ತಮಿಳುನಾಡಿನಲ್ಲಿ 3000 ಬೆಡ್ಗಳ ಕೊವಿಡ್ ಆಸ್ಪತ್ರೆ ನಿರ್ಮಿಸಿದ ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಪಾಸ್ಟ್ರಕ್ಚರ್ ಕಂಪನಿ
ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಮೇಘಾ ಸಂಸ್ಥೆಯು ಹಲವು ರೀತಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಿದೆ. ಇದೀಗ ತಮಿಳುನಾಡು ರಾಜ್ಯದಲ್ಲೂ ಕೊರೊನಾ ಪೀಡಿತರ ನೆರವಿಗೆ ಧಾವಿಸಿದೆ. ತಮಿಳುನಾಡಿನಲ್ಲಿ 3 ಸಾವಿರ ಮೆಡಿಕಲ್ ಬೆಡ್ಗಳ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿದೆ.
ಚೆನ್ನೈ: ಕೊರೊನಾ 2ನೇ ಅಲೆಯ ಸಂಕಷ್ಟ ಕಾಲದಲ್ಲಿ ದೇಶದ ಜನರ ನೆರವಿಗೆ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು ಧಾವಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ತಮಿಳುನಾಡಿನಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿನ ಬೆಡ್ಗಳ ಕೊವಿಡ್ ಆಸ್ಪತ್ರೆಯನ್ನು ಆರಂಭಿಸಿದೆ. ಕೇವಲ 72 ಗಂಟೆಯಲ್ಲಿ 500 ಬೆಡ್ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿರುವುದು ವಿಶೇಷ.
ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಮೇಘಾ ಸಂಸ್ಥೆಯು ಹಲವು ರೀತಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಿದೆ. ಇದೀಗ ತಮಿಳುನಾಡು ರಾಜ್ಯದಲ್ಲೂ ಕೊರೊನಾ ಪೀಡಿತರ ನೆರವಿಗೆ ಧಾವಿಸಿದೆ. ತಮಿಳುನಾಡಿನಲ್ಲಿ 3 ಸಾವಿರ ಮೆಡಿಕಲ್ ಬೆಡ್ಗಳ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿದೆ. ಈಗಾಗಲೇ 660 ಬೆಡ್ಗಳ ಆಸ್ಪತ್ರೆ ನಿರ್ಮಿಸಲಾಗಿದೆ. ತಮಿಳುನಾಡಿನ ಮಧುರೈನಲ್ಲಿ ಕೇವಲ 72 ಗಂಟೆಯಲ್ಲಿ 500 ಆಕ್ಸಿಜನ್ ಬೆಡ್ಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿರುವುದು ವಿಶೇಷ. ತಮಿಳುನಾಡಿನ ರಾಜಧಾನಿ ಚೆನ್ನೈ, ಪ್ರಮುಖ ನಗರ ಮಧುರೈ ಸೇರಿದಂತೆ ಹಲವು ನಗರಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಸಮಾಜ ಸೇವಾ ಕಾರ್ಯದಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಹಾಗೂ ಕ್ರೆಡಾಯ್ ಕೂಡ ಕೈ ಜೋಡಿಸಿವೆ.
ಚೆನ್ನೈನ ವಿವಿಧ ಆಸ್ಪತ್ರೆಗಳಲ್ಲಿ ಮೇಘಾ ಎಂಜಿನಿಯರಿಂಗ್ ಕಂಪನಿಯು 1,070 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡುತ್ತಿದೆ. ಇದಕ್ಕೆ ಸಂಬಂಧಪಟ್ಟ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಈರೋಡ್ ಜಿಲ್ಲೆಯಲ್ಲಿ 200, ವೆಲ್ಲೂರಿನಲ್ಲಿ 250, ಅಂಬೂರಿನಲ್ಲಿ 100, ನಟರಂಬಲ್ಲಿಯಲ್ಲಿ 100, ಮೇಲವಿಶಾರಂನಲ್ಲಿ 100, ಅಯ್ಯಪಾಕಂನಲ್ಲಿ 200, ಸೋಲಿನಗರದಲ್ಲಿ 50, ವನಿಯಂಬಾಡಿಯಲ್ಲಿ 100, ವಲಜಾದಲ್ಲಿ 100 ಬೆಡ್ಗಳ ವ್ಯವಸ್ಥೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಇದುವರೆಗೂ 660 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ಬೇರೆ ಬೇರೆ ನಗರಗಳಲ್ಲಿ 3 ಸಾವಿರಕ್ಕಿಂತ ಹೆಚ್ಚಿನ ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಲಾಗುವುದು.
ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಪಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯ ಜೊತೆಗೆ ಕ್ರೆಡಾಯ್ ಹಾಗೂ ಜಿ ಸ್ಕ್ವೇರ್ ರಿಯಲ್ಟರ್ಸ್ ಕಂಪನಿಗಳು ಕೈ ಜೋಡಿಸಿರುವುದರಿಂದ ಆಕ್ಸಿಜನ್ ಬೆಡ್ ವ್ಯವಸ್ಥೆಯಿಂದ ಅನೇಕರ ಜೀವ ಉಳಿಸಲು ಸಾಧ್ಯವಾಗುತ್ತಿದೆ. ಈ ಮೂರು ಕಂಪನಿಗಳು ಸೇರಿ ಮಧುರೈನಲ್ಲಿ ಸರ್ಕಾರಿ ಆಸ್ಪತ್ರೆ ಸಮೀಪವೇ ಕೇವಲ 72 ಗಂಟೆಯಲ್ಲಿ 200 ಆಕ್ಸಿಜನ್ ಬೆಡ್ಗಳನ್ನ ನಿರ್ಮಾಣ ಮಾಡಿವೆ. ಮೇ 21ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಸೌಲಭ್ಯದ ಉದ್ಘಾಟನೆ ಮಾಡಿದ್ದಾರೆ. ಇನ್ನೂ 300 ಆಕ್ಸಿಜನ್ ಬೆಡ್ಗಳ ವ್ಯವಸ್ಥೆಯನ್ನು ಶೀಘ್ರಗತಿಯಲ್ಲಿ ಮಾಡಲಾಗುತ್ತಿದೆ. ಮಧುರೈನ ಈ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ರೀತಿ ಚೆನ್ನೈನ ಅಣ್ಣಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ಮತ್ತು ಒಮಂದೂರು ಸರ್ಕಾರಿ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಕೊರೊನಾ ವಿರುದ್ಧ ಹೋರಾಡುತ್ತಿರುವ ರೋಗಿಗಳಿಗೆ ಮೆಡಿಕಲ್ ಆಕ್ಸಿಜನ್ ಅವಶ್ಯಕತೆ ಜಾಸ್ತಿ ಇದೆ. ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ನೀಗಿಸಲು ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಶ್ರಮ ವಹಿಸುತ್ತಿದೆ. ಕಂಪನಿಯ ಮ್ಯಾನೇಜ್ಮೆಂಟ್ ಜೊತೆಗೆ ಉದ್ಯೋಗಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಸದ್ಯದಲ್ಲೇ 200 ಪ್ರೆಷರ್ ಸ್ವಿಂಗ್ ಆಬ್ಸರಪ್ಷನ್ ಪ್ಲಾಂಟ್ಗಳನ್ನು ಸ್ಥಾಪಿಸಲಿದೆ. ಜೊತೆಗೆ ಕ್ರಯೊಜನಿಕ್ ಆಕ್ಸಿಜನ್ ಟ್ಯಾಂಕ್ಗಳನ್ನು ಉತ್ಪಾದನೆ ಮಾಡುವ ಕಾರ್ಯ ಕೂಡ ನಡೆಯುತ್ತಿದೆ. ಇದಕ್ಕೆ ಡಿಆರ್‌ಡಿಓ ಮತ್ತು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಸಹಕಾರ ಕೊಟ್ಟಿವೆ. ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಆಸ್ಪತ್ರೆಗಳಿಗೆ ಉಚಿತವಾಗಿ ಮೆಡಿಕಲ್ ಆಕ್ಸಿಜನ್ ಪೂರೈಸುತ್ತಿದೆ. 11 ಕ್ರಯೋಜನಿಕ್ ಟ್ಯಾಂಕ್ಗಳನ್ನು ಆಮದು ಮಾಡಿಕೊಂಡು ತೆಲಂಗಾಣ ರಾಜ್ಯಕ್ಕೆ ದಾನವಾಗಿ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯ ನಿರ್ದೇಶಕ ಬಿ.ಶ್ರೀನಿವಾಸ್ ರೆಡ್ಡಿ, ಈಗ ನಮ್ಮ ದೇಶವು ಕೊರೊನಾದಂಥ ಭಯಾನಕ ವೈರಸ್ ವಿರುದ್ಧ ಹೋರಾಡುತ್ತಿದೆ. ದೇಶದ ಜನರ ಪ್ರಾಣ ರಕ್ಷಣೆ ಮಾಡುವುದು ನಮ್ಮ ಕಂಪನಿಯ ಜವಾಬ್ದಾರಿಯೂ ಆಗಿದೆ. ಈ ಜವಾಬ್ದಾರಿ ನಿಭಾಯಿಸಲು ಕಂಪನಿಯು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಗುರಿ ತಲುಪಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕ್ರೆಡಾಯ್ ತಮಿಳುನಾಡು ಘಟಕದ ಅಧ್ಯಕ್ಷ ಸುರೇಶ್ ಕೃಷ್ಣ ಪ್ರತಿಕ್ರಿಯಿಸಿ, ಕೇವಲ 72 ಗಂಟೆಯಲ್ಲಿ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ಟಕ್ಚರ್ ಕಂಪನಿಯು ಕಾರ್ಪೊರೇಟ್ ಹೊಣೆಗಾರಿಕೆ ಯೋಜನೆಯ ಜೊತೆಗೂಡಿ ಆಸ್ಪತ್ರೆ ನಿರ್ಮಿಸಿದ್ದು ಬಹಳ ಸಂತೋಷ ತಂದಿದೆ ಎಂದಿದ್ದಾರೆ.
ಜಿ ಸ್ವೇರ್ ರಿಯಲ್ಟರ್ಸ್ ಕಂಪನಿಯ ಪ್ರವರ್ತಕ ಬಾಲ ಪ್ರತಿಕ್ರಿಯಿಸಿ, ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ. ಮೇಘಾ ಎಂಜಿನಿಯಿರಿಂಗ್ ಅಂಡ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ಜೊತೆಗೂಡಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಇದೆ. ತಮಿಳುನಾಡಿನ ಆರೋಗ್ಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿ ಇಡೀ ತಂಡವನ್ನು ಪೋತ್ಸಾಹಿಸಿದರು’ ಎಂದು ಹೇಳಿದ್ದಾರೆ.
(MEIL Megha Engineering Infrastructures Limited Establishes More Than 3000 Beds for the Covid Affected in Tamilnadu)
ಇದನ್ನೂ ಓದಿ: ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪೆಂಡಾಲ್; ಆಮ್ಲಜನಕ ಕೊರತೆ ನೀಗಿಸಲು ತಮಿಳುನಾಡು ವೈದ್ಯನ ವಿನೂತನ ಕ್ರಮ
Published On - 4:00 pm, Thu, 27 May 21