ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪೆಂಡಾಲ್; ಆಮ್ಲಜನಕ ಕೊರತೆ ನೀಗಿಸಲು ತಮಿಳುನಾಡು ವೈದ್ಯನ ವಿನೂತನ ಕ್ರಮ
ಡಾ. ಶಕ್ತಿವೇಲ್ ತಿರುಪ್ಪೂರಿನಲ್ಲಿ ಕಳೆದ 7ವರ್ಷಗಳಿಂದಲೂ ಶಕ್ತಿ ಆಸ್ಪತ್ರೆಯೆಂಬ ಮಲ್ಟಿ ಸ್ಪೆಶಾಲಿಟಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಇವರೀಗ ತಮ್ಮ ನರ್ಸಿಂಗ್ ಹೋಂ ಆವರಣದಲ್ಲಿ ಆಕ್ಸಿಜನ್ ಪೂರೈಕೆಯ ಚಪ್ಪರವನ್ನೂ ನಿರ್ಮಿಸಿಕೊಂಡಿದ್ದಾರೆ.
ತಿರುಪ್ಪುರ್: ದೇಶದಲ್ಲಿ ಕೊವಿಡ್ 19 ಹೆಚ್ಚಾದ ಬೆನ್ನಲ್ಲೆ ಆಕ್ಸಿಜನ್ ಕೊರತೆ ಉಂಟಾಗಿದೆ. ಕೊವಿಡ್ ರೋಗಿಗಳಷ್ಟೇ ಅಲ್ಲದೆ ಇನ್ನಿತರ ರೋಗಗಳಿಂದ ಬಳಲುತ್ತಿರುವವರಿಗೂ ವೈದ್ಯಕೀಯ ಆಕ್ಸಿಜನ್ ಸಿಗುತ್ತಿಲ್ಲ. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆಯುಂಟಾಗಿ ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಈ ಮಧ್ಯೆ ಆಸ್ಪತ್ರೆಗೆ ದಾಖಲಾಗಿರುವ ಕುಟುಂಬದವರು, ಆಪ್ತರಿಗಾಗಿ ಒಂದಷ್ಟು ಜನ ಆಕ್ಸಿಜನ್ ಸಿಲಿಂಡರ್ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಹೀಗಿರುವಾಗ ತಮಿಳುನಾಡಿನ ತಿರುಪ್ಪೂರಿನ ವೈದ್ಯರೊಬ್ಬರು ತಮ್ಮದೇ ನರ್ಸಿಂಗ್ ಹೋಂನಲ್ಲಿ ಆಕ್ಸಿಜನ್ ಪೆಂಡಾಲ್ ನಿರ್ಮಿಸುವ ಮೂಲಕ ಆಕ್ಸಿಜನ್ ಕೊರತೆ ನೀಗಿಸಿದ್ದಾರೆ.
ಈ ವೈದ್ಯನ ಹೆಸರು ಡಾ. ಶಕ್ತಿವೇಲ್. ತಿರುಪ್ಪೂರಿನಲ್ಲಿ ಕಳೆದ 7ವರ್ಷಗಳಿಂದಲೂ ಶಕ್ತಿ ಆಸ್ಪತ್ರೆಯೆಂಬ ಮಲ್ಟಿ ಸ್ಪೆಶಾಲಿಟಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಇವರೀಗ ತಮ್ಮ ನರ್ಸಿಂಗ್ ಹೋಂ ಆವರಣದಲ್ಲಿ ಆಕ್ಸಿಜನ್ ಪೂರೈಕೆಯ ಚಪ್ಪರವನ್ನೂ ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಅಲ್ಲಿರುವ ಕೊವಿಡ್ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಕ್ಸಿಜನ್ಗೆ ಯಾವುದೇ ಸಮಸ್ಯೆಯಿಲ್ಲದಂತಾಗಿದೆ. ಮಧ್ಯರಾತ್ರಿಯಲ್ಲಿ ಬಂದು ಆಕ್ಸಿಜನ್, ಬೆಡ್ ಕೇಳಿದರೂ ಶಕ್ತಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುತ್ತಾರೆ. ತಿರಪ್ಪೂರಿನಲ್ಲಿ ಉಳಿದ್ಯಾವ ಆಸ್ಪತ್ರೆಗಳಲ್ಲೂ ಈ ವ್ಯವಸ್ಥೆ ಇಲ್ಲ.
ನಮ್ಮಲ್ಲಿ ದ್ರವರೂಪದ ಆಕ್ಸಿಜನ್ ಉತ್ಪತ್ತಿ ಮಾಡುವ ಒಂದು ಘಟಕವಿತ್ತು. ಅದರಲ್ಲಿ ಹೆಚ್ಚುವರಿ ಉಳಿಯುತ್ತಿತ್ತು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಿದರೆ ಮತ್ತಷ್ಟು ರೋಗಿಗಳಿಗೆ ಅನುಕೂಲ ಆಗುತ್ತದೆ ಎಂದು ಯೋಚಿಸಿ, ನರ್ಸಿಂಗ್ ಹೋಂನ ಕಾರ್ ಶೆಡ್ ಇರುವ ಜಾಗದಲ್ಲಿ ಆಮ್ಲಜನಕ ಉತ್ಪತ್ತಿ ಪೆಂಡಾಲ್ ಹಾಕಿದ್ದಾಗಿ ಡಾ. ಶಕ್ತಿವೇಲ್ ತಿಳಿಸಿದ್ದಾರೆ.
ಇದನ್ನೂ ಓದಿ:
ಲಾಕ್ಡೌನ್ ಸಂದರ್ಭದ ಒತ್ತಡ ನಿವಾರಣೆಗೆ ಯೋಗಾಭ್ಯಾಸ; ಮನೆಯಲ್ಲೇ ಕಳೆಯುವ ಸಮಯಕ್ಕೆ ಸಿಗಲಿದೆ ಸ್ಪೂರ್ತಿ
ನೀನು ಪ್ಯಾಂಟ್ ಆದರೂ ಹಾಕಬೇಕಿತ್ತು! ದಿನೇಶ್ ಕಾರ್ತಿಕ್ ಕಾಲೆಳೆದ ಲಿನ್ಗೆ ಖಡಕ್ ಉತ್ತರ ಕೊಟ್ಟ ವಿಕೆಟ್‌ಕೀಪರ್
Tiruppur Doctor Has Opened Oxygen Pandal in His hospital premises
Published On - 3:40 pm, Wed, 12 May 21