ಸರ್ಕಾರ ರಚನೆಗೂ ಮುನ್ನ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಭೇಟಿಯಾದ ಪ್ರಧಾನಿ ಮೋದಿ

|

Updated on: Jun 07, 2024 | 4:13 PM

ಪ್ರಧಾನಿ ಮೋದಿ ಅವರು ಇಂದು ಎನ್​​ಡಿಎ ಸಭೆಯ ನಂತರ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡುವ ಮುನ್ನ ಬಿಜೆಪಿಯ ಹಿರಿಯ ನಾಯಕರಾದ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ, ನಂತರ ಅಲ್ಲಿಂದ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಭೇಟಿ ಸರ್ಕಾರ ರಚನೆ ಹಕ್ಕು ಮಂಡನೆ ಮಾಡಲಿದ್ದಾರೆ.

ಸರ್ಕಾರ ರಚನೆಗೂ ಮುನ್ನ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಭೇಟಿಯಾದ ಪ್ರಧಾನಿ ಮೋದಿ
Follow us on

ದೆಹಲಿ, ಜೂ.7: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಹಳೆಯ ಸಂಸತ್​​​ ಹಾಲ್​​ನಲ್ಲಿ ಎನ್​​​ಡಿಎ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಎನ್​​ಡಿಎ ಮಿತ್ರಪಕ್ಷದ ನಾಯಕರು ಸೇರಿದ್ದು, ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಒಪ್ಪಿಗೆಯನ್ನು ನೀಡಿದರು. ಈ ಸಭೆಯಲ್ಲಿ ಎನ್‌ಡಿಎ ನಾಯಕರಾಗಿ ಆಯ್ಕೆಯಾದ ನಂತರ ಪ್ರಧಾನಿ ಮೋದಿ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅಡ್ವಾಣಿ ಅವರ ಆರ್ಶೀವಾದ ಪಡೆದಿದ್ದಾರೆ. ಇನ್ನು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್​​ ಜೋಶಿ ಅವರನ್ನು ಕೂಡ ಭೇಟಿ ಮಾಡಿ ಮಾತನಾಡಿದ್ದಾರೆ. ಇದರ ನಂತರ ಮೋದಿ ಅವರು ಇತರ 15 ಎನ್‌ಡಿಎ ನಾಯಕರೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದು, ಅಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಜೂನ್ 9ರ ಭಾನುವಾರ ಸಂಜೆ 6 ಗಂಟೆಗೆ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಜೆಪಿ ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಲೋಕಸಭೆಯ ನಾಯಕರಾಗಿ ಆಯ್ಕೆಯಾದ ನಂತರ ನಮ್ಮ ಪಕ್ಷದ ಸಹೋದ್ಯೋಗಿಗಳು ಮತ್ತು ಸಮ್ಮಿಶ್ರ ಪಾಲುದಾರರಿಗೆ ಧನ್ಯವಾದ ತಿಳಿಸಿದರು. ಭಾರತದ ಅಭಿವೃದ್ಧಿಗೆ ಜತೆಯಾಗಿ ಕೆಲಸ ಮಾಡಬೇಕಿದೆ. ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು. ಸರ್ಕಾರ ನಡೆಸಲು ಬಹುಮತ ಬೇಕು, ಅದು ಪ್ರಜಾಪ್ರಭುತ್ವದ ಏಕೈಕ ತತ್ವವಾಗಿದೆ. ದೇಶವನ್ನು ನಡೆಸಲು ಏಕಾಭಿಪ್ರಾಯ ಬಹಳ ಮುಖ್ಯ ಎಂದು ಹೇಳಿದ್ದಾರೆ.

2019 ರಲ್ಲಿ, ನೀವೆಲ್ಲರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದಾಗ, ನಾನು ಒಂದು ವಿಷಯಕ್ಕೆ ಒತ್ತು ನೀಡಿದ್ದೆ ಅದು ನಂಬಿಕೆ. ಇಂದು ನೀವು ಮತ್ತೊಮ್ಮೆ ನನಗೆ ಈ ಜವಾಬ್ದಾರಿಯನ್ನು ನೀಡುತ್ತಿದ್ದೀರಿ ಎಂದರೆ ನಮ್ಮ ನಡುವಿನ ನಂಬಿಕೆಯ ಸೇತುವೆ ತುಂಬಾ ಬಲವಾಗಿದೆ. ಈ ಕ್ಷಣವೂ ಭಾವನಾತ್ಮಕವಾಗಿದೆ ಎಂದರು. ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತು ಸಮ್ಮಿಶ್ರ ರಾಜಕೀಯದ ಇತಿಹಾಸದಲ್ಲಿ, ಚುನಾವಣಾ ಪೂರ್ವ ಮೈತ್ರಿ ಎಂದಿಗೂ ಎನ್‌ಡಿಎ ಬಲ ನೀಡಿರಲಿಲ್ಲ. ಇದು ಮೈತ್ರಿಕೂಟದ ಗೆಲುವು. ಲೋಕಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಅವರ ಹೆಸರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮತ್ತು ಬಿಜೆಪಿಯ ನಾಯಕರಾಗಿ ಪ್ರಸ್ತಾಪಿಸಿದರು.

ಇದನ್ನೂ ಓದಿ: ಎನ್‌ಡಿಎ ಸಭೆಯಲ್ಲಿ ಸಿಎಂ ಯೋಗಿ ಬೆನ್ನು ತಟ್ಟಿ ಬಿಗ್ ಸಿಗ್ನಲ್ ಕೊಟ್ಟ ಪ್ರಧಾನಿ ಮೋದಿ

ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ ಆದರೆ ಗೆಲುವನ್ನು ಅರಗಿಸಿಕೊಳ್ಳುವ ಪರಿ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಎನ್​ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ನಾವು ಸೋತಿಲ್ಲ, ಗೆಲುವನ್ನು ಜೀರ್ಣಸಿಕೊಳ್ಳುವುದು ಹೇಗೆಂಬುದು ತಿಳಿದಿದೆ. ಸೋತವರನ್ನು ಅಪಹಾಸ್ಯ ಮಾಡುವುದು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂದರು. ಲೋಕಸಭೆ ಚುನಾವಣೆಗೂ ಮುನ್ನವೂ ಎನ್​ಡಿಎ ಸರ್ಕಾರ ಇತ್ತು, ಲೋಕಸಭಾ ಚುನಾವಣೆ ಮುಗಿದ ಮೇಲೂ ಎನ್​ಡಿಎ ಸರ್ಕಾರವೇ ಇದೆ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮೋದಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 4:07 pm, Fri, 7 June 24