ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಡಿಯೋ ವೈರಲ್; ಕಾಂಗ್ರೆಸ್​ ಸದಸ್ಯೆಯನ್ನು ವಶಕ್ಕೆ ಪಡೆದ ಬೆಂಗಳೂರು ಸೈಬರ್​ ಪೊಲೀಸರು

ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಡಿಯೋ ವೈರಲ್; ಕಾಂಗ್ರೆಸ್​ ಸದಸ್ಯೆಯನ್ನು ವಶಕ್ಕೆ ಪಡೆದ ಬೆಂಗಳೂರು ಸೈಬರ್​ ಪೊಲೀಸರು
ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಡಿಯೋ ವೈರಲ್; ಕಾಂಗ್ರೆಸ್​ ಸದಸ್ಯೆಯನ್ನು ವಶಕ್ಕೆ ಪಡೆದ ಬೆಂಗಳೂರು ಸೈಬರ್​ ಪೊಲೀಸರು

ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್​ ಪಂತ್​ ಮತ್ತು ಬೆಂಗಳೂರು ಸಿಟಿ ಪೊಲೀಸರು ಸಹ ಆ ವಿಡಿಯೋವನ್ನು ಪೋಸ್ಟ್​ ಮಾಡಿ, ಕಿಡಿಗೇಡಿಗಳನ್ನು ಎಚ್ಚರಿಸಿದ್ದರು. ಫೇಸ್​ಬುಕ್​ ಸಹ ಕಾಂಗ್ರೆಸ್​ ಸದಸ್ಯೆ ಪದ್ಮಾ ಹರೀಶ್ ಅವರು ಪೋಸ್ಟ್ ಮಾಡಿದ್ದ ವಿಡಿಯೋವನ್ನು ಮರೆಮಾಚಿತ್ತು.

sadhu srinath

|

May 12, 2021 | 1:34 PM

ಬೆಂಗಳೂರು: ಬೆಂಗಳೂರು ಸೈಬರ್​ ಪೊಲೀಸರು ಫೀಲ್ಡಿಗೆ ಇಳಿದು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪದ್ಮಾ ಹರೀಶ್ ಆರೋಪಿ. ಈಕೆ ಬೆಂಗಳೂರು ಕಾಂಗ್ರೆಸ್​ ಸದಸ್ಯೆ. ಪೊಲೀಸರು ಹಲ್ಲೆ ಮಾಡಿದ್ದಾರೆಂಬ ಎಂಬ ವಿಡಿಯೋವೊಂದನ್ನು ಸುಖಾಸುಮ್ಮನೆ ಪದ್ಮಾ ಹರೀಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದರು. ಅದನ್ನು ಗಂಭೀರವಾಗಿ ತೆಗೆದುಕೊಂಡ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹಳೆಯ ವಿಡಿಯೋ ಹರಿಯಬಿಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.

