಿ: ಅಲ್ಲೊಂದು, ಇಲ್ಲೊಂದು. ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ಖತರ್ನಾಕ್ ಚೀನಾ ಅದೇನೇನು ಅನಾಹುತ ಮಾಡುತ್ತೋ ಹೇಳೋಕೆ ಆಗಲ್ಲ. ಇಂತಹ ಗುಳ್ಳೆನರಿಗೆ ಸರಿಯಾಗಿ ಬುದ್ಧಿ ಕಲಿಸಲು ಕೇಂದ್ರ ಸರ್ಕಾರ ಖಡಕ್ ನಿರ್ಧಾರ ಕೈಗೊಂಡಿದೆ. ಗಡಿಯಲ್ಲಿ ಕ್ಯಾತೆ ತೆಗೆದು, ಕಿರಿಕ್ ಮಾಡಿದವರಿಗೆ ತಕ್ಕಪಾಠ ಕಲಿಸಲು ಅಖಾಡ ಸಿದ್ಧವಾಗಿದೆ.
ಚೀನಾ ಕಂಡರೆ ಭಾರತೀಯರಲ್ಲಿ ಬೆಂಕಿ ಎದ್ದಿದೆ. ಚೀನಾ ವಿರುದ್ಧ ಭಾರತೀಯರ ಆಕ್ರೋಶದ ಕಟ್ಟೆ ಹೊಡೆದಿದೆ. ನಮ್ಮ ಗಡಿಯೊಳಗೇ ನುಗ್ಗಿ, ನಮ್ಮವರ ವಿರುದ್ಧವೇ ಕೈ ಎತ್ತೋ ಕ್ರಿಮಿನಲ್ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಬೇಕಿದೆ. ಇದನ್ನ ಈಗಾಗಲೇ ಭಾರತೀಯ ಪ್ರಜೆಗಳು ಮಾಡುತ್ತಿದ್ದು, ಚೀನಾ ಮೂಲದ ಌಪ್ಗಳನ್ನ ಮುಲಾಜಿಲ್ಲದೆ ತಮ್ಮ ತಮ್ಮ ಮೊಬೈಲ್ಗಳಿಂದ ಅನ್ ಇನ್ಸ್ಟಾಲ್ ಮಾಡಿದ್ದಾರೆ. ಈ ಹೊತ್ತಲೇ ಕೇಂದ್ರ ಸರ್ಕಾರ ಕೂಡ ಚೀನಾಗೆ ಶಾಕ್ ಕೊಡಲು ಮುಂದಾಗಿದೆ.
ಚೀನಾ ವಸ್ತುಗಳ ಆಮದು ಬಂದ್? ಹೌದು, ಭಾರತೀಯರ ಹಣದಲ್ಲೇ ಆರ್ಥಿಕವಾಗಿ ಬೆಳೆದು, ಇದೀಗ ಭಾರತೀಯರನ್ನೇ ಚೀನಾ ಸೈನಿಕರು ಹತ್ಯೆ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂತ ಭಾರತೀಯರು ಸಿಡಿದೆದ್ದಿದ್ದಾರೆ. ಸರ್ವೇಯೊಂದರಲ್ಲಿ ಶೇಕಡ 80 ರಷ್ಟು ಭಾರತೀಯರು ಚೀನಾ ವಸ್ತುಗಳನ್ನ ಬಳಸುವುದಿಲ್ಲ ಎಂದಿದ್ದಾರೆ. ಚೀನಾ ಉತ್ಪನ್ನ ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದಾರೆ.
