ಯಾವುದೇ ರೋಗ ಲಕ್ಷಣಗಳಿಲ್ಲದೆ, ಸುಳಿವೂ ನೀಡದೆ ಯುವಕರನ್ನು ಬಲಿ ಪಡೆಯುತ್ತಿದೆ ಕೊರೊನಾ; ಏನಿದು ಹ್ಯಾಪಿ ಹೈಪೋಕ್ಸಿಯಾ?
ಸಣ್ಣ ರೋಗ ಲಕ್ಷಣಗಳನ್ನು ಹೊಂದಿರುವವರು ಹಾಗೂ ನೋಡಲು ಆರೋಗ್ಯವಾಗಿರುವವರೂ ಕೂಡ ನೋಡು ನೋಡುತ್ತಿದ್ದಂತೆ ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಇದಕ್ಕೆ ಕಾರಣವೇನು?
ಬೆಂಗಳೂರು: ಮಹಾಮಾರಿ ಕೊರೊನಾ 2ನೇ ಅಲೆ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನು ಎರಡನೇ ಅಲೆಯಲ್ಲಿ ಯುವಕರು ಹೆಚ್ಚಾಗಿ ಮೃತಪಡುತ್ತಿದ್ದಾರೆ. ಸಣ್ಣ ರೋಗ ಲಕ್ಷಣಗಳನ್ನು ಹೊಂದಿರುವವರು ಹಾಗೂ ನೋಡಲು ಆರೋಗ್ಯವಾಗಿರುವವರೂ ಕೂಡ ನೋಡು ನೋಡುತ್ತಿದ್ದಂತೆ ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಇದಕ್ಕೆ ಕಾರಣವೇನು? ಎಂದು ನೋಡಿದರೆ ಅದೇ ಹ್ಯಾಪಿ ಹೈಪೋಕ್ಸಿಯಾ ವೈದ್ಯಕೀಯ ಪರಿಭಾಷೆಯಲ್ಲಿ ಸೈಲೆಂಟ್ ಹೈಪೋಕ್ಸಿಯಾ ಎಂದು ಕರೆಯುತ್ತಾರೆ. ಇದು ಯಾವುದೇ ಸುಳಿವು ನೀಡದೆ ಸೈಲೆಂಟ್ ಆಗಿ ಜನರನ್ನು ಬಲಿಪಡೆಯುತ್ತಿದೆ.
ಏನಿದು ಹ್ಯಾಪಿ ಹೈಪೋಕ್ಸಿಯಾ? ಸುಳಿವಿಲ್ಲದೆ ಸಾವು ಬರೋದೆ ಹ್ಯಾಪಿ ಹೈಪೋಕ್ಸಿಯಾ. ಎಲ್ಲವೂ ಚೆನ್ನಾಗಿರುತ್ತೆ ಹಠಾತ್ ಆಗಿ ಸ್ಯಾಚುರೇಶನ್ ಕಡಿಮೆಯಾಗಿ ಸಾಯ್ತಾ ಇದ್ದಾರೆ. ಈ ಸೋಂಕಿತರಿಗೆ ಕೊವಿಡ್ ಪಾಸಿಟಿವ್ ಇರುತ್ತೆ ಆದ್ರೆ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ರೋಗ ಲಕ್ಷಣಗಳಿಲ್ಲ ಅಂತ ಸೋಂಕಿತರು ಮನೆಯಲ್ಲೇ ಹೋಂ ಕ್ವಾರಂಟೈನ್ ಆಗುತ್ತಾರೆ. ಆದ್ರೆ ಮನೆಯಲ್ಲೇ ಇರೋ ಕೆಲ ಸೋಂಕಿತರು ಸಡನ್ ಆಗಿ ಮೃತಪಡುತ್ತಿದ್ದಾರೆ. ಹೀಗೆ ಗುಣಲಕ್ಷಣ ಇಲ್ಲದೆ ಹ್ಯಾಪಿಯಾಗಿರೋರು ಸಾಯ್ತಾ ಇರೋ ಕಾರಣಕ್ಕೆ ಇದನ್ನ ಹ್ಯಾಪಿ ಹೈಪೋಕ್ಸಿಯಾ ಎಂದು ಕರೆಯಲಾಗುತ್ತಿದೆ.
