Cyclone Yaas: ಯಾಸ್​ ಚಂಡಮಾರುತದಿಂದಾದ ಹಾನಿ ಪರಿಶೀಲನೆಗೆ ನಾಳೆ ಒಡಿಶಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

|

Updated on: May 27, 2021 | 4:39 PM

ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ, ಪಶ್ಚಿಮ ಮೇದಿನಿಪುರ, ಬಂಕುರಾ, ದಕ್ಷಿಣ 24 ಪರಗಣ ಮತ್ತು ಜಾಗ್ರಮ್​ ಜಿಲ್ಲೆಗಳಲ್ಲಿ ಹಾನಿಯನ್ನುಂಟು ಮಾಡಿದೆ.

Cyclone Yaas: ಯಾಸ್​ ಚಂಡಮಾರುತದಿಂದಾದ ಹಾನಿ ಪರಿಶೀಲನೆಗೆ ನಾಳೆ ಒಡಿಶಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಯಾಸ್​ ಚಂಡಮಾರುತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಮೇ 28) ಒಡಿಶಾಕ್ಕೆ ಭೇಟಿ ನೀಡಲಿದ್ದಾರೆ. ನರೇಂದ್ರ ಮೋದಿ ಭುವನೇಶ್ವರ್​ಗೆ ತೆರಳಲಿದ್ದು, ಅಲ್ಲಿಂದ ಬಾಳಾಸೋರ್, ಭದ್ರಕ್​, ಪುರ್ಬಾ ಮೇದಿನಿಪುರ್​​​​ನಲ್ಲಿ ಉಂಟಾದ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಅಲ್ಲಿನ ಸಿಎಂ, ಉನ್ನತ ಅಧಿಕಾರಿಗಳೊಟ್ಟಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಹಾಗೇ ಪಶ್ಚಿಮ ಬಂಗಾಳದ ಪರಿಸ್ಥಿತಿ ಬಗ್ಗೆಯೂ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ.

ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ, ಪಶ್ಚಿಮ ಮೇದಿನಿಪುರ, ಬಂಕುರಾ, ದಕ್ಷಿಣ 24 ಪರಗಣ ಮತ್ತು ಜಾಗ್ರಮ್​ ಜಿಲ್ಲೆಗಳಲ್ಲಿ ಹಾಗೂ ಓಡಿಶಾದ ಭದ್ರಕ್​, ಜಗತ್​​ಸಿಂಗ್​ಪುರ್​, ಕೇಂದ್ರಪರ, ಜೈಪುರ, ಕಿಯೋಂಜರ್​ ಮತ್ತು ಮಯೂರ್​ಭಂಜ್​ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಉಂಟು ಮಾಡಿದೆ.
ಜಾರ್ಖಂಡ್​​ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇಲ್ಲಿಯವರೆಗೆ 15,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ತೌಕ್ತೆ ಚಂಡಮಾರುತದಿಂದ ಉಂಟಾದ ಹಾನಿ ಪರಿಶೀಲನೆಗಾಗಿ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಗುಜರಾತ್​ಗೆ ಭೇಟಿಕೊಟ್ಟು, ವೈಮಾನಿಕ ಸಮೀಕ್ಷೆ ನಡೆಸಿದ್ದರು. ಪರಿಹಾರವನ್ನೂ ಘೋಷಿಸಿದ್ದರು.

ಇದನ್ನೂ ಓದಿ: ಸೋಮವಾರದೊಳಗೆ ಕಟ್ಟಡ ಕಾರ್ಮಿಕರಿಗೆ ತಲುಪಲಿದೆ ಕೊವಿಡ್ ಪ್ಯಾಕೇಜ್: ಸಚಿವ ಶಿವರಾಮ್ ಹೆಬ್ಬಾರ್

Cyclone Yaas ಒಡಿಶಾ ಮತ್ತು ಬಂಗಾಳದಲ್ಲಿ ನಾಶನಷ್ಟಕ್ಕೆ ಕಾರಣವಾದ ಯಾಸ್ ಚಂಡಮಾರುತ, ಜಾರ್ಖಂಡ್​ನಲ್ಲಿ ಮುನ್ನೆಚ್ಚರಿಕೆ

Published On - 4:39 pm, Thu, 27 May 21