ಜನರ ಈ ಸೆಂಟಿಮೇಟ್ ಬಿಸಿ ಚೀನಾಗೆ ತಟ್ಟಲಿದೆ. ಒಂದು ಕಡೆ ಜನಸಾಮಾನ್ಯರು ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದ್ಡೆ ಕೇಂದ್ರ ಕೂಡ ಚೀನಾ ವಸ್ತುಗಳ ಅಮದನ್ನ ಕನಿಷ್ಠ ಮಟ್ಟಕ್ಕೆ ಇಳಿಸೋದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಚೀನಾದಿಂದ ಯಾವ್ಯಾವ ಉತ್ಪನ್ನಗಳ ಅಮದು ನಿಲ್ಲಿಸಬಹುದು, ಚೀನಾದಿಂದ ಅಮದು ಆಗ್ತಿರುವ ಉತ್ಪನ್ನಗಳಲ್ಲಿ ಯಾವ್ಯಾವ ಉತ್ಪನ್ನಗಳನ್ನು ಇಲ್ಲೇ ತಯಾರಿಸಬಹುದು ಎಂಬ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ಸೋಮವಾರದೊಳಗೆ ವರದಿ ನೀಡಲು ಕೈಗಾರಿಕೆ ಸಂಘಟನೆಗಳಾದ ಫಿಕ್ಕಿ, ಅಸೋಚಾಮ್, ಚೇಂಬರ್ ಆಫ್ ಕಾಮರ್ಸ್, ಸೈಮಾಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಭಾರತದಲ್ಲೇ ಉತ್ಪಾದನೆಗೆ ಹೆಚ್ಚಿನ ಒತ್ತು! ಚೀನಾದಿಂದ ಅಮದಾಗುತ್ತಿರುವ ಉತ್ಪನ್ನಗಳನ್ನು ಅಗತ್ಯ ಹಾಗೂ ಅಗತ್ಯವಲ್ಲದ ಉತ್ಪನ್ನಗಳು ಎಂದು 2 ವಿಭಾಗ ಮಾಡಲಾಗಿದೆ. ಅಗತ್ಯ ಉತ್ಪನ್ನವನ್ನು ಭಾರತದಲ್ಲೇ ಉತ್ಪಾದಿಸುವುದು ಕೇಂದ್ರದ ಪ್ಲ್ಯಾನ್. ಈ ಮೂಲಕ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜತೆಗೇ ಇದನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿಯಲ್ಲಿ ನಿಲ್ಲಿಸಬಹುದಾದ ಚೀನಾ ಉತ್ಪನ್ನಗಳ ಲಿಸ್ಟ್ ಸಿದ್ಧವಾಗ್ತಿದೆ. ಹೀಗೆ ನರಿಬುದ್ಧಿ ಚೀನಾಗೆ ಸರಿಯಾಗೇ ಪೆಟ್ಟು ಕೊಡಲು ಅಖಾಡ ಸಿದ್ಧವಾಗ್ತಿದೆ.
ಅಂದಹಾಗೆ ಚೀನಾದಿಂದ ಆಟೋಮೊಬೈಲ್, ಬೊಂಬೆ, ಪ್ಲಾಸ್ಟಿಕ್, ಪರ್ನಿಚರ್ ಸೇರಿ ಹಲವು ಕಚ್ಚಾ ವಸ್ತುಗಳು ಚೀನಾದಿಂದ ಭಾರತಕ್ಕೆ ಬರ್ತಿವೆ. ಹಾಗೇ ಸಂಪೂರ್ಣ ತಯಾರಾದ ಉತ್ಪನ್ನಗಳನ್ನೂ ಅಮದು ಮಾಡಿಕೊಳ್ಳಲಾಗುತ್ತಿದೆ. ಸಿದ್ಧ ವಸ್ತುಗಳ ಪೈಕಿ ಎಲೆಕ್ಟ್ರಾನಿಕ್ ಉತ್ಪನ್ನಗಳಾದ ಫ್ರಿಡ್ಜ್, ಎಸಿ, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಲ್ಯಾಪ್ಟಾಪ್ ಮತ್ತಿತರ ವಸ್ತುಗಳು ಸೇರಿವೆ.
ಇವುಗಳನ್ನೆಲ್ಲಾ ಲಿಸ್ಟ್ ಮಾಡಿ ಚೀನಾಗೆ ಒಂದುಗತಿ ಕಾಣಿಸಲು ನಿರ್ಧರಿಸಲಾಗಿದೆ. ಇನ್ನು ವಿಶ್ವ ವ್ಯಾಪಾರ ಸಂಘಟನೆ ಜೊತೆ ಭಾರತ ಹಾಗೂ ಚೀನಾ ಒಪ್ಪಂದಕ್ಕೆ ಸಹಿ ಹಾಕಿರೋದ್ರಿಂದ ನೇರಾ ನೇರ ವಾಣಿಜ್ಯ ಯುದ್ಧ ನಡೆಸೋದು ಕಷ್ಟದ ವಿಚಾರ. ಹೀಗಾಗಿ ಇಂಡೈರೆಕ್ಟ್ ಆಗಿ ಚೀನಾಗೆ ಗುಮ್ಮಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರಯತ್ನಕ್ಕೆ ಭಾರತೀಯ ಪ್ರಜೆಗಳು ಕೂಡ ಕೈಜೋಡಿಸಬೇಕಿದ್ದು ಪಾಪಿ ಚೀನಾಗೆ ಸರಿಯಾದ ಪಾಠ ಕಲಿಸಬೇಕಿದೆ.
Published On - 7:22 am, Sun, 21 June 20