₹ 500 ಕೋಟಿ ಆಯುಧಗಳ ಖರೀದಿಗೆ ಅಸ್ತು! ಚೀನೀಯರು ಬಾಲ ಬಿಚ್ಚಿದ್ರೆ ಶೂಟ್ ಮಾಡಿ

ದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೆ ರಕ್ಷಣಾ ಪಡೆಗಳಿಗೆ ಯುದ್ಧೋಪಕರಣಗಳ ಖರೀದಿಯ ಆರ್ಥಿಕ ಅಧಿಕಾರ ನೀಡಲಾಗಿದೆ. 500 ಕೋಟಿ ರೂಪಾಯಿ ಮೊತ್ತದವರೆಗೂ ಗ್ರೀನ್ ಸಿಗ್ನಲ್ ನೀಡಲಾಗಿದೆ. ರಣಹೇಡಿ ಚೀನಾ ಯೋಧರ ನೆತ್ತರು ಹೀರಿ ನಾಟಕವಾಡ್ತಿದೆ. ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಲಡಾಯಿ ಮಾಡಿ. ನಂಬಿಸಿ ಬೆನ್ನಿಗೆ ಚೂರಿ ಹಾಕಿರೋ ಚೀನಿ ಸೈನಿಕರು ಎದುರಿಗೆ ಸಿಕ್ರೆ ಸಿಗಿದು ಹಾಕ್ಬೇಕು ಅನ್ನಿಸ್ತಿದೆ. ಕೆಂಪು ಸೈನಿಕರ ಎದೆ ಬಗೆದು ರಕ್ತ ಕುಡಿಬೇಕು ಅನ್ನೋವಷ್ಟು ಕಿಚ್ಚು ಪ್ರತಿಯೊಬ್ಬ ಭಾರತೀಯನ ರಕ್ತದ ಕಣ ಕಣದಲ್ಲೂ […]

₹ 500 ಕೋಟಿ ಆಯುಧಗಳ ಖರೀದಿಗೆ ಅಸ್ತು! ಚೀನೀಯರು ಬಾಲ ಬಿಚ್ಚಿದ್ರೆ ಶೂಟ್ ಮಾಡಿ
Ayesha Banu

| Edited By: sadhu srinath

Jun 22, 2020 | 7:18 AM

ದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೆ ರಕ್ಷಣಾ ಪಡೆಗಳಿಗೆ ಯುದ್ಧೋಪಕರಣಗಳ ಖರೀದಿಯ ಆರ್ಥಿಕ ಅಧಿಕಾರ ನೀಡಲಾಗಿದೆ. 500 ಕೋಟಿ ರೂಪಾಯಿ ಮೊತ್ತದವರೆಗೂ ಗ್ರೀನ್ ಸಿಗ್ನಲ್ ನೀಡಲಾಗಿದೆ.

ರಣಹೇಡಿ ಚೀನಾ ಯೋಧರ ನೆತ್ತರು ಹೀರಿ ನಾಟಕವಾಡ್ತಿದೆ. ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಲಡಾಯಿ ಮಾಡಿ. ನಂಬಿಸಿ ಬೆನ್ನಿಗೆ ಚೂರಿ ಹಾಕಿರೋ ಚೀನಿ ಸೈನಿಕರು ಎದುರಿಗೆ ಸಿಕ್ರೆ ಸಿಗಿದು ಹಾಕ್ಬೇಕು ಅನ್ನಿಸ್ತಿದೆ. ಕೆಂಪು ಸೈನಿಕರ ಎದೆ ಬಗೆದು ರಕ್ತ ಕುಡಿಬೇಕು ಅನ್ನೋವಷ್ಟು ಕಿಚ್ಚು ಪ್ರತಿಯೊಬ್ಬ ಭಾರತೀಯನ ರಕ್ತದ ಕಣ ಕಣದಲ್ಲೂ ಕುದಿಯುತ್ತಿದೆ. ಚೀನಿಯರ ವಿರುದ್ಧ ಪ್ರತೀಕಾರಕ್ಕಾಗಿ ಎಲ್ರೂ ಹಾತೊರೆಯುತ್ತಿರೋವಾಗ್ಲೇ ಭಾರತೀಯ ಸೇನೆಗೆ ಕೇಂದ್ರ ಸರ್ಕಾರ ಫುಲ್ ಪವರ್ ನೀಡಲಾಗಿದೆ. ಅದು ಅಂತಿಥ ಪವರ್ ಅಲ್ಲ.. ಚೀನಿಯರು ಬಾಲ ಬಿಚ್ಚಿದ್ರೆ ಅಲ್ಲೇ ಹೊಸಕಿ ಹಾಕಿ ಅನ್ನೋ ಸೂಪರ್ ಪವರ್.

