ಕೊರೊನಾ 2ನೆ ಅಲೆ ಅಪ್ಪಳಿಸುವ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ 3 ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಭೇಟಿ

| Updated By: ಸಾಧು ಶ್ರೀನಾಥ್​

Updated on: Nov 28, 2020 | 10:43 AM

ಕೊರೊನಾ ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಲು ಪ್ರಧಾನಿ ಮೋದಿ 3 ನಗರಗಳ ಲಸಿಕೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅವರು, ಅಹಮದಾಬಾದ್ ತಲುಪಿದ್ದಾರೆ.

ಕೊರೊನಾ 2ನೆ ಅಲೆ ಅಪ್ಪಳಿಸುವ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ 3 ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಭೇಟಿ
ಸಾಂದರ್ಭಿಕ ಚಿತ್ರ
Follow us on

ಅಹಮದಾಬಾದ್: ಕೊರೊನಾ ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್, ಪುಣೆ ಮತ್ತು ಹೈದರಾಬಾದ್ ನಗರಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ, ಅಹಮದಾಬಾದ್ ತಲುಪಿರುವ ಪ್ರಧಾನಿ ಮೋದಿ ನಗರದಿಂದ 20 ಕಿಮೀ ದೂರದ ಝೈಡಸ್ ಬಯೋಟೆಕ್ ಪಾರ್ಕ್​ಗೆ ತೆರಳಲಿದ್ದಾರೆ. ಝೈಕೋವಿಡ್ ಲಸಿಕೆ ತಯಾರಿಸಿರುವ ಝೈಡಸ್ ಬಯೋಪಾರ್ಕ್ ಸಂಸ್ಥೆ ಎರಡನೇ ಹಂತದ ಪ್ರಯೋಗ ನಡೆಸುವ ತಯಾರಿಯಲ್ಲಿದೆ.

ಮಧ್ಯಾಹ್ನದ ಹೊತ್ತಿಗೆ ಪ್ರಧಾನಿ ಮೋದಿ ಅಹಮದಾಬಾದ್​ನಿಂದ ಹೈದರಾಬಾದ್​ಗೆ ತೆರಳಲಿದ್ದಾರೆ. 3 ನೇ ಹಂತದ ಪ್ರಯೋಗದಲ್ಲಿರುವ ಹೈದರಾಬಾದ್​ನ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆ ತಯಾರಿಯ ಪರಿಶೀಲನೆ ನಡೆಸಲಿದ್ದಾರೆ. ನಂತರ, ಅಹಮದಾಬಾದ್​ನಿಂದ ಪುಣೆಗೆ ಭೇಟಿ ನೀಡಲಿರುವ ಅವರು, ಪುಣೆಯ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಆಸ್ಟ್ರೋಜೆನೆಕಾ ಮತ್ತು ಆಕ್ಸ್​ಫರ್ಡ್ ವಿವಿ ತಯಾರಿಸಿರುವ ಲಸಿಕೆ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಈ ಮೂರು ಲಸಿಕೆ ತಯಾರಿಕಾ ಘಟಕಗಳಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. ಕೊರೊನಾ ಎರಡನೆ ಅಲೆ ಅಪ್ಪಳಿಸುವ ಬೆನ್ನಲ್ಲೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:  ಕೊರೊನಾ ನಿರ್ಲಕ್ಷ್ಯ ಬೇಡ, ವೈರಸ್​ ಎದುರಿಸಲು ಸರ್ವಸನ್ನದ್ಧವಾಗಿರಿ: ಪ್ರಧಾನಿ ಮೋದಿ ಕರೆ