ಯಾರೆಲ್ಲ ಹ್ಯಾಪಿ ಹೈಪೋಕ್ಸಿಯಾಗೆ ಟಾರ್ಗೆಟ್ ಆಗ್ತಾರೆ? ಬಹುತೇಕ ಯುವಕರೇ ಇದಕ್ಕೆ ಟಾರ್ಗೆಟ್ ಆಗ್ತಾ ಇದ್ದಾರೆ. 45 ವರ್ಷ ವಯಸ್ಸಿನ ಒಳಗಿನವರು ಹೆಚ್ಚಾಗಿ ಸಾಯ್ತಾ ಇದ್ದಾರೆ. ಏನು ಆಗೋದಿಲ್ಲ ಅನ್ನೋ ಮನೋಭಾವ ಹೆಚ್ಚಾಗಿರೋದ್ರಿಂದ ಗುಣ ಲಕ್ಷಣ ಇಲ್ಲ, ಆಸ್ಪತ್ರೆಗೂ ಹೋಗೋ ಅವಶ್ಯಕತೆ ಇಲ್ಲ ಎಂದು ನಿರ್ಲಕ್ಷ್ಯ ಮಾಡಿ. ಆಕ್ಸಿಜನ್ ಪ್ರಮಾಣ ಎಷ್ಟಿದೆ ಅನ್ನೋ ಬಗ್ಗೆ ಗಮನ ಹರಿಸದೇ ವೈದ್ಯರ ಬಳಿ ಹೋಗದೇ ಇರುವುದುರಿಂದ ಯುವಕರೇ ಹೆಚ್ಚಾಗಿ ಸಾಯುತ್ತಿದ್ದಾರೆ.
ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಉಸಿರಾಟಕ್ಕೆ ತೊಂದರೆ ಉಂಟಾಗಿ ಆಕ್ಸಿಜನ್ ಸಪ್ಲೈ ಇಲ್ಲದೆ ಯುವಕರು ಬಲಿಯಾಗುತ್ತಿದ್ದಾರೆ. ಆಕ್ಸಿಜನ್ ಪ್ರಮಾಣ ಶೇ 95 ಕ್ಕಿಂತ ತೀರ ಕಡಿಮೆಯಾದರೆ ಸಾವು ಸಂಭವಿಸುತ್ತೆ. ಪ್ರತಿ ಬಾರಿ ಆಕ್ಸಿಮೀಟರ್ನಲ್ಲಿ ನಿಮ್ಮ ಆಕ್ಸಿಜನ್ ಪ್ರಮಾಣ ಚೆಕ್ ಮಾಡ್ತಾ ಇರಿ. ಕಡಿಮೆಯಾದ್ರೆ ಸಾವು ಸಂಭವಿಸಬಹುದು. ಹ್ಯಾಪಿ ಹೈಪೋಕ್ಸಿಯಾಗೆ ಗುರಿಯಾಗುವವರಿಗೆ ಒಂದೇ ಸಾರಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಸಾವನ್ನಪ್ಪೊತ್ತಿದ್ದಾರೆ.
ಯಾಕೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತೆ? ಉಸಿರಾಟದ ತೊಂದರೆ ಶುರುವಾದ್ರೆ ಆಮ್ಲಜನಕ ನಿಗದಿತ ಪ್ರಮಾಣದಲ್ಲಿ ಸಿಗೋದಿಲ್ಲ. ಶ್ವಾಸಕೋಶದಲ್ಲಿ ಆಕ್ಸಿಜನ ಪ್ರಮಾಣ ಕಡಿಮೆಯಾಗುತ್ತೆ. ಹೀಗಾಗಿ ರಕಜ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತೆ. ಈ ರೀತಿ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದ್ರೆ ಆರೋಗ್ಯ ಹದಗೆಡುತ್ತೆ. ಆಸ್ಪತ್ರೆಯಲ್ಲಿ ಬೆಡ್ ಹುಡುಕಾಡೋವಷ್ಟರ ಹೊತ್ತಿಗೆ ಸಾವು ಸಂಭವಿಸುತ್ತೆ.
ಹ್ಯಾಪಿ ಹೈಪೋಕ್ಸಿಯಾದಿಂದ ತಪ್ಪಿಸಿಕೊಳ್ಳೋದು ಹೇಗೆ? ಕೊರೊನಾ ಪಾಸಿಟಿವ್ ಬಂದು ಮನೆಯಲ್ಲಿಯೇ ಇರೋರು ಪ್ರತಿ ನಿತ್ಯ ಐದಾರು ಬಾರಿ ಪಲ್ಸ್ ಆಕ್ಸಿಮೀಟರ್ ಮೂಲಕ ಆಕ್ಸಿಜನ್ ಪ್ರಮಾಣ ಚೆಕ್ ಮಾಡಿಕೊಳ್ಳಬೇಕು. ಶೇಕಡ 95 ಕ್ಕಿಂತ ಆಕ್ಸಿಜನ್ ಪ್ರಮಾಣ ಪದೇ ಪದೇ ಕಡಿಮೆಯಾಗ್ತಾ ಇದ್ರೆ ಆಸ್ಪತ್ರೆಗೆ ತೆರಳಬೇಕು.
ಇದನ್ನೂ ಓದಿ: Coronavirus India Update: ಒಂದೇ ದಿನ 4,205 ಕೊವಿಡ್ ರೋಗಿಗಳು ಸಾವು, ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ
Published On - 3:54 pm, Wed, 12 May 21