ರಾಜ್ಯಸಭೆಗೆ ಗೈರಾದ ಬಿಜೆಪಿ ಸಂಸದರ ಪಟ್ಟಿ ಕೇಳಿದ ಪ್ರಧಾನಿ ಮೋದಿ; ಹೆಸರು ನೀಡುವ ಜವಾಬ್ದಾರಿ ಪ್ರಲ್ಹಾದ್ ಜೋಶಿಯವರದ್ದು..

ಮಸೂದೆಗಳ ಅಂಗೀಕಾರ ಆಗುವಾಗ ಮತಗಳ ಅಗತ್ಯತೆ ಇರುತ್ತದೆ. ಹೀಗೆ ಬಿಜೆಪಿ ಸಂಸದರೇ ಗೈರಾದರೆ ಸರ್ಕಾರಕ್ಕೆ ಖಂಡಿತ ಹಿನ್ನಡೆಯಾಗುತ್ತದೆ. ಅದು ಸಂಸತ್ತಿನ ಶಿಸ್ತುಪಾಲನೆಯೂ ಅಲ್ಲ.

ರಾಜ್ಯಸಭೆಗೆ ಗೈರಾದ ಬಿಜೆಪಿ ಸಂಸದರ ಪಟ್ಟಿ ಕೇಳಿದ ಪ್ರಧಾನಿ ಮೋದಿ; ಹೆಸರು ನೀಡುವ ಜವಾಬ್ದಾರಿ ಪ್ರಲ್ಹಾದ್ ಜೋಶಿಯವರದ್ದು..
ಪ್ರಧಾನಿ ಮೋದಿ
Updated By: Lakshmi Hegde

Updated on: Aug 11, 2021 | 2:17 PM

ನ್ಯಾಯಮಂಡಳಿ ಸುಧಾರಣೆಗಳು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಮಸೂದೆ 2021ನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕರಿಸುವ ಸಂದರ್ಭದಲ್ಲಿ ಗೈರಾಗಿರುವ ಬಿಜೆಪಿ ಸಂಸದರ ಮೇಲೆ ಈಗ ಪ್ರಧಾನಿ ನರೇಂದ್ರ ಮೋದಿ ಕೆಂಗಣ್ಣು ಬೀರಿದ್ದಾರೆ. ಈ ಮಸೂದೆ ಸೇರಿ, ಪ್ರಮುಖ ಬಿಲ್​ಗಳನ್ನು ಪಾಸ್​ ಮಾಡುವಾಗ ಗೈರಾಗಿರುವ ಬಿಜೆಪಿ ಸಂಸದರ ಪಟ್ಟಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಸೂದೆಗಳ ಅಂಗೀಕಾರ ಆಗುವಾಗ ಮತಗಳ ಅಗತ್ಯತೆ ಇರುತ್ತದೆ. ಹೀಗೆ ಬಿಜೆಪಿ ಸಂಸದರೇ ಗೈರಾದರೆ ಸರ್ಕಾರಕ್ಕೆ ಖಂಡಿತ ಹಿನ್ನಡೆಯಾಗುತ್ತದೆ. ಅದು ಸಂಸತ್ತಿನ ಶಿಸ್ತುಪಾಲನೆಯೂ ಅಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ. ಹಾಗೇ, ಕಳೆದ ಸಂಸದೀಯ ಪಕ್ಷದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಮೋದಿ, ಗೈರಾದ ಸಂಸದರ ಪಟ್ಟಿಯನ್ನು ಕೇಳಿದ್ದಾರೆ ಎನ್ನಲಾಗಿದೆ.

ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ನ್ಯಾಯಮಂಡಳಿ ಸುಧಾರಣಾ ಬಿಲ್​​ ರಾಜ್ಯಸಭೆಯಲ್ಲೂ ಮಂಡಿಸಲ್ಪಟ್ಟಿತು. ಆದರೆ ಅದಕ್ಕೆ ಮತ ಹಾಕಲು ಬಿಜೆಪಿ ಸಂಸದರ ಹಾಜರಾತಿ ತುಂಬ ಕಡಿಮೆ ಇತ್ತು. ಇದರಿಂದಾಗಿ ಪ್ರತಿಪಕ್ಷಗಳು ಗಲಾಟೆಯನ್ನೂ ಎಬ್ಬಿಸುವಂತಾಗಿತ್ತು. ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಗೈರಿನ ಬಗ್ಗೆ ತಿಳಿದ ಪ್ರಧಾನಿ ಲಿಸ್ಟ್​ ಮಾಡಿಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಲೋಕಸಭೆಯಿರಲಿ, ರಾಜ್ಯಸಭೆ ಇರಲಿ ಬಿಜೆಪಿ ಸಂಸದರು ಎಲ್ಲರೂ ಕಡ್ಡಾಯವಾಗಿ ಹಾಜರು ಇರಬೇಕು ಎಂದು ಸೋಮವಾರ ಬಿಜೆಪಿ ವಿಪ್​ ಕೂಡ ಜಾರಿ ಮಾಡಿದೆ.

ಇದನ್ನೂ ಓದಿ: Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್

ಶಾಲೆ ತೆರೆಯಲು ಸಿದ್ಧವಾಗಿರುವ ರಾಜ್ಯಗಳಿಗೆ ಮುನ್ನೆಚ್ಚರಿಕೆ, ಸಲಹೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

Published On - 2:08 pm, Wed, 11 August 21