ರಾಂಚಿಯಲ್ಲಿ ಪ್ರಧಾನಿ ಮೋದಿಗೆ ‘ಜಾವಾ’ದೊಂದಿಗೆ ಸ್ವಾಗತ, ಇದು ಕರ್ಮ ಹಬ್ಬದ ಪ್ರತೀಕ

|

Updated on: Sep 15, 2024 | 2:15 PM

ರಾಂಚಿಯಲ್ಲಿ ಪ್ರಧಾನಿ ಮೋದಿಗೆ ಜಾವಾದೊಂದಿಗೆ ಅದ್ಧೂರಿ ಸ್ವಾಗತಿ ಸಿಕ್ಕಿದೆ. ಈ ದಿನದಂದು ಜಾರ್ಖಂಡ್​ ಜನರಿಗೆ ಅಭಿವೃದ್ಧಿಯ ಭಾಗ್ಯ ಸಿಕ್ಕಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್​ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲು ರಾಂಚಿಗೆ ತಲುಪಿದಾಗ ಏರ್​ಪೋರ್ಟ್​ನಲ್ಲಿ ಮಹಿಳೆಯರು ಕರ್ಮ ಹಬ್ಬದ ಪ್ರತೀಕವಾದ ಜಾವಾದೊಂದಿಗೆ ವಿಶಿಷ್ಟ ಸ್ವಾಗತ ಕೋರಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಮಾತನಾಡಿ,  ಈ ದಿನದಂದು ಜಾರ್ಖಂಡ್​ ಜನರಿಗೆ ಅಭಿವೃದ್ಧಿಯ ಭಾಗ್ಯ ಸಿಕ್ಕಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಜಾವಾ ಎಂದರೆ ಹೊಸ ಫಸಲು ಎಂದರ್ಥ, ಒಂದು ಬುಟ್ಟಿಯಲ್ಲಿ ಭತ್ತ, ಗೋಧಿ, ರಾಗಿ ಹೀಗೆ ಧಾನ್ಯಗಳನ್ನಿರಿಸಿ ಮೊಳಕೆ ಬರಿಸುತ್ತಾರೆ. ಇದು ರಾಂಚಿಯಲ್ಲಿ ನಡೆಯುವ ಕರ್ಮ ಹಬ್ಬದ ಪ್ರತೀಕ. ಕರಮ್, ಕರ್ಮ ಅಥವಾ ಜಾವಾ ಹಬ್ಬವು ಜಾರ್ಖಂಡ್‌ನ ಬುಡಕಟ್ಟು ಮತ್ತು ಸ್ಥಳೀಯರ ಸಂಸ್ಕೃತಿಗೆ ಸಂಬಂಧಿಸಿದ ಹಬ್ಬವಾಗಿದೆ.

ಇದು ಸಹೋದರ-ಸಹೋದರಿಯ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಭಾದ್ರಪದ ಮಾಸದ ಏಕಾದಶಿಯಲ್ಲಿ ಆಚರಿಸಲಾಗುವ ಕರಮ್ ಹಬ್ಬವು ಬುಡಕಟ್ಟು ಸಂಪ್ರದಾಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.

ಈ ದಿನದಂದು ಬುಡಕಟ್ಟು ಸಮುದಾಯದ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಕರಮ್ ದೇವರನ್ನು ಪೂಜಿಸುತ್ತಾರೆ. ಈ ಸಂದರ್ಭದಲ್ಲಿ, ಎಲ್ಲರೂ ಬಿಳಿ ಸೀರೆ ಮತ್ತು ಧೋತಿಯಂತಹ ಸಾಂಪ್ರದಾಯಿಕ ಉಡುಗೆಯಲ್ಲಿ ನೃತ್ಯ ಮಾಡುತ್ತಾರೆ.