ಲಡಾಖ್ ಲಡಾಯಿ ಬಳಿಕ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ! ಯೆಸ್.. ಅದ್ಯಾವಾಗ ಲಡಾಖ್​ ಗಡಿಯಲ್ಲಿ ಚೀನಾ ಸೈನಿಕರು ಮೋಸದಿಂದ ನಮ್ಮ ಯೋಧರ ನೆತ್ತರನ್ನ ಹೀರಿದ್ರೋ ದೇಶದ ನರ ನಾಡಿಗಳಲ್ಲಿ ರಕ್ತ ಕೊತ ಕೊತ ಕುದ್ದು ಹೋಗ್ತಿದೆ. ದೇಶಾದ್ಯಂತ ಬಾಯ್ಕಾಟ್ ಚೀನಾ ಆಕ್ರೋಶದ ಬೆಂಕಿ ಹೊತ್ತಿ ಕೊಂಡಿರೋವಾಗ್ಲೇ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದೆ.

ಭಾರತ-ಚೀನಾ ಗಡಿಯಲ್ಲಿ ಮತ್ತೇನಾದ್ರೂ ಪರಿಸ್ಥಿತಿ ಕೈ ಮೀರುವಂತಿದ್ದರೆ ಮುಲಾಜಿಲ್ಲದೇ ಶಸ್ತ್ರಾಸ್ತ್ರಗಳನ್ನು ಬಳಸಿ ಅಂತ ಸೇನಾಪಡೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸಂಘರ್ಷದ ನಿಯಮ ಬದಲಿಸಿರುವ ಮೋದಿ ಸರ್ಕಾರ ಹಿಂದೆ ಮುಂದೆ ಆಲೋಚಿಸಬೇಡಿ. ಎಲ್​ಎಸಿಯಲ್ಲಿ ಚೀನಾ ಸೈನಿಕರು ಬಾಲ ಬಿಚ್ಚಿದ್ರೆ ಕಟ್ ಮಾಡಿ ಅಂತ ಪವರ್​ಫುಲ್ ಸೂಚನೆ ನೀಡಿದೆ. ಕೇವಲ ಸೂಚನೆ ಅಲ್ಲ, ಅದಕ್ಕೆ ಬೇಕಾದುದ್ದನ್ನೆಲ್ಲಾ ಸಪ್ಲೈ ಮಾಡಲು ಮುಂದಾಗಿದೆ.

ಆತ್ಮಸ್ಥೈರ್ಯದ ಜೊತೆಗೆ ಸೇನೆಗೆ ಕೇಂದ್ರ ಸರ್ಕಾರದ ಆರ್ಥಿಕ ಬಲ! ಯೆಸ್, ಸೇನೆಗೆ ಶಸ್ತ್ರಾಸ್ತ್ರ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ಚೀನಿಯರನ್ನ ಸದೆಬಡಿಯಲು ಬೇಕಾದ ಯುದ್ಧೋಪಕರಣಗಳ ಪೂರೈಕೆಗೆ ಮುಂದಾಗಿದೆ. ತುರ್ತಾಗಿ ಮೂರು ಸೇನೆಗಳಿಗೆ 500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಅತ್ಯಾಧುನಿಕ ಆಯುಧಗಳನ್ನ ಖರೀದಿಸಲು ಅನುಮತಿ ನೀಡಿದೆ. ಇದ್ರಿಂದ ಭಾರತೀಯ ಸೈನಿಕರಲ್ಲಿ ರಣೋತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಅನುಮತಿ ಸಿಕ್ಕ ಬೆನ್ನಲ್ಲೇ ಎಲ್ಲಾ ಸೇನಾ ವಿಭಾಗಗಳು ತುರ್ತು ಸಂದರ್ಭದಲ್ಲಿ ಬೇಕಾಗುವ ವಸ್ತುಗಳನ್ನ ಶೀಘ್ರವಾಗಿ ಖರೀದಿಸಲು ಸಿದ್ಧತೆ ನಡೆಸುತ್ತಿವೆ ಎನ್ನಲಾಗಿದೆ.

