
ಭಾರತ ಯಾವತ್ತಿಗೂ ಭಯೋತ್ಪಾದಕ ದಾಳಿ ಮಾಡಿದಾಗ ಸುಮ್ಮನೆ ಕೂತಿಲ್ಲ, ಎಲ್ಲದಕ್ಕೂ ಪ್ರತ್ಯುತ್ತರ ನೀಡಿದೆ. ವಾಯುದಾಳಿ, ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ್ಗಳಂತಹ ಸೂಕ್ತ ಉತ್ತರವನ್ನು ಪಾಕಿಸ್ತಾನಕ್ಕೆ ಹಾಗೂ ಭಯೋತ್ಪಾದಕರಿಗೆ ನೀಡಿದೆ ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದರು. ಅವರು ಎನ್‌ಡಿಟಿವಿ ವಿಶ್ವ ಶೃಂಗಸಭೆಯನ್ನುದ್ದೇಶಿಸಿ ಶುಕ್ರವಾರ (ಅ.17) ಮಾತನಾಡಿದ್ದಾರೆ. ಕಳೆದ 11 ವರ್ಷಗಳಲ್ಲಿ ಭಾರತವು ಬಿಕ್ಕಟ್ಟುಗಳನ್ನು ನಿವಾರಿಸಿದೆ, ದುರ್ಬಲ ಐದು ರಾಷ್ಟ್ರವೂ ಒಂದಾಗಿತ್ತು. ಆದರೆ ಇದೀಗ ಅಗ್ರ ಐದು ಆರ್ಥಿಕತೆ ರಾಷ್ಟ್ರವಾಗಿ ಬೆಳೆದಿದೆ. ಹಣದುಬ್ಬರವು ಶೇಕಡಾ 2 ಕ್ಕಿಂತ ಕಡಿಮೆ ಮತ್ತು ಬೆಳವಣಿಗೆ ಶೇಕಡಾ 7 ಕ್ಕಿಂತ ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಕಳೆದ 11 ವರ್ಷಗಳಲ್ಲಿ ತನ್ನ ಬಿಕ್ಕಟ್ಟುಗಳನ್ನು ನಿವಾರಿಸಿದೆ, ದುರ್ಬಲ ರಾಷ್ಟ್ರದಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳೆದಿದೆ. ಭಾರತದ ಹಣದುಬ್ಬರ ಕೂಡ 2ಕ್ಕಿಂತ ಕಡಿಮೆಯಾಗಿದೆ. ಹಾಗೂ ದೇಶದ ಬೆಳವಣಿಗೆ ಶೇಕಡಾ 7 ಕ್ಕಿಂತ ಹೆಚ್ಚಾಗಿದೆ. ಸಣ್ಣ ವ್ಯವಹಾರಗಳಿಂದ ದೊಡ್ಡ ಕೈಗಾರಿಕೆಗಳವರೆಗೆ, ಭಾರತವು ಸ್ವಾವಲಂಬಿ ಮತ್ತು ಆತ್ಮವಿಶ್ವಾಸವನ್ನು ಹೊಂದಿದೆ. ಭಯೋತ್ಪಾದಕ ದಾಳಿಯ ನಂತರ, ಭಾರತವು ಸರ್ಜಿಕಲ್ ಸ್ಟ್ರೈಕ್‌ಗಳು, ವಾಯುದಾಳಿಗಳು ಮತ್ತು ಆಪರೇಷನ್ ಸಿಂಧೂರ್‌ನಂತಹ ಕಾರ್ಯಾಚರಣೆಗಳೊಂದಿಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರಗಳು ಬಲವಂತದ ಸುಧಾರಣೆಗಳನ್ನು ಜಾರಿಗೆ ತಂದವು, ಆದರೆ ಇದೀಗ ಅವುಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಜಾಗತಿಕವಾಗಿ ಭಾರತ ಎಲದರಲ್ಲೂ ಪೈಪೋಟಿಯನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ದೆಹಲಿಯಲ್ಲಿ ಶ್ರೀಲಂಕಾ ಪ್ರಧಾನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ತಮ್ಮ ಸರ್ಕಾರವು ಪ್ರತಿಯೊಂದು ಸುಧಾರಣೆಯನ್ನು ತಂದಿದೆ. ಅದರಲ್ಲಿ ಸ್ಥಿತಿಸ್ಥಾಪಕತ್ವ ಹೊಂದಿದೆ. ಇದರ ಜತೆಗೆ ಹೊಸ ಹೊಸ ವಿಚಾರಗಳಲ್ಲಿ ಕ್ರಾಂತಿಯನ್ನು ತಂದಿದೆ. ಭಯೋತ್ಪಾದಕ ದಾಳಿಯ ನಂತರ ಭಾರತ ಈಗ ಮೌನವಾಗಿಲ್ಲ, ಬದಲಿಗೆ ಸರ್ಜಿಕಲ್ ಮತ್ತು ವಾಯುದಾಳಿಗಳನ್ನು ಬಳಸುವಾಗ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಭಾರತ ನಿಲ್ಲುವ ಮನಸ್ಥಿತಿಯನ್ನು ಹೊಂದಿಲ್ಲ. ಯಾವುದೇ ತಡೆಗಳು ಬಂದರು ಅದನ್ನು ಎದುರಿಸುವ ಶಕ್ತಿ ಇದೆ. ನಮ್ಮ ಜತೆಗೆ 140 ಕೋಟಿ ಭಾರತೀಯರಿದ್ದರೆ. ಭಾರತ ಆರ್ಥಿಕವಾಗಿ ಬೆಳೆದಿದೆ. ಜಗತ್ತಿನ ಮುಂದೆ ನಾವು ಆರ್ಥಿಕವಾಗಿ ಬೆಳೆದು ನಿಂತಿದ್ದಾನೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