ಕರಮ್ ಹಬ್ಬದ ಮುನ್ನಾದಿನದಿಂದ ಬುಡಕಟ್ಟು ಸಮುದಾಯಗಳು ಅದರ ತಯಾರಿಯನ್ನು ಪ್ರಾರಂಭಿಸುತ್ತವೆ. ಬುಡಕಟ್ಟು ಸಮುದಾಯವು ಈ ಹಬ್ಬಕ್ಕಾಗಿ ಕಾತುರದಿಂದ ಕಾಯುತ್ತದೆ, ಏಕೆಂದರೆ ಬುಡಕಟ್ಟು ಸಮಾಜದಲ್ಲಿ ಕರಮ್ ಹಬ್ಬದ ನಂತರವೇ ಮದುವೆಗಳು ಮತ್ತು ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಬುಡಕಟ್ಟು ಸಮುದಾಯದ ಜನರು ತಮ್ಮ ಮನೆಯ ಅಂಗಳದಲ್ಲಿ ಕರಮ್ ಮರದ ಕೊಂಬೆಯನ್ನು ನೆಡುತ್ತಾರೆ.

ಬುಡಕಟ್ಟು ಮಹಿಳೆಯರು ಕರಮ್ ದಳವನ್ನು ಪೂಜಿಸುತ್ತಾರೆ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಅದರ ಸುತ್ತಲೂ ನೃತ್ಯ ಮಾಡುತ್ತಾರೆ. ಇದರಿಂದ ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಕರಮಪೂಜೆಯನ್ನು ನಡೆಸಲಾಗುತ್ತದೆ. ಸನಾತನ ಧರ್ಮದಲ್ಲಿ ಈ ದಿನಾಂಕವನ್ನು ಕರಮ್ ಏಕಾದಶಿ ಎಂದೂ ಕರೆಯುತ್ತಾರೆ.

ತೀಜ್ ಹಬ್ಬದ ಎರಡನೇ ದಿನ, ಹೆಣ್ಣು ಮಕ್ಕಳು ಮನೆ ಮನೆಗೆ ತೆರಳಿ ಅಕ್ಕಿ, ಗೋಧಿ, ಜೋಳದಂತಹ ವಿವಿಧ ಧಾನ್ಯಗಳನ್ನು ಸಂಗ್ರಹಿಸಿ ಪೂಜೆಗಾಗಿ ಬುಟ್ಟಿಯಲ್ಲಿ ಜಾವವನ್ನು ತಯಾರಿಸುತ್ತಾರೆ.
ಪೂಜೆಯ ನಂತರ ಅದನ್ನು ಪ್ರಸಾದವಾಗಿ ಎಲ್ಲರಿಗೂ ಹಂಚಲಾಗುತ್ತದೆ. ಜನರು ಈ ಪ್ರಸಾದದಂತಹ ಜಾವವನ್ನು ಪರಸ್ಪರರ ಕೂದಲು ಅಥವಾ ಕಿವಿಯಲ್ಲಿ ಇರಿಸುತ್ತಾರೆ ಮತ್ತು ಅವರಿಗೆ ಕರಮ್ ಹಬ್ಬದ ಶುಭಾಶಯಗಳನ್ನು ಕೋರುತ್ತಾರೆ.

ಕರಮ್ ಪೂಜೆಯ ಸಮಯದಲ್ಲಿ, ಕರ್ಮ ಮತ್ತು ಧರ್ಮ ಎಂಬ ಇಬ್ಬರು ಸಹೋದರರ ಕಥೆಯನ್ನು ಸಹ ಹೇಳಲಾಗುತ್ತದೆ. ಇದರ ಸಾರವು ಕರ್ಮದ ಮಹತ್ವವನ್ನು ವಿವರಿಸುತ್ತದೆ. ಈ ಕಥೆಯನ್ನು ಕೇಳದೆ ಕರಮ್ ಪೂಜೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಆಚರಿಸುವುದರಿಂದ ಗ್ರಾಮದಲ್ಲಿ ಸಮೃದ್ಧಿ ಉಂಟಾಗುತ್ತದೆ ಎಂದು ನಂಬಲಾಗಿದೆ.

ಕರಮ್ ದಿನದಂದು, ಪ್ರತಿ ಮನೆಯಲ್ಲೂ ಅನೇಕ ರೀತಿಯ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಕರಮ್ ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಮಹಿಳೆಯರು ವಿಶೇಷವಾಗಿ ತಮ್ಮ ಸಹೋದರರ ದೀರ್ಘಾಯುಷ್ಯ ಮತ್ತು ಉತ್ತಮ ಭವಿಷ್ಯಕ್ಕಾಗಿ ಉಪವಾಸ ಮಾಡುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:03 pm, Sun, 15 September 24