
ನವದೆಹಲಿ, ಆಗಸ್ಟ್ 7: ರಾಷ್ಟ್ರೀಯ ಕೈಮಗ್ಗ ದಿನದ ದಿನ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಅವರು ಸ್ವದೇಶಿ ಸಂದೇಶವನ್ನು ಸಾರಿದ್ದರು. ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟ ಮತ್ತು ಸ್ವದೇಶಿ ಚಳುವಳಿಯ ಅಡಿಪಾಯವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಸಾಂಪ್ರದಾಯಿಕ ನೇಕಾರ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಜನರು ಕೈಮಗ್ಗದ ಯಾವುದಾದರೂ ಒಂದು ವಸ್ತುವನ್ನಾದರೂ ಖರೀದಿಸಲು ಮನವಿ ಮಾಡಿದರು.
ಇತಿಹಾಸದ ಒಂದು ಮಹತ್ವದ ಅಧ್ಯಾಯವನ್ನು ನೆನಪಿಸಿಕೊಳ್ಳುವ ಮೂಲಕ ಪ್ರಧಾನಿ ತಮ್ಮ ವಿಡಿಯೋ ಸಂದೇಶವನ್ನು ಪ್ರಾರಂಭಿಸಿದರು. “ಸ್ನೇಹಿತರೇ, ನಾವು ಆಗಸ್ಟ್ 7, 1905 ಅನ್ನು ಮರೆಯಬಾರದು. ಆಗಸ್ಟ್ 7, 1905ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಸ್ವದೇಶಿ ಚಳುವಳಿ ಪ್ರಾರಂಭವಾಯಿತು. ಸ್ವಾವಲಂಬಿ ಭಾರತದ ಅಡಿಪಾಯ ಹಾಕಲಾಯಿತು. ದೇಶವಾಸಿಗಳು ಬ್ರಿಟಿಷರ ವಿರುದ್ಧ ಯುದ್ಧವನ್ನು ನಡೆಸಿದರು. ಭಾರತದ ಪ್ರತಿಯೊಬ್ಬ ವ್ಯಕ್ತಿಯು ಆ ಪಡೆಗಳನ್ನು ಸೇರಿಕೊಂಡರು” ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಮಾತು
ಫ್ರೆಂಡ್‌ಶಿಪ್ ಡೇ ರೀತಿಯೇ ಕೈಮಗ್ಗ ದಿನ ಆಚರಿಸಿ:
“ಕಳೆದ ವಾರವಷ್ಟೇ ನೀವೆಲ್ಲರೂ ಸ್ನೇಹಿತರ ದಿನವನ್ನು ಆಚರಿಸಿದ್ದೀರಿ. ಅದೇ ಉತ್ಸಾಹದಿಂದ ಕೈಮಗ್ಗದ ದಿನವನ್ನು ಆಚರಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಕೈಮಗ್ಗ ದಿನವನ್ನು ಆಚರಿಸುವುದು ಎಂದರೆ ಮನೆಯಲ್ಲಿ ಬಟ್ಟೆ ತಯಾರಿಸುವ ಪ್ರತಿಯೊಂದು ಬಡ ಕುಟುಂಬ ಮತ್ತು ನೇಕಾರ ಕುಟುಂಬವನ್ನು ಪ್ರೋತ್ಸಾಹಿಸುವುದು. ಸಣ್ಣ ಕುಟುಂಬಗಳಿಗೆ ಸಬಲೀಕರಣ ನೀಡೋಣ. ಕೈಮಗ್ಗ ದಿನದಂದು ಹ್ಯಾಂಡ್ಲೂಮ್ನ ಏನನ್ನಾದರೂ ವಸ್ತುವನ್ನು ಖರೀದಿಸಲು ಮರೆಯದಿರಿ” ಎಂದು ಮೋದಿ ಮನವಿ ಮಾಡಿದ್ದಾರೆ.
Tomorrow, 7th August is National Handloom Day. Let’s make India’s handloom diversity popular.
Share your videos with your favourite handloom products, including GRWM videos on social media.
