ಕಪ್ಪುಪಟ್ಟಿಯಿಂದ 312 ಸಿಖ್​ ವಿದೇಶಿ ಪ್ರಜೆಗಳನ್ನು ಕೈಬಿಟ್ಟ ಕೇಂದ್ರ

|

Updated on: Sep 13, 2019 | 2:07 PM

ದೆಹಲಿ: ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪ ಹೊಂದಿದ್ದ 312 ಸಿಖ್ ವಿದೇಶಿಯರನ್ನು ಕಪ್ಪುಪಟ್ಟಿಯಿಂದ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಇನ್ಮುಂದೆ ಈ ಸಿಖ್ ವಿದೇಶಿಯರು ಭಾರತದ ವೀಸಾ ಸೌಲಭ್ಯ ಪಡೆಯಬಹುದು ಮತ್ತು ಭಾರತದಲ್ಲಿರುವ ಅವರ ಕುಟುಂಬಸ್ಥರನ್ನು ಭೇಟಿ ಮಾಡಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೇಳಿದೆ. ವಿವಿಧ ಭದ್ರತಾ ಸಂಸ್ಥೆಗಳ ಪರಿಶೀಲನೆ ಬಳಿಕ ಸಿಖ್​ ವಿದೇಶಿಯರನ್ನು ಕಪ್ಪುಪಟ್ಟಿಯಿಂದ ತೆಗೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 1980ರ ದಶಕದಲ್ಲಿ ಸಿಖ್​ರಿಗೆ ಪ್ರತೇಕ ನೆಲ ಬೇಕೆಂದು […]

ಕಪ್ಪುಪಟ್ಟಿಯಿಂದ 312 ಸಿಖ್​ ವಿದೇಶಿ ಪ್ರಜೆಗಳನ್ನು ಕೈಬಿಟ್ಟ ಕೇಂದ್ರ
Follow us on

ದೆಹಲಿ: ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪ ಹೊಂದಿದ್ದ 312 ಸಿಖ್ ವಿದೇಶಿಯರನ್ನು ಕಪ್ಪುಪಟ್ಟಿಯಿಂದ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಇನ್ಮುಂದೆ ಈ ಸಿಖ್ ವಿದೇಶಿಯರು ಭಾರತದ ವೀಸಾ ಸೌಲಭ್ಯ ಪಡೆಯಬಹುದು ಮತ್ತು ಭಾರತದಲ್ಲಿರುವ ಅವರ ಕುಟುಂಬಸ್ಥರನ್ನು ಭೇಟಿ ಮಾಡಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

ವಿವಿಧ ಭದ್ರತಾ ಸಂಸ್ಥೆಗಳ ಪರಿಶೀಲನೆ ಬಳಿಕ ಸಿಖ್​ ವಿದೇಶಿಯರನ್ನು ಕಪ್ಪುಪಟ್ಟಿಯಿಂದ ತೆಗೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

1980ರ ದಶಕದಲ್ಲಿ ಸಿಖ್​ರಿಗೆ ಪ್ರತೇಕ ನೆಲ ಬೇಕೆಂದು ಭಾರತದ ವಿರುದ್ಧ ವಿದೇಶಿಯರ ಜೊತೆ ಸೇರಿ ಸಿಖ್​ರು ಉಗ್ರವಾದ ಚಳವಳಿ ನಡೆಸಿದ್ದರು. ಆಗ ಬಂಧನದಿಂದ ತಪ್ಪಿಸಿಕೊಳ್ಳಲು ಕೆಲವು ಸಿಖ್​ರು ಭಾರತ ದೇಶ ಬಿಟ್ಟು ವಿದೇಶಗಳಲ್ಲಿ ನೆಲೆಸಿ ಅಲ್ಲಿನ ಪ್ರಜೆಗಳಾದರು. ಅಂತವರನ್ನು 2016ರವರೆಗೆ ಕಪ್ಪುಪಟ್ಟಿಯಲ್ಲಿ ಇರಿಸಲಾಗಿತ್ತು. ಅವರಿಗೆ ಭಾರತಕ್ಕೆ ಭೇಟಿ ನೀಡಲು ವೀಸಾ ಸೌಲಭ್ಯ ಕೂಡ ಸಿಗುತ್ತಿರಲಿಲ್ಲ.

ಕಪ್ಪುಪಟ್ಟಿಗೆ ಸೇರಿದ ಬಳಿಕ ವಿದೇಶದಲ್ಲಿದ್ದ ಸಿಖ್​ರು ಭಾರತದಲ್ಲಿರುವ ಅವರ ಕುಟುಂಬಸ್ಥರನ್ನು ಭೇಟಿ ಮಾಡಲು ಆಗುತ್ತಿರಲಿಲ್ಲ. ಆದ್ರೆ ಇದೀಗ ಕಪ್ಪುಪಟ್ಟಿಯಿಂದ ಅವರನ್ನು ಕೈಬಿಡಲಾಗಿದೆ. ಇನ್ಮುಂದೆ ಭಾರತದ ವೀಸಾ ಸೌಲಭ್ಯ ಪಡೆದು ಅವರ ಕುಟುಂಬಸ್ಥರನ್ನು ಭೇಟಿ ಮಾಡಬಹುದಾಗಿದೆ. ಅಲ್ಲದೆ ಸಾಗರೋತ್ತರ ಭಾರತೀಯ ನಾಗರಿಕರ ಗುರುತಿನ ಚೀಟಿಗೂ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವೀಸಾ ಮೂಲಕ ಭಾರತದಲ್ಲಿ 2 ವರ್ಷಗಳವರೆಗೆ ಅವರು ನೆಲೆಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

 

Published On - 1:53 pm, Fri, 13 September 19