ಭಾರತದ ಭವಿಷ್ಯದ ಕುರಿತು ಯೋಚಿಸಿ ಅಭಿವೃದ್ಧಿ ಯೋಜನೆಗಳನ್ನು ಭಾರತೀಯರಿಗೆ ನೀಡುವುದು ಪ್ರಧಾನಿ ಮೋದಿಯವರ ಮಂತ್ರವಾಗಿದೆ. ಇದೀಗ ಇಂತಹ ಒಂದು ವಿಶಿಷ್ಟ ರೈಲ್ವೇ ಅಭಿವೃದ್ಧಿ ಯೋಜನೆ ಭಾರತೀಯರಿಗೆ ಸಿಗಲಿದೆ.
ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ (Ashwin Vaishnav), ಮೋದಿ ನೀಡಿರುವ ರೈಲು ನಿಲ್ದಾಣಗಳ ಮೇಲಿನ ರೂಫ್ ಪ್ಲಾಜಾ ಕಲ್ಪನೆಯನ್ನು ಹಂಚಿಕೊಂಡಿದ್ದಾರೆ. ಈ ಯೋಜನೆ ಮುಂದಿನ 50 ವರ್ಷಗಳವರೆಗೆ ರೈಲ್ವೇ ಮೂಲಸೌಕರ್ಯವನ್ನು ಪರಿವರ್ತಿಸುತ್ತದೆ. “ಪ್ರಧಾನಿಯವರು ನಮಗೆ 50 ರೈಲ್ವೆ ಸ್ಟೇಷನ್ ಗಳನ್ನು ಅಭಿವೃದ್ಧಿಗೊಳಿಸಲು ಟಾರ್ಗೆಟ್ ನೀಡಿದ್ದರು. ನಾವು ಅವರ ಆದೇಶದಂತೆ 50 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಯೋಜನೆಗಳನ್ನು ಮೋದಿಯವರ ಬಳಿ ಸಮಾಲೋಚನೆ ನಡೆಸಿದೆವು. ಸುಮಾರು 2 ಗಂಟೆಗಳ ಕಾಲ ಅಭಿವೃದ್ಧಿ ಯೋಜನೆಯನ್ನು ಪ್ರಧಾನಿಯವರಿಗೆ ತಿಳಿಸಿದ ನಂತರವೂ ಅವರು ಆ ಯೋಜನೆ ನೋಡಿ ಸಂತೋಷ ಪಡಲಿಲ್ಲ. ನಂತರ ಆ ದಿನ ರಾತ್ರಿ ನನಗೆ ಕರೆ ಮಾಡಿ ನೀವು ಮಾಡಿರು ಯೋಜನೆ ಇಂದಿಗೆ ಪರಿಪೂರ್ಣವಾಗಿದೆ. ಆದರೆ ಭಾರತದ ಭವಿಷ್ಯವನ್ನು ನೋಡಿದರೆ ಈ ಯೋಜನೆಯಲ್ಲಿ ಸುಧಾರಣೆ ಬೇಕಾಗುತ್ತದೆ ಎಂದರು.” ಎಂದು ಅಶ್ವಿನ್ ವೈಷ್ಣವ್ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅದಾನಿ ಟೋಪಿ ಹಾಕಿದ್ದು ಹೀಗೆ ಎಂದು ವ್ಯಂಗ್ಯದ ಟ್ವೀಟ್ ಮೂಲಕ ಕುಟುಕಿದ ಮಹುವಾ ಮೊಯಿತ್ರಾ
“ನಂತರ ಮೋದಿಯವರೇ ಒಂದು ಉಪಾಯವನ್ನೂ ನೀಡಿದರು. ರೈಲ್ವೆ ನಿಲ್ದಾಣಗಳ ಮೇಲೆ ರೂಫ್ ಪ್ಲಾಜಾ ಮಾಡಬಹುದು. ಇದರಿಂದ ನಗರ ಅಭಿವೃದ್ಧಿಯೂ ಆಗುತ್ತದೆ, ಜೊತೆಗೆ ಅನಗತ್ಯವಾಗಿ ನಿಲ್ದಾಣದ ಜಾಗವು ವ್ಯರ್ಥವಾಗುವುದಿಲ್ಲ. ಸಾಮಾನ್ಯವಾಗಿ ನಗರದ ಮಧ್ಯ ಭಾಗದಲ್ಲಿ ಅಂಗಡಿ-ಮುಂಗಟ್ಟುಗಳಿಗೆ ಜಾಗೆಯ ತೊಂದರೆಯಿರುತ್ತದೆ. ರೂಫ್ ಪ್ಲಾಜಾ ಆ ತೊಂದರೆಯನ್ನು ನಿವಾರಿಸಿ ಅನೇಕ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತದೆ. ರೈಲ್ವೆ ನಿಲ್ದಾಣ ಬರಿ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಬಾರದು, ಸಾಮಾನ್ಯ ಜನರಿಗೂ ಉಪಯೋಗವಾಗಬೇಕು ಎಂದು ಮೋದಿ ಅವರು ಒಂದು ಉತ್ತಮ ಉಪಾಯ ನೀಡಿದ್ದಾರೆ” ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ
Published On - 4:42 pm, Thu, 9 February 23