ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂಬ ಹೇಳಿಕೆ ನೀಡಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ಗೆ ಕೆಪಿಸಿಸಿ ನೋಟಿಸ್ ನೀಡಿದ್ದಾಯ್ತು. ಕೊನೆಗೆ ಖುದ್ದು ಡಿಕೆ ಶಿವಕುಮಾರ್ ಅವರೇ, ನನ್ನ ಮುಂದೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದಿದ್ದಾಯ್ತು. ಅಷ್ಟಾದರೂ ಶಾಸಕರ ಹೇಳಿಕೆಗಳು ನಿಲ್ಲುತ್ತಿಲ್ಲ. ಇದೀಗ ಕುಣಿಗಲ್ ಶಾಸಕ ಡಾ. ರಂಗನಾಥ್ ಸರದಿ. ವಿಡಿಯೋ ಇಲ್ಲಿದೆ ನೋಡಿ.
ತುಮಕೂರು, ಜುಲೈ 3: ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ, ಆದರೆ ಮಾಧ್ಯಮದವರ ಮುಂದೆ ಹೇಳುವುದಕ್ಕೆ ತಯಾರಿಲ್ಲ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಹೇಳಿದ್ದಾರೆ. ಕುಣಿಗಲ್ನಲ್ಲಿ ಮಾಧ್ಯಮ ಪ್ರತಿನಿಧಗಳ ಬಳಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ನಿಮ್ಮ ಮುಂದೆ ಹೇಳಿದರೆ ನಾನು ನೋಟಿಸ್ ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷದ ಶಿಸ್ತಿಗೆ ತಲೆಬಾಗಿಸಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲರೂ ಅದನ್ನು ಮಾಡಬೇಕು. ನಾನು ಸುರ್ಜೇವಾಲ ಭೇಟಿಗೆ ಸಮಯ ಕೊಡಿ ಎಂದು ಕೇಳಿದ್ದೇನೆ ಎಂದರು.
ನನಗೂ ಆಸೆ ಇದೆ, ಹೇಳಿಕೊಳ್ಳಲು ಬಹಳಷ್ಟು ಸಂಕಷ್ಟಗಳು ಇವೆ. ಅವುಗಳನ್ನು ಸುರ್ಜೇವಾಲ ಮುಂದೆ ವೈಯಕ್ತಿಕವಾಗಿ ಹೇಳಬೇಕು. ಕೆಳಹಂತದಲ್ಲಿರುವ ಕಾರ್ಯಕರ್ತರ ಆಸೆಯನ್ನು ಹೇಳಬೇಕಿದೆ. ಸರ್ಕಾರ ಯಾವ ರೀತಿ ಮುಂದೆ ಹೋಗಬೇಕೆಂಬ ಮಾತು ಹೇಳುತ್ತೇನೆ. ರಣದೀಪ್ ಸುರ್ಜೇವಾಲ ಭೇಟಿಗೆ ಬರಲು ಹೇಳಿದ್ದಾರೆ ಎಂದು ಅವರು ಹೇಳಿದರು.
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