ಕಿಡಿಗೇಡಿಗಳಿಗೆ ಎಚ್ಚರಿಕೆ ರವಾನೆ: ತಕ್ಷಣ ಎಚ್ಚೆತ್ತ ಸೌತ್ ಸಿಇಎನ್ ಠಾಣೆಯ ಸೈಬರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿದ್ದಾರೆ. ಆಗ ಅದು 2020ರ ಏಪ್ರಿಲ್‌ನಲ್ಲಿ ಮುಂಬೈನಲ್ಲಿ ಪೊಲೀಸರಿಂದ ನಡೆದಿದ್ದ ಹಲ್ಲೆ ಎಂಬುದು ಗೊತ್ತಾಗಿದೆ. ಆದರೆ ಅದೇ ವಿಡಿಯೋಗೆ ಕನ್ನಡದಲ್ಲಿ ಹಿನ್ನೆಲೆ ಧ್ವನಿ ನೀಡಿದ್ದ ಕಿಡಿಗೇಡಿಗಳು ಅದಕ್ಕೆ ನಮ್ಮ ಪ್ರಾದೇಶಿಕತೆಯ ಟಚ್​ ನೀಡಿದ್ದರು. ಫೇಸ್ ಬುಕ್ ನಲ್ಲಿ ಅದನ್ನು ಪೋಸ್ಟ್​ ಸಹ ಮಾಡಿದ್ದರು. ಕೊನೆಗೆ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಸಂಬಂಧ ಸಕಾರಣವಿಲ್ಲದೆ, ಉದ್ದೇಶಪೂರ್ವಕವಾಗಿ ಹಳೆ ವಿಡಿಯೋಗೆ ಧ್ವನಿ ನೀಡಿ ವಿಡಿಯೋ ಹಾಕಿದ್ದ ಪದ್ಮಾ ಹರೀಶ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೀಗಿ ಅನಗತ್ಯವಾಗಿ ಸಕ್ರಿಯವಾಗಿರುವ ಕಿಡಿಗೇಡಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್​ ಪಂತ್​ ಮತ್ತು ಬೆಂಗಳೂರು ಸಿಟಿ ಪೊಲೀಸರು ಸಹ ಆ ವಿಡಿಯೋವನ್ನು ಪೋಸ್ಟ್​ ಮಾಡಿ, ಕಿಡಿಗೇಡಿಗಳನ್ನು ಎಚ್ಚರಿಸಿದ್ದರು. ಫೇಸ್​ಬುಕ್​ ಸಹ ಕಾಂಗ್ರೆಸ್​ ಸದಸ್ಯೆ ಪದ್ಮಾ ಹರೀಶ್ ಅವರು ಪೋಸ್ಟ್ ಮಾಡಿದ್ದ ವಿಡಿಯೋವನ್ನು ಮರೆಮಾಚಿತ್ತು.

ಸುದ್ದಿ ಪರಿಶೀಲಿಸಿ ಶೇರ್ ಮಾಡಿ!! ಎಂದು ಸ್ವತಃ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್​ ಪಂತ್​ ಅವರು ಟ್ವೀಟ್​ ಮಾಡಿ ಎಚ್ಚರಿಸಿದ್ದರು. ಒಬ್ಬ ವ್ಯಕ್ತಿಯನ್ನು ಸುತ್ತುವರಿದು ಪೊಲೀಸ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಮಹಿಳೆ ಅದನ್ನು ಕರ್ನಾಟಕ ಲಾಕ್ಡೌನ್ ಸಮಯದಲ್ಲಿ ನಡೆದಿದ್ದು ಎಂದು ವಿವರಿಸುತ್ತಾ ಇರುವುದು ವಿಡಿಯೋದಲ್ಲಿ ಗಮನಿಸಬಹುದು.

ಈ ಮೂಲಕ ತಿಳಿಸುವುದೇನೆಂದರೆ, ಆ ದೃಶ್ಯದಲ್ಲಿರುವುದು ಕರ್ನಾಟಕ ಪೊಲೀಸ್ ಅಲ್ಲ, ಆ ಘಟನೆ ಏಪ್ರಿಲ್ 3,2020 ಮುಂಬೈಯಲ್ಲಿ ನಡೆದಿದೆ. ಈ ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು.ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು ಎಂದು ಪೊಲೀಸ್ ಆಯುಕ್ತ ಕಮಲ್​ ಪಂತ್​ ಅವರು ಸೂಚಿಸಿದ್ದರು.

https://www.facebook.com/464946996873402/posts/4355717941129602/?sfnsn=wiwspmo

(bengaluru south cen cyber police take congress member padma harish into custody on fake video post) ಅಡಿಕೆ ಮಾರಾಟಗಾರರಿಂದ 26 ಲಕ್ಷ ರೂ. ದರೋಡೆ ಪ್ರಕರಣ: ಇನ್​ಸ್ಪೆಕ್ಟರ್​ ಅಮಾನತು

Follow us on

Related Stories

Most Read Stories

Click on your DTH Provider to Add TV9 Kannada