Don’t forget to use #NationalHandloomDay. pic.twitter.com/zoFdTXphRL
— Narendra Modi (@narendramodi) August 6, 2026
ರಾಷ್ಟ್ರೀಯ ಕೈಮಗ್ಗ ದಿನವನ್ನು ಕೇವಲ ಸಾಂಕೇತಿಕ ಆಚರಣೆಯಾಗಿ ನೋಡದೆ, ಕೈಮಗ್ಗ ಉತ್ಪನ್ನಗಳನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳುವಂತೆ ಪ್ರಧಾನಿ ಮೋದಿ ಜನರಿಗೆ ಮನವಿ ಮಾಡಿದರು. ಕೈಮಗ್ಗದ ಬಟ್ಟೆಗಳು ಮತ್ತು ಇತರ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಹಾಗೂ ಧರಿಸುವ ಮೂಲಕ ಈ ಕ್ಷೇತ್ರಕ್ಕೆ ಬೆಂಬಲ ನೀಡಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಫೇಸ್ಬುಕ್ನಿಂದ ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ವಿವಾದ; ಕೊನೆಗೂ ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಕ್ಷಮೆಯಾಚನೆ
ನೇಕಾರರಿಗೆ ಬೆಂಬಲ:
ಪ್ರತಿಯೊಂದು ಕೈಮಗ್ಗ ಉತ್ಪನ್ನದ ಹಿಂದೆ ಕುಶಲಕರ್ಮಿಯ ಕಠಿಣ ಪರಿಶ್ರಮ, ಕೌಶಲ್ಯ ಮತ್ತು ಸಮರ್ಪಣಾ ಭಾವದ ಕಥೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಉತ್ಪನ್ನಗಳನ್ನು ಖರೀದಿಸುವುದರಿಂದ ದೇಶಾದ್ಯಂತ ಇರುವ ಲಕ್ಷಾಂತರ ನೇಕಾರರ ಜೀವನೋಪಾಯಕ್ಕೆ ಬಲ ಸಿಗುತ್ತದೆ ಎಂದರು. ಭಾರತದ ನೇಕಾರ ಸಮುದಾಯಗಳ ಕೊಡುಗೆಯ ಬಗ್ಗೆಯೂ ಮಾತನಾಡಿದ ಮೋದಿ, ಈ ಕುಶಲಕರ್ಮಿಗಳು ಸಾಂಪ್ರದಾಯಿಕ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ತಮ್ಮ ಕೌಶಲ್ಯಗಳನ್ನು ಒಂದಷ್ಟು ತಲೆಮಾರುಗಳಿಂದ ಮತ್ತೊಂದಕ್ಕೆ ಬಳುವಳಿಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದರು.
Today, on National Handloom Day, we celebrate India’s rich and vibrant handloom heritage. We also salute the skill, creativity and dedication of our weavers and artisans. For generations, they have preserved and enriched our traditions.
Our Government will keep supporting the…
— Narendra Modi (@narendramodi) August 7, 2026
ವಿಡಿಯೋ ಮಾಡಲು ಮೋದಿ ಕರೆ:
ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ‘ಗೆಟ್ ರೆಡಿ ವಿತ್ ಮಿ’ (GRWM) ವಿಡಿಯೋಗಳನ್ನು ಮಾಡುವಂತೆ ಯುವಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಟ್ರೆಂಡ್ ಭಾರತದ ಶ್ರೀಮಂತ ನೇಕಾರಿಕೆ ಪರಂಪರೆಯನ್ನು ಪ್ರದರ್ಶಿಸಲು ಮತ್ತು ನೇಕಾರ ಕುಟುಂಬಗಳಿಗೆ ಬೆಂಬಲ ನೀಡಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಬಡ ನೇಕಾರ ಕುಟುಂಬಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮೂಲಕ ಆತ್ಮನಿರ್ಭರ ಭಾರತವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ನಾವೆಲ್ಲರೂ ಕನಿಷ್ಠ ಒಂದು ಕೈಮಗ್ಗ ಉತ್ಪನ್ನವನ್ನು ಖರೀದಿಸೋಣ, ಅದರ ಬಗ್ಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋಣ. ಇದರಿಂದ ನಮ್ಮ ನೇಕಾರ ಸಹೋದರ-ಸಹೋದರಿಯರ ಪ್ರತಿಭೆ ಮತ್ತು ಕೌಶಲ್ಯವು ಭಾರತ ಮತ್ತು ಪ್ರಪಂಚದಾದ್ಯಂತ ಜನರನ್ನು ತಲುಪುತ್ತದೆ” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 pm, Thu, 6 August 26