ರೈತರ ಪ್ರತಿಭಟನೆಯಿಂದ ಪ್ರಧಾನಿ ಮೋದಿಗೆ ತುಂಬ ನೋವಾಗಿದೆ ಎಂದ ರಾಜನಾಥ್​ ಸಿಂಗ್​: ಮತಾಂತರ ತಡೆ ಕಾಯ್ದೆ ಬಗ್ಗೆ ಹೇಳಿದ್ದೇನು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2020 | 12:57 PM

ನನಗೆ ಗೊತ್ತಿರುವ ಮಟ್ಟಿಗೆ, ಮುಸ್ಲಿಂ ಧರ್ಮದಲ್ಲಿ ಇನ್ನೊಂದು ಧರ್ಮದವರೊಂದಿಗೆ ಮದುವೆಯಾಗುವ ಅವಕಾಶ ಇಲ್ಲ. ನಾನಂತೂ ಮದುವೆಗಾಗಿ ಮತಾಂತರ ಆಗುವುದಕ್ಕೆ ವೈಯಕ್ತಿವಾಗಿ ಅನುಮೋದನೆ ನೀಡುವುದಿಲ್ಲ ಎಂದು ರಾಜನಾಥ್​ ಸಿಂಗ್​ ಸ್ಪಷ್ಟವಾಗಿ ಹೇಳಿದ್ದಾರೆ.

ರೈತರ ಪ್ರತಿಭಟನೆಯಿಂದ ಪ್ರಧಾನಿ ಮೋದಿಗೆ ತುಂಬ ನೋವಾಗಿದೆ ಎಂದ ರಾಜನಾಥ್​ ಸಿಂಗ್​: ಮತಾಂತರ ತಡೆ ಕಾಯ್ದೆ ಬಗ್ಗೆ ಹೇಳಿದ್ದೇನು?
ರಕ್ಷಣಾ ಸಚಿವ ರಾಜನಾಥ್​ ಸಿಂಗ್​
Follow us on

ದೆಹಲಿ: ದೇಶದ ಅನ್ನದಾತರ ವಿಚಾರದಲ್ಲಿ ಯಾವ ಕಾರಣಕ್ಕೂ ಸಂವೇದನಾ ರಹಿತರಾಗಿ ವರ್ತಿಸುವದಿಲ್ಲ. ನಮಗೆ ಅವರ ಬಗ್ಗೆ ಅಪಾರ ಗೌರವ ಇದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹೇಳಿದರು.

ಇಂದು ಎಎನ್​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಕೆಲವು ಪ್ರಭಾವಿಗಳು ರೈತರಲ್ಲಿ ಕೃಷಿಕಾಯ್ದೆಗಳ ಬಗ್ಗೆ ತಪ್ಪು ಗ್ರಹಿಕೆ ಮೂಡಿಸುತ್ತಿವೆ. ರೈತರ ಪ್ರತಿಭಟನೆಯಿಂದಾಗಿ ನಮಗೆ ಬೇಸರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ತುಂಬ ನೋವಾಗಿದೆ ಎಂದು ತಿಳಿಸಿದರು. ಕೆಲವರು ರೈತರನ್ನು ನಕ್ಸಲೀಯರು, ಖಾಲಿಸ್ತಾನಿಗಳು ಎಂದು ಕರೆಯುತ್ತಿರುವ ಬಗ್ಗೆಯೂ ಸಚಿವರು ಬೇಸರ ವ್ಯಕ್ತಪಡಿಸಿದರು. ರೈತರನ್ನು ಯಾರೂ ಹೀಗೆಲ್ಲಾ ಕರೆಯಬಾರದು ಎಂದರು.

