ದಾವಣಗೆರೆ: ಅಗತ್ಯ ವಸ್ತು ಖರೀದಿಗೆ ತೆರಳಿದ್ದ ಶಿಕ್ಷಕನಿಗೆ ಪೊಲೀಸರಿಂದ ಹಲ್ಲೆ
ಶಿಕ್ಷಕನಿಗೆ ಲಾಠಿ ಏಟು ನೀಡಿದ ಜೊತೆಗೆ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತನಗಾದ ಅನ್ಯಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕ ರಾಜಿಖಾವುಲ್ಲಾ ಹಂಚಿಕೊಂಡಿದ್ದಾರೆ. ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಅಗತ್ಯವಸ್ತುಗಳನ್ನು ಖರೀದಿಸಲು ಮುಂದಾಗಿದ್ದ ಶಿಕ್ಷಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಮಲೇಬೆನ್ನೂರಿನಲ್ಲಿ ಶಿಕ್ಷಕ ರಾಜಿಖಾವುಲ್ಲಾ ಎಂಬುವವರಿಗೆ ಮಲೇಬೆನ್ನೂರ ಠಾಣೆ ಪೊಲೀಸ್ ಸಿಬ್ಬಂದಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಶಿಕ್ಷಕನಿಗೆ ಲಾಠಿ ಏಟು ನೀಡಿದ ಜೊತೆಗೆ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತನಗಾದ ಅನ್ಯಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕ ರಾಜಿಖಾವುಲ್ಲಾ ಹಂಚಿಕೊಂಡಿದ್ದಾರೆ. ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಸಿಕಾ ಕೇಂದ್ರದ ಬಳಿ ಜನರ ಗಲಾಟೆ ದಾವಣಗೆರೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಲಸಿಕಾ ಕೇಂದ್ರದಲ್ಲಿ ಜನರು ಗಲಾಟೆ ಮಾಡಿದ್ದಾರೆ. ನಮಗೆ ಇಂದೇ ಲಸಿಕೆ ನೀಡುವುದಾಗಿ ಮೆಸೇಜ್ ಬಂದಿದೆ. ಹೀಗಾಗಿ ಇಂದೇ ಕೊವಿಡ್ ಲಸಿಕೆ ನೀಡಬೇಕೆಂದು ಜನ ಪಟ್ಟು ಬಿದ್ದಿದ್ದಾರೆ. ಒಂದು ಕೇಂದ್ರದಲ್ಲಿ ಆರೋಗ್ಯ ಇಲಾಖೆ ಕೇವಲ 150 ಜನರಿಗೆ ಮಾತ್ರ ವ್ಯಾಕ್ಸಿನ್ ನೀಡುತ್ತದೆ. ಮೊದಲು ರಿಜಿಸ್ಟರ್ ಮಾಡಿದ ಜನರು ಬೆಳಗ್ಗೆಯಿಂದ ಸಾಮಾಜಿಕ ಅಂತರವಿಲ್ಲದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.
ನೂಕುನುಗ್ಗಲು ಮಾಡದೆ ಲಸಿಕೆ ಹಾಕಿಸಿಕೊಳ್ಳಲು ಎಂ.ಪಿ.ರೇಣುಕಾಚಾರ್ಯ ಮನವಿ ಜಿಲ್ಲೆಯ ಹೊನ್ನಾಳಿ ಕೊವಿಡ್ ಆಸ್ಪತ್ರೆಗೆ ಭೇಟಿ ನೀಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋಂಕಿತರಿಗೆ ಉಪ್ಪಿಟ್ಟು, ಕೇಸರಿಬಾತ್ ತಿಂಡಿಯನ್ನು ನೀಡಿದರು. 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ ಅವರು ನೂಕುನುಗ್ಗಲು ಮಾಡದೆ ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದರು. ಬೇರೆ ತಾಲೂಕಿನಿಂದ ಹೊನ್ನಾಳಿಯಲ್ಲಿ ವ್ಯಾಕ್ಸಿನ್ ಬುಕ್ ಮಾಡಿದ್ದು, ಅಂತಹವರಿಗೆ ವ್ಯಾಕ್ಸಿನ್ ಹಾಕದಂತೆ ಶಾಸಕರು ತಿಳಿಸಿದರು.
ಇದನ್ನೂ ಓದಿ
ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಡಿಯೋ ವೈರಲ್; ಕಾಂಗ್ರೆಸ್ ಸದಸ್ಯೆಯನ್ನು ವಶಕ್ಕೆ ಪಡೆದ ಬೆಂಗಳೂರು ಸೈಬರ್ ಪೊಲೀಸರು
ಬೆಂಗಳೂರಿನಲ್ಲಿ ಕೊರೊನಾ ತಡೆಯಲು ಹೊಸ ತಂತ್ರ: ನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಿರು ಚಿಕಿತ್ಸಾ ಕೇಂದ್ರಗಳು
(Police have assaulted a teacher who had gone to buy the essentials at Davanagere)