ಕುಟುಂಬ ಸಮೇತರಾಗಿ ನಾಡದೇವತೆ ಚಾಮುಂಡಿಯ ದರ್ಶನ ಪಡೆದು ಈಡುಗಾಯಿ ಹೊಡೆದ ಡಿಕೆ ಶಿವಕುಮಾರ್
ರಾಜಕೀಯವಾಗಿ ಶಿವಕುಮಾರ್ ಕೊಂಚ ಒತ್ತಡದಲ್ಲಿರುವುದಂತೂ ಸತ್ಯ. ಕರ್ನಾಟಕಕ್ಕೆ ಬಂದು ಶಾಸಕರನ್ನು ಭೇಟಿಯಾದ ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಅಧಿಕಾರ ಹಂಚಿಕೆ ವಿಷಯದಲ್ಲಿ ಏನು ಹೇಳಿದ್ದಾರೋ ಗೊತ್ತಿಲ್ಲ; ಆದರೆ, ಸಿದ್ದರಾಮಯ್ಯ ಮಾತ್ರ 5-ವರ್ಷದ ಅವಧಿಗೆ ನಾನೇ ಮುಖ್ಯಮಂತ್ರಿ ಅಂತ ಪುನಃ ಹೇಳುತ್ತಿದ್ದಾರೆ. ಅವರು ನಮ್ಮ ನಾಯಕರು, ಹೇಳಿದ್ದನ್ನು ಬೆಂಬಲಿಸಬೇಕಾಗುತ್ತದೆ ಎಂದು ಶಿವಕುಮಾರ್ ವಿಷಾದದಿಂದ ಹೇಳುತ್ತಿದ್ದಾರೆ.
ಮೈಸೂರು, ಜುಲೈ4: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಷಾಢಮಾಸದ ಎರಡನೇ ಶುಕ್ರವಾರ (second Friday) ಆಗಿರುವ ಇಂದು ತಮ್ಮ ಕುಟುಂಬದೊಂದಿಗೆ ಚಾಮುಂಡೇಶ್ವರಿ ದೇವತೆಯ ದರ್ಶನ ಪಡೆದರು. ಶಿವಕುಮಾರ್ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಬೆಟ್ಟದ ಮೇಲೆ ಬಂದಾಗ ದೇವಸ್ಥಾನದ ಆಡಳಿತ ಮಂಡಳಿ ಅವರಿಗೆ ಪುಷ್ಪಮಾಲೆ ಮತ್ತು ಶಾಲು ಹೊದಿಸಿ ಸನ್ಮಾನ ಮಾಡುವ ಮೂಲಕ ಸ್ವಾಗತಿಸಿತು. ಒಂದು ದಿನದ ಹಿಂದೆಯಷ್ಟೇ ನಂದಿ ಹಿಲ್ಸ್ ಕೆಳಭಾಗದಲ್ಲಿ ಭೋಗನಂದೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದ ಶಿವಕುಮಾರ್ ಚಾಮುಂಡಿ ಬೆಟ್ಟದಲ್ಲಿ ಈಡುಗಾಯಿ ಹೊಡೆದು ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ನಾನೇ ಐದು ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿಕೆ ಶಿವಕುಮಾರ್ ಮೊದಲ ಪ್ರತಿಕ್ರಿಯೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