‘ಸೇವಾ ಸಪ್ತಾಹ’ ಕಾರ್ಯಕ್ರಮದ ಮೂಲಕ ಈ ಬಾರಿ ಮೋದಿ ಹುಟ್ಟುಹಬ್ಬ ಆಚರಣೆ

‘ಸೇವಾ ಸಪ್ತಾಹ’ ಕಾರ್ಯಕ್ರಮದ ಮೂಲಕ ಈ ಬಾರಿ ಮೋದಿ ಹುಟ್ಟುಹಬ್ಬ ಆಚರಣೆ

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ನಾಯಕರು ದೆಹಲಿಯ ಏಮ್ಸ್​ ಆಸ್ಪತ್ರೆಯ ನೆಲಗಳನ್ನು ಸ್ವಚ್ಛಗೊಳಿಸಿದ್ದಾರೆ.  ‘ಸೇವ ಸಪ್ತಾಹ’ ಕಾರ್ಯಕ್ರಮದ ಮೂಲಕ ಈ ವರ್ಷ ಪ್ರಧಾನಿ ಮೋದಿ ಹುಟ್ಟಹಬ್ಬ ಆಚರಿಸಲು ಬಿಜೆಪಿ ನಾಯಕರು ಕರೆ ನೀಡಿದ್ದಾರೆ. ಸೆ. 17ರಂದು ಪ್ರಧಾನಿ ಮೋದಿ ಹುಟ್ಟುಹಬ್ಬವಿರುವ ಕಾರಣ ಈಗಾಗಲೇ ಬಿಜೆಪಿ ನಾಯಕರು ಹಲವು ಕಾರ್ಯಕ್ರಮಗಳ ಮೂಲಕ ಮೋದಿ ಹುಟ್ಟಹಬ್ಬ ಆಚರಿಸಲು ಮುಂದಾಗಿದ್ದಾರೆ. ಶನಿವಾರ ಬೆಳಗ್ಗೆ ಏಮ್ಸ್​ ಆಸ್ಪತ್ರೆಯ ನೆಲ ಗುಡಿಸುವ ಮೂಲಕ ‘ಸೇವಾ […]

sadhu srinath

|

Sep 14, 2019 | 3:23 PM

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ನಾಯಕರು ದೆಹಲಿಯ ಏಮ್ಸ್​ ಆಸ್ಪತ್ರೆಯ ನೆಲಗಳನ್ನು ಸ್ವಚ್ಛಗೊಳಿಸಿದ್ದಾರೆ.  ‘ಸೇವ ಸಪ್ತಾಹ’ ಕಾರ್ಯಕ್ರಮದ ಮೂಲಕ ಈ ವರ್ಷ ಪ್ರಧಾನಿ ಮೋದಿ ಹುಟ್ಟಹಬ್ಬ ಆಚರಿಸಲು ಬಿಜೆಪಿ ನಾಯಕರು ಕರೆ ನೀಡಿದ್ದಾರೆ.

ಸೆ. 17ರಂದು ಪ್ರಧಾನಿ ಮೋದಿ ಹುಟ್ಟುಹಬ್ಬವಿರುವ ಕಾರಣ ಈಗಾಗಲೇ ಬಿಜೆಪಿ ನಾಯಕರು ಹಲವು ಕಾರ್ಯಕ್ರಮಗಳ ಮೂಲಕ ಮೋದಿ ಹುಟ್ಟಹಬ್ಬ ಆಚರಿಸಲು ಮುಂದಾಗಿದ್ದಾರೆ.

ಶನಿವಾರ ಬೆಳಗ್ಗೆ ಏಮ್ಸ್​ ಆಸ್ಪತ್ರೆಯ ನೆಲ ಗುಡಿಸುವ ಮೂಲಕ ‘ಸೇವಾ ಸಪ್ತಾಹ’ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ ನೀಡಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ  ಜೆಪಿ ನಡ್ಡಾ, ವಿಜಯ್ ಗೋಯೆಲ್ ಸೇರಿದಂತೆ ಕೆಲ ನಾಯಕರು ಅಮಿತ್ ಶಾಗೆ ಸಾಥ್ ಕೊಟ್ಟಿದ್ದಾರೆ. ಬಳಿಕ ಏಮ್ಸ್​ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು, ಆಹಾರ ವಿತರಿಸಿದ್ದಾರೆ.

ದೇಶಾದ್ಯಂತ ‘ಸೇವಾ ಸಪ್ತಾಹ’ ಮೂಲಕ ಮೋದಿ ಹುಟ್ಟಹಬ್ಬ ಆಚರಿಸಲಾಗುವುದು. ಮೋದಿ ತಮ್ಮ ಇಡೀ ಜೀವನವನ್ನು ದೇಶ ಸೇವೆಗೆ ಮುಡಿಪಾಗಿಟ್ಟಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಮೋದಿ ಹುಟ್ಟುಹಬ್ಬದ ಪ್ರಯುಕ್ತ ಇಡೀ ವಾರ ರಕ್ತದಾನ ಶಿಬಿರ, ಉಚಿತ ಆರೋಗ್ಯ ಚಿಕಿತ್ಸೆ, ಅನಾಥರಿಗೆ ಮತ್ತು ವೃದ್ಧರಿಗೆ ಆಹಾರ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

Follow us on

Related Stories

Most Read Stories

Click on your DTH Provider to Add TV9 Kannada