ಗಡಿ ಸುತ್ತಮುತ್ತ ಹದ್ದಿನ ಕಣ್ಣಿಡಿ.. ಸರ್ವ ಸನ್ನದ್ಧವಾಗಿರಿ! ಸೇನೆಗೆ ಸ್ವಾತಂತ್ರ್ಯ ನೀಡುವ ನಿರ್ಧಾರ ಕೈಗೊಳ್ಳುವ ಮುನ್ನ, ಲಡಾಖ್​ನ ಪರಿಸ್ಥಿತಿ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಲು ಸೇನಾಪಡೆ ಉನ್ನತ ಅಧಿಕಾರಿಳಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೂಚಿಸಿದ್ದಾರೆನ್ನಲಾಗಿದೆ. ಮೂವರು ಸೇನಾ ಮುಖ್ಯಸ್ಥರ ಜೊತೆ ರಾಜನಾಥ್ ಸಿಂಗ್ ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿದ್ರು. ಅಲ್ಲದೇ ಗಡಿರೇಖೆ, ವೈಮಾನಿಕ ಮಾರ್ಗ ಮತ್ತು ಆಯಕಟ್ಟಿನ ಸಮುದ್ರ ಮಾರ್ಗಗಳೆಲ್ಲೆಡೆ ಭದ್ರತೆ ಹೆಚ್ಚಿಸೋ ಜತೆಗೆ ಚೀನಿ ಯೋಧರ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸುವಂತೆ ಸೂಚಿಸಿದ್ದಾರೆ. ಈ ಎಲ್ಲಾ ಬೆಳವಣಿಗಳನ್ನ ನೋಡಿದ್ರೆ ತೆರೆಮರೆಯಲ್ಲಿ ನಡೀತಿರೋದೇನು? ಚೀನಾಗೆ ಸೈಲೆಂಟ್ ಶಾಕ್ ಕೊಡ್ತಾರಾ ಅನ್ನೋ ಕುತೂಹಲ ಮೂಡಿಸಿದೆ.

ಪ್ರಧಾನಿ ಮೋದಿ ಮಾಡ್ತಿರೋ ಆ ಸೈಲೆಂಟ್ ತಂತ್ರವೇನು..? ನಮ್ಮ 20 ಸೈನಿಕರ ನೆತ್ತರು ಹೀರಿರೋ ಚೀನಾ ವಿರುದ್ಧ ಪ್ರತೀಕಾರಕ್ಕೆ ಇಡೀ ದೇಶವೇ ಹವಣಿಸುತ್ತಿದೆ. ಚೀನಾ ವಸ್ತುಗಳ ಬಾಯ್ಕಾಟ್​​​​​​ಗೆ ದೇಶದಲ್ಲಿ ಕೂಗು ಎದ್ದಿದೆ. ಈ ಹೊತ್ತಲ್ಲೇ ಚೀನಾದ ವಸ್ತುಗಳ ಆಮದು ಮೇಲೆ ನಿಯಂತ್ರಣ ಹೇರಲು ಪ್ಲ್ಯಾನ್‌ ನಡೀತಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದ್ರಿಂದ, ಚೀನಾ ವಸ್ತುಗಳಿಗೆ ದೇಶದಲ್ಲಿ ಗುನ್ನಾ ಬೀಳುತ್ತಾ? ಡ್ರ್ಯಾಗನ್ ಉತ್ಪನ್ನಗಳಿಗೆ ಬ್ರೇಕ್ ಹಾಕ್ತಾರಾ ಅನ್ನೋ ಕುತೂಹಲ ಹೆಚ್ಚಿಸಿದೆ.

ಈ ವಾರದಲ್ಲೇ ಭಾರತ-ಚೀನಾ ಸೇನಾಧಿಕಾರಿಗಳ ಮಾತುಕತೆ! ಒಂದೆಡೆ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಯಾವ ಟೈಮ್​ನಲ್ಲಿ ಏನ್​ ಬೇಕಾದ್ರೂ ಆಗ್ಬೋದು. ಹೀಗಾಗಿ, ಶಾಂತಿಯುತವಾಗಿ ವಿವಾದ ಬಗೆಹರಿಸಿಕೊಳ್ಳಲು ಚೀನಾ ಹಾತೊರೆಯುತ್ತಿದೆ. ಈ ವಾರ ಚೀನಾ ಹಾಗೂ ಭಾರತೀಯ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ. ಭಾರತೀಯ ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ, ಸೇನಾಧಿಕಾರಿಗಳು ಚೀನಾ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ. ಈ ವಾರದಲ್ಲೇ ಮಾತುಕತೆಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದ್ದು ಭಾರಿ ಕುತೂಹಲ ಮೂಡಿಸಿದೆ.

ಈ ಮಧ್ಯೆ, ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ದೇಹದ ಮೇಲೆ ಹರಿತವಾದ, ಚೂಪಾದ ಶಸ್ತ್ರಗಳಿಂದ ಇರಿದ ಗಾಯಗಳಾಗಿವೆ ಎಂದು ಕೆಲ ಸೇನಾ ವೈದ್ಯರು ಮಾಹಿತಿ ಕೊಟ್ಟಿದ್ದಾರಂತೆ. ಒಟ್ನಲ್ಲಿ, ಚೀನಾ ಕಿರಿಕ್ ಬೆನ್ನಲ್ಲೇ ಭಾರತೀಯ ಸೇನೆಗೆ ಫ್ರೀ ಹ್ಯಾಂಡ್​ ಕೊಟ್ಟಿರೋದನ್ನ ನೋಡಿದ್ರೆ, ಕೇಂದ್ರ ಸರ್ಕಾರ ಏನಾದ್ರೂ ಸೈಲೆಂಟ್ ಪ್ಲ್ಯಾನ್ ಮಾಡ್ತಿದ್ಯಾ ಅನ್ನಿಸ್ತಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada