ಕೊರೊನಾ ಲಸಿಕೆ ಹಂಚಿಕೆ: ಪ್ರಧಾನಿ ಮೋದಿ ಜೊತೆ ನಾಳೆ ಸಿಎಂಗಳ ಮಹತ್ವದ ಸಭೆ

| Updated By: KUSHAL V

Updated on: Nov 23, 2020 | 6:29 PM

ದೆಹಲಿ: ಕೊರೊನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಅದನ್ನು ದೇಶದಾದ್ಯಂತ ಹಂಚುವ ಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ನಾಳೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ವರ್ಚುವಲ್ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ, ಸಂಗ್ರಹ ಘಟಕಗಳ ಸ್ಥಾಪನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ. ನೀತಿ ಆಯೋಗದ ಸದಸ್ಯ ವಿನೋದ್ ಪೌಲ್, ಜನಪ್ರತಿನಿಧಿಗಳ ಸಭೆಯಲ್ಲಿ ಯೋಜನೆಯ ರೂಪುರೇಷೆ ಮಂಡಿಸಲಿದ್ದಾರೆ. ಈ ವರ್ಷಾಂತ್ಯಕ್ಕೆ ಆಕ್ಸ್​ಫರ್ಡ್ ವಿವಿಯ ಆಸ್ಟ್ರಾ ಜೆನೆಕಾ  ಲಸಿಕೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಬಹುದು. ಅನುಮತಿ ಸಿಕ್ಕರೆ […]

ಕೊರೊನಾ ಲಸಿಕೆ ಹಂಚಿಕೆ: ಪ್ರಧಾನಿ ಮೋದಿ ಜೊತೆ ನಾಳೆ ಸಿಎಂಗಳ ಮಹತ್ವದ ಸಭೆ
Follow us on

ದೆಹಲಿ: ಕೊರೊನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಅದನ್ನು ದೇಶದಾದ್ಯಂತ ಹಂಚುವ ಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ನಾಳೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ವರ್ಚುವಲ್ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ, ಸಂಗ್ರಹ ಘಟಕಗಳ ಸ್ಥಾಪನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.

ನೀತಿ ಆಯೋಗದ ಸದಸ್ಯ ವಿನೋದ್ ಪೌಲ್, ಜನಪ್ರತಿನಿಧಿಗಳ ಸಭೆಯಲ್ಲಿ ಯೋಜನೆಯ ರೂಪುರೇಷೆ ಮಂಡಿಸಲಿದ್ದಾರೆ. ಈ ವರ್ಷಾಂತ್ಯಕ್ಕೆ ಆಕ್ಸ್​ಫರ್ಡ್ ವಿವಿಯ ಆಸ್ಟ್ರಾ ಜೆನೆಕಾ  ಲಸಿಕೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಬಹುದು. ಅನುಮತಿ ಸಿಕ್ಕರೆ ಪುಣೆಯ ಸೀರಮ್ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾ ಮೂಲಕ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ. ಯಾವುದೇ ಅಡೆತಡೆಗಳಿಲ್ಲದೆ ಪ್ರಯೋಗಗಳು ಮುಂದುವರಿದರೆ 2021ರ ಜನವರಿ ವೇಳೆಗೆ ಮೂರನೇ ಹಂತದ ಪರೀಕ್ಷೆ ಮುಗಿಯಬಹುದು ಎಂದು ಪೌಲ್ ತಿಳಿಸಿದ್ದಾರೆ.

ಬ್ರಿಟನ್​ನಿಂದ ಲಸಿಕೆ ತರಿಸಿಕೊಂಡರೂ ಸಂಗ್ರಹ ಸಾಮರ್ಥ್ಯದ ಕೊರತೆ ಉಂಟಾಗಬಹುದು. ಹೀಗಾಗಿ, ಲಸಿಕೆ ಹಂಚಲು ರಾಜ್ಯಗಳು ಮಾಡಿಕೊಳ್ಳಬೇಕಾದ ತಯಾರಿ ಬಗ್ಗೆ ಪೌಲ್ ಪ್ರಸ್ತಾಪಿಸಲಿದ್ದಾರೆ. ಆಕ್ಸ್​ಫರ್ಡ್ ವಿವಿ ಲಸಿಕೆಯ ಮೂರನೇ ಹಂತದ ಪರೀಕ್ಷೆಯನ್ನು ಸೀರಮ್ ಇನ್​ಸ್ಟಿಟ್ಯೂಟ್ ನಡೆಸುತ್ತಿದೆ. ಅಲ್ಲದೇ, ದೇಶದಲ್ಲಿ ಒಟ್ಟು 5 ಲಸಿಕೆಗಳ ಪರೀಕ್ಷೆಗಳು ನಡೆಯುತ್ತಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಸಿಕೆ ತಲುಪಬೇಕು ಎಂಬುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಜಿ20 ಶೃಂಗಸಭೆಯಲ್ಲೂ ಚರ್ಚೆ
ಕೊರೊನಾ ಲಸಿಕೆ ಹಂಚಿಕೆ ಕುರಿತು ರವಿವಾರ ನಡೆದ ಜಿ20 ಶೃಂಗಸಭೆಯಲ್ಲಿ ಚರ್ಚಿಸಲಾಗಿದೆ. ಲಸಿಕೆಯನ್ನು ಎಲ್ಲರಿಗೂ ತಲುಪಿಸಬಲ್ಲ ಪರಿಣಾಮಕಾರಿ ಯೋಜನೆ ರೂಪಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ನಾಯಕರು ತಿಳಿಸಿದರು.