ಕೊವಿಡ್ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ Indian ಪದ ಬಳಸಿಲ್ಲ

B.1.617 Variant: ವಿಶ್ವ ಆರೋಗ್ಯ ಸಂಸ್ಥೆಯು ತನ್ನ 32 ಪುಟಗಳ ದಾಖಲೆಯಲ್ಲಿ ಕೊರೊನವೈರಸ್‌ನ ಬಿ .1.617 ರೂಪಾಂತರಿಯನ್ನು 'ಇಂಡಿಯನ್ ವೇರಿಯಂಟ್' ಎಂಬ ಪದ ಬಳಸಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ . ವಾಸ್ತವವಾಗಿ, ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ 'ಇಂಡಿಯನ್ 'ಎಂಬ ಪದವನ್ನು ಬಳಸಿಲ್ಲ ಎಂದು ಸರ್ಕಾರ ಹೇಳಿದೆ.

ಕೊವಿಡ್ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ Indian ಪದ ಬಳಸಿಲ್ಲ
ಪ್ರಾತಿನಿಧಿಕ ಚಿತ್ರ

ದೆಹಲಿ: ಕೊವಿಡ್ ರೂಪಾಂತರಿ B.1.617 ವೈರಾಣುವನ್ನು ಭಾರತೀಯ ರೂಪಾಂತರಿ (Indian variant) ಎಂದು ಕರೆಯುವುದನ್ನು ಭಾರತ ಸರ್ಕಾರ ಖಂಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ರೂಪಾಂತರಿ ವೈರಾಣು ಬಗ್ಗೆ ಹೇಳುವಾಗ Indian ಎಂಬ ಪದವನ್ನು ಬಳಸಿಯೇ ಇಲ್ಲ ಎಂದು ಭಾರತ ಹೇಳಿದೆ. ವೈರಸ್ ಅಥವಾ ಅದರ ಪ್ರಬೇಧಗಳನ್ನು ದೇಶದ ಹೆಸರಿನಲ್ಲಿ ಗುರುತಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.

ಹಲವಾರು ಮಾಧ್ಯಮ ವರದಿಗಳು ವಿಶ್ವ ಆರೋಗ್ಯ ಸಂಸ್ಥೆ B .1.617 ಅನ್ನು ಜಾಗತಿಕ ಕಳವಳದ ರೂಪಾಂತರಿ ಎಂದು ವರ್ಗೀಕರಿಸಿದೆ. ಈ ವರದಿಗಳಲ್ಲಿ ಕೊರೊನಾವೈರಸ್‌ನ B .1.617 ರೂಪಾಂತರಿಯನ್ನು ‘ಇಂಡಿಯನ್ ವೇರಿಯಂಟ್’ ಎಂದು ಕರೆದಿದೆ. ಈ ಮಾಧ್ಯಮ ವರದಿಗಳು ಯಾವುದೇ ಆಧಾರವಿಲ್ಲದೆ, ಮತ್ತು ಆಧಾರರಹಿತ ಭಾರತ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.


ವಿಶ್ವ ಆರೋಗ್ಯ ಸಂಸ್ಥೆಯು ತನ್ನ 32 ಪುಟಗಳ ದಾಖಲೆಯಲ್ಲಿ ಕೊರೊನವೈರಸ್‌ನ ಬಿ .1.617 ರೂಪಾಂತರಿಯನ್ನು ‘ಇಂಡಿಯನ್ ವೇರಿಯಂಟ್’ ಎಂಬ ಪದ ಬಳಸಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ . ವಾಸ್ತವವಾಗಿ, ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ‘ಇಂಡಿಯನ್ ‘ಎಂಬ ಪದವನ್ನು ಬಳಸಿಲ್ಲ ಎಂದು ಸರ್ಕಾರ ಹೇಳಿದೆ.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ವಿಶ್ವ ಆರೋಗ್ಯಸಂಸ್ಥೆ ಮೊದಲು ವೈರಾಣು ಪತ್ತೆಯಾದ ದೇಶಗಳ ಹೆಸರಿನೊಂದಿಗೆ ವೈರಸ್‌ಗಳು ಅಥವಾ ರೂಪಾಂತರಿಗಳನ್ನು ಗುರುತಿಸುವುದಿಲ್ಲ. ನಾವು ಅವರ ವೈಜ್ಞಾನಿಕ ಹೆಸರುಗಳಿಂದ ಅವರನ್ನು ಉಲ್ಲೇಖಿಸುತ್ತೇವೆ ಮತ್ತು ಸ್ಥಿರತೆಗಾಗಿ ಎಲ್ಲರೂ ಒಂದೇ ರೀತಿ ಮಾಡಲು ವಿನಂತಿಸುತ್ತೇವೆ ಎಂದಿದೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲು ಕಂಡುಬಂದ ಕೊವಿಡ್‌ನ ಬಿ .1.617 ರೂಪಾಂತರವು ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿಸಿದೆ ಅಥವಾ ಹೆಚ್ಚು ವೇಗವಾಗಿ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ. ಇದು 44 ದೇಶಗಳಲ್ಲಿ ಪತ್ತೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.


ನಾವು ಇದನ್ನು ಜಾಗತಿಕ ಮಟ್ಟದಲ್ಲಿ variant of concern ವರ್ಗೀಕರಿಸುತ್ತಿದ್ದೇವೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ, WHO ಇದನ್ನು variant of interest ” ಎಂದು ಪಟ್ಟಿ ಮಾಡಿದೆ. ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊವಿಡ್ 19 ನ ಇತರ ಮೂರು ರೂಪಾಂತರಗಳನ್ನು ಈಗಾಗಲೇ “ಕಳವಳದ ರೂಪಾಂತರಿ” ಎಂದು ವರ್ಗೀಕರಿಸಲಾಗಿದೆ.

ವೈರಸ್‌ನ ಜೀನೋಮ್‌ನಲ್ಲಿ ಎರಡು ಬದಲಾವಣೆಗಳು ಇರುವುದರಿಂದ ಬಿ 1.617  ಪ್ರಬೇಧವನ್ನು ಡಬಲ್ ರೂಪಾಂತರಿ ಎಂದು ಕರೆಯಲಾಗುತ್ತದೆ, ಇದನ್ನು E484Q ಮತ್ತು L452R ಎಂದು ಕರೆಯಲಾಗುತ್ತದೆ.
ಈ ಪ್ರಬೇಧವು ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಹೊಸ ಕೊವಿಡ್ ಪ್ರಕರಣಗಳನ್ನು ದಾಖಲೆಯ ಮಟ್ಟಕ್ಕೆ ತಳ್ಳಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ಇದನ್ನೂ ಓದಿExplainer: ಏನಿದು B.1.617 ಡಬಲ್ ರೂಪಾಂತರಿ ವೈರಾಣು? 

ಯಾವುದೇ ರೋಗ ಲಕ್ಷಣಗಳಿಲ್ಲದೆ, ಸುಳಿವೂ ನೀಡದೆ ಯುವಕರನ್ನು ಬಲಿ ಪಡೆಯುತ್ತಿದೆ ಕೊರೊನಾ; ಏನಿದು ಹ್ಯಾಪಿ ಹೈಪೋಕ್ಸಿಯಾ?