ಸಿಖ್ ಸಮುದಾಯವನ್ನು ಹೊಗಳಿದ ರಾಜನಾಥ್​ ಸಿಂಗ್​, ನಮ್ಮ ಸಿಖ್​ ಸಹೋದರರು ಸದಾ ಕಾಲ ದೇಶದ ಸಂಸ್ಕೃತಿಯ ರಕ್ಷಕರು, ಈ ರಾಷ್ಟ್ರದ ಸ್ವಾಭಿಮಾನದ ರಕ್ಷಣೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರ ಒಗ್ಗಟ್ಟಿನ ಬಗ್ಗೆ ಪ್ರಶ್ನೆ ಮಾಡುವಂತೆಯೇ ಇಲ್ಲ ಎಂದು ತಿಳಿಸಿದರು.

ರೈತರು ಸರ್ಕಾರದೊಂದಿಗೆ ತಾರ್ಕಿಕ ಚರ್ಚೆ ಮಾಡಬೇಕು. ಬರಿ ಯೆಸ್​ ಆರ್​ ನೋ ಪ್ರಶ್ನೋತ್ತರ ಬೇಡ. ಅವರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ. ನಮ್ಮ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ನಿಲ್ಲಿಸುವುದಿಲ್ಲ. ಖಂಡಿತ ಮುಂದುವರಿಸುತ್ತೇವೆ ಎಂದು ಮತ್ತೊಮ್ಮೆ ಭರವಸೆ ನೀಡಿದರು.

ಮದುವೆಗಾಗಿ ಮತಾಂತರವನ್ನು ಒಪ್ಪುವುದಿಲ್ಲ
ರೈತರ ಪ್ರತಿಭಟನೆ ಹೊರತಾಗಿ ಮತಾಂತರದ ಬಗ್ಗೆ ಮಾತನಾಡಿದ ರಕ್ಷಣಾ ಸಚಿವರು, ಮದುವೆಗಾಗಿ ಮತಾಂತರವಾಗುವುದನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ಅಷ್ಟಕ್ಕೂ ಈ ಮತಾಂತರವೆಂಬುದು ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಸಾಮೂಹಿಕ ಮತಾಂತರ ನಿಲ್ಲಲೇಬೇಕು ಎಂದೂ ರಾಜನಾಥ್​ಸಿಂಗ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನಗೆ ಗೊತ್ತಿರುವ ಮಟ್ಟಿಗೆ, ಮುಸ್ಲಿಂ ಧರ್ಮದಲ್ಲಿ ಇನ್ನೊಂದು ಧರ್ಮದವರೊಂದಿಗೆ ಮದುವೆಯಾಗುವ ಅವಕಾಶ ಇಲ್ಲ. ನಾನಂತೂ ಮದುವೆಗಾಗಿ ಮತಾಂತರ ಆಗುವುದಕ್ಕೆ ವೈಯಕ್ತಿವಾಗಿ ಅನುಮೋದನೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅನೇಕ ಸಂದರ್ಭದಲ್ಲಿ ಬಲವಂತವಾಗಿ, ದುರಾಸೆಗಾಗಿ ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ. ಸಹಜ ಹಾಗೂ ಬಲವಂತದ ಮತಾಂತರದ ಮದುವೆಯ ನಡುವೆ ತುಂಬ ವ್ಯತ್ಯಾಸಗಳಿವೆ. ಇದೀಗ ಮತಾಂತರ ತಡೆ ಕಾಯ್ದೆಯನ್ನು ಜಾರಿಗೊಳಿಸಿರುವ ಸರ್ಕಾರಗಳು ಈ ಎಲ್ಲ ಅಂಶಗಳನ್ನೂ ಪರಿಗಣಿಸಿವೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಮತ್ತೆ ಶುರುವಾಯ್ತು ಲಾಕ್​ಡೌನ್​: ರೂಪಾಂತರಿ ಕೊರೊನಾ ತಡೆಯಲು ಲಾಕ್​ಡೌನ್ ಘೋಷಿಸಿದ ಮಹಾರಾಷ್ಟ್ರ ಸರ್ಕಾರ