ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧದ ಪಿಐಎಲ್ ರಾಜಕೀಯ ಪ್ರೇರಿತವಾದದ್ದು; ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್

Karnataka High Court On Bed Scam: ಯುವ ಕಾಂಗ್ರೆಸ್‌ನ ಶ್ರೀವತ್ಸ ವೈ.ಬಿ. ಸಲ್ಲಿಸಿದ್ದ ಪಿಐಎಲ್​ನ ವಿಚಾರಣೆ ನಡೆಸಲು ಅಸಮ್ಮತಿ ಸೂಚಿಸಿರುವ ಕೋರ್ಟ್, ಇದು ರಾಜಕೀಯ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ. ಬೆಡ್ ಬ್ಲಾಕಿಂಗ್ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಹೈಕೋರ್ಟ್‌ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದೆ.

ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧದ ಪಿಐಎಲ್ ರಾಜಕೀಯ ಪ್ರೇರಿತವಾದದ್ದು; ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್
ಬೆಡ್ ಬ್ಲಾಕಿಂಗ್ ಆರೋಪದ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
Follow us
guruganesh bhat
|

Updated on:May 12, 2021 | 3:50 PM

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ಆರೋಪ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧ 17 ವಾರ್ ರೂಮ್ ನೌಕರರ ಅಮಾನತು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ನಿರಾಕರಿಸಿದೆ. ಯುವ ಕಾಂಗ್ರೆಸ್‌ನ ಶ್ರೀವತ್ಸ ವೈ.ಬಿ. ಸಲ್ಲಿಸಿದ್ದ ಪಿಐಎಲ್​ನ ವಿಚಾರಣೆ ನಡೆಸಲು ಅಸಮ್ಮತಿ ಸೂಚಿಸಿರುವ ಕೋರ್ಟ್, ಇದು ರಾಜಕೀಯ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ. ಬೆಡ್ ಬ್ಲಾಕಿಂಗ್ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಹೈಕೋರ್ಟ್‌ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಹೀಗಾಗಿ ರಾಜಕೀಯ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದೆಮಯ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಅಕ್ರಮವಾಗಿ ಬೆಡ್ ಬ್ಲಾಕಿಂಗ್ ಮಾಡುತ್ತಿರುವ ವಿಚಾರದ ಬಗ್ಗೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು ಎಂದು ಪೊಲೀಸರಿಗೆ ಹೈಕೋರ್ಟ್ ಈಗಾಗಲೇ ಸೂಚನೆ ನೀಡಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯ ಪ್ರಗತಿ ಕುರಿತು ಹೈಕೋರ್ಟ್ ಪರಿಶೀಲನೆ ನಡೆಸಿತು. ಪ್ರಕರಣ ಬಹಳ ಸೂಕ್ಷ್ಮ ಹಾಗೂ ಗಂಭೀರವಾಗಿದೆ. ಸಿಸಿಬಿ ಇನ್ಸ್‌ಪೆಕ್ಟರ್ ಮಾತ್ರ ತನಿಖೆ ನಡೆಸುತ್ತಿದ್ದಾರೆ. ಅನುಭವಿ IPS ಆಧಿಕಾರಿ ತನಿಖೆ ಉಸ್ತುವಾರಿ ವಹಿಸಬೇಕು. ಸೈಬರ್ ತಜ್ಞರು ತನಿಖಾ ತಂಡದಲ್ಲಿರಬೇಕು ಎಂದು ಹೈಕೋರ್ಟ್ ಸಿಜೆ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತು.

ಏನಿದು ಬೆಡ್ ಬ್ಲಾಕಿಂಗ್ ಪ್ರಕರಣ? ಕೆಲವು ದಿನಗಳ ಮುನ್ನ ಬೆಂಗಳೂರು ದಕ್ಷಿಣ ವಲಯದ ಕೊವಿಡ್ ವಾರ್ ರೂಂಗೆ ಹಠಾತ್ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ಸಂಗಡಿಗರು, ಬೆಡ್ ಬ್ಲಾಕಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದರು.

ಎ ಸಿಂಪ್ಟಮ್ಯಾಟಿಕ್ ಬಂದಿರುವ ವ್ಯಕ್ತಿಯ ಹೆಸರಿನಲ್ಲಿ ಬೆಡ್ ಬುಕ್ ಮಾಡಲಾಗುತ್ತೆ. 12 ಗಂಟೆಗಳ ನಡುವೆ ಯಾರ ಹೆಸರಲ್ಲಿ ಬೆಡ್ ಬುಕ್ ಆಗಿದೆಯೋ ಅವರು ಆಸ್ಪತ್ರೆಗೆ ದಾಖಲಾಗದಿದ್ದರೆ ಆ ಬೆಡ್ ಅವರ ಹೆಸರಿಂದ ಅನ್ ಬ್ಲಾಕ್ ಆಗುತ್ತೆ. ಆದರೆ 12 ಗಂಟೆಯ ಒಳಗೆ ವಾರ್ ರೂಂನಲ್ಲಿ ಕುಳಿತವರು ಹೊರಗಿನ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿ ಅಂಥವರಿಗೆ ಬೆಡ್ ಕೊಡ್ತಾರೆ. ಎ ಸಿಂಪ್ಟಮ್ಯಾಟಿಕ್ ಇರುವ ವ್ಯಕ್ತಿಯ ಹೆಸರಲ್ಲಿ ಬೆಡ್ ಬುಕ್ ಆಗಿರುವ ಕುರಿತು ಅಂತಹ ವ್ಯಕ್ತಿಗೇ ತಿಳಿದಿರುವುದಿಲ್ಲ. ಅಂತಹ ಹಲವು ದಾಖಲೆಗಳು ನಮ್ಮಲ್ಲಿವೆ. ಓರ್ವ ವ್ಯಕ್ತಿಗೆ ಕೊರೊನಾ ಬಂದು 20 ದಿನಗಳ ನಂತರ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವಾರ್ ರೂಂ ಏಜೆನ್ಸಿಗಳು ಬೆಡ್​ಗಲ ಕೃತಕ ಅಭಾವ ಸೃಷ್ಟಿಸುತ್ತಿವೆ ಎಂದು ಅವರು ದೂರಿದ್ದರು

ಬಿಬಿಎಂಪಿಯ ಅಧಿಕಾರಿಗಳ ಈ ಅವ್ಯವಹಾರದ ಬಗ್ಗೆ ರಾತ್ರಿ 2 ಗಂಟೆ 3 ಗಂಟೆ ವರೆಗೆ ಬೆನ್ನು ಬಿದ್ದು ಈ ಡೇಟಾ ಸಂಗ್ರಹಿಸಿದ್ದೇವೆ. ಯಾವ ಅಧಿಕಾರಿಗಳು ಸರಿಯಾದ ವಿವರ ಕೊಡುತ್ತಿಲ್ಲ. 5,000 ಬೆಡ್​ಗಳ ಮಾಹಿತಿ ಸಿಗುತ್ತಿಲ್ಲ. ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗಿ 12 ಗಂಟೆ ಒಂದು ನಿಮಿಷಕ್ಕೆ ರೋಗಿ ದಾಖಲಾಗುತ್ತಾನೆ. ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದರು.

ಆ ನಂತರ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೆಸರೂ ಕೇಳಿಬಂದಿತ್ತು. ಈ ಎಲ್ಲ ಆಯಾಮದ ಕುರಿತು ಸದ್ಯ ತೀವ್ರತರದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಕೇವಲ 100 ಘಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ ಮಹತ್ವದ 4 ಸುಧಾರಣೆ: ಸಂಸದ ತೇಜಸ್ವಿ ಸೂರ್ಯ

ಯಾವುದೇ ಸಮುದಾಯವನ್ನೂ ಗುರಿಯಾಗಿಸಿಲ್ಲ: ಸಂಸದ ತೇಜಸ್ವಿ ಸೂರ್ಯ

Karnataka High Court rejects PIL on MP Tejasvi Surya on Bengaluru Bed blocking scam because its political

Published On - 3:20 pm, Wed, 12